ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಗೆಳೆಯ! 14ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಯುವತಿ

death jaipura
Published on

ಅಹಮದಾಬಾದ್‌: 14 ನೇ ಮಹಡಿಯಿಂದ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಹಮದಾಬಾದ್‌ನ ಚಂದಖೇಡಾ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಪ್ರಿಯಕರ ಮೋಹಿತ್ ಮಕ್ವಾನಾ ಮತ್ತು ಆತನ ಸ್ನೇಹಿತ ಅಶ್ಲೀಲ ವೀಡಿಯೊ ತೋರಿಸಿ ಆಕೆಗೆ ಬ್ಲಾಕ್‌ಮೇಲ್ ಮಾಡಿದ್ದಾರೆ. ಕಿರುಕುಳದಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ.

ಚಂದಖೇಡಾ ನಿವಾಸಿಯಾಗಿರುವ ಯುವತಿಯೊಬ್ಬಳು ಮೋಹಿತ್ ಮಕ್ವಾನಾ ಎಂಬ ಯುವಕನ ಜತೆ ಸಂಬಂಧದಲ್ಲಿದ್ದಳು. ಮೋಹಿತ್ ಮತ್ತು ಅವನ ಸ್ನೇಹಿತನೊಬ್ಬ ಹುಡುಗಿಯ ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾರೆ. ಈ ವಿಡಿಯೋ ಕುರಿತು ಹುಡುಗಿ ಈ ಹಿಂದೆ ಸೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಆಕೆಯ ಗೆಳೆಯ ಮೋಹಿತ್ ಸಮ್ಮುಖದಲ್ಲಿ ವಿಡಿಯೋವನ್ನು ಡಿಲೀಟ್​​ ಕೂಡಾ ಮಾಡಿಸಿದ್ದರು ಎಂದು ತಿಳಿದುಬಂದಿದೆ.

ಆದರೆ, ಅದಾದ ನಂತರವೂ ಆರೋಪಿಗಳು ಮತ್ತೆ ಹುಡುಗಿಯನ್ನು ಬ್ಲಾಕ್‌ಮೇಲ್ ಮಾಡುತ್ತಲೇ ಇದ್ದರು. ಇದಕ್ಕೂ ಮೊದಲು, ಹುಡುಗಿ ತನ್ನ ಪ್ರಿಯಕರನಿಗೆ 6,000 ರೂ. ಮತ್ತು ತನ್ನ ಚಿನ್ನದ ಸರವನ್ನು ಸಹ ನೀಡಿದ್ದಳು. ಆದರೆ ಅವನ ಕಿರುಕುಳ ನಿಲ್ಲದಿದ್ದಾಗ, ಅವಳು ಧೈರ್ಯ ಕಳೆದುಕೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನೂ ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net