ತುಪ್ಪದ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು?; ಇದು ತೂಕ ಇಳಿಕೆಗೆ ಅನುಸರಿಸುತ್ತಿರುವ ಸದ್ಯದ​ ಟ್ರೆಂಡ್​ ..

Untitled-design-2024-09-15T200756.423
Published on

ಪ್ರಸ್ತುತ ಜೀವನಶೈಲಿಯಲ್ಲಿ ಆರೋಗ್ಯ, ಸೌಂದರ್ಯ, ಫಿಟ್​ನೆಸ್​​​ಗೆ ಸಂಬಂಧಿಸಿದಂತೆ ಯಾವುದೇ ಟ್ರೆಂಡಿಂಗ್​​ ವಿಷಯ ಬಂದರೆ ಅದನ್ನು ಅನುಸರಿಸುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಉತ್ತಮ ಆರೋಗ್ಯಕ್ಕಾಗಿ ಹಾಗೂ ತೂಕ ಇಳಿಸಲು ಟ್ರೇಂಡ್ ಆಗಿರುವುದು ತುಪ್ಪದ ಚಹಾ. ಹೌದು ನೀವು ಸರಿಯಾಗಿ ಓದಿದ್ದೀರಿ, ತುಪ್ಪದ ಚಹಾ ಅಥವಾ ತುಪ್ಪದ ಟೀ. ಪ್ರಸ್ತುತ ತುಪ್ಪದ ಚಹಾವು ಆರೋಗ್ಯ ಪ್ರವೃತ್ತಿಯಾಗಿ ಜನಪ್ರಿಯತೆ ಪಡೆಯುತ್ತಿದೆ. ತುಪ್ಪದ ಬಗ್ಗೆ ವಿಶೇಷವಾಗಿ ಹೇಳುವುದೇನು ಇಲ್ಲ. ಶತಮಾನಗಳಿಂದ ಆಯುರ್ವೇದದ ಮೂಲಧಾರವಾಗಿದೆ. ಇದು ಅಡುಗೆಗೆ ಸೂಕ್ತವಾಗಿರುವುದರ ಜತೆಗೆ ವಿಟಮಿನ್ ಎ, ಡಿ, ಇ ಮತ್ತು ಕೆ ಸೇರಿದಂತೆ ಪೋಷಕಾಂಶಗಳನ್ನು ಒಳಗೊಂಡಿದೆ.

ತುಪ್ಪದ ಚಹಾವು ಒಂದು ಚಮಚ ತುಪ್ಪವನ್ನು ಚಹಾದೊಂದಿಗೆ ಮಿಶ್ರಣ ಮಾಡಿ ಸೇವಿಸುವುದಾಗಿದೆ. ಇದರ ಜತಗೆ ಅಗತ್ಯವಿದ್ದರೆ ನಿಮ್ಮ ಆದ್ಯತೆಗೆ ಅನುಗುಣವಾಗಿ ಮಸಾಲೆಗಳು, ಸಿಹಿಯನ್ನು ಸೇರ್ಪಡಿಸಿಕೊಳ್ಳಬಹುದು. ತುಪ್ಪದ ಚಹಾ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.

  • ತುಪ್ಪವು ಆರೋಗ್ಯಕರ ಕೊಬ್ಬಿನ ಮೂಲವಾಗಿದೆ. ಇದು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೆಲ್ಯುಲಾರ್ ಆರೋಗ್ಯವನ್ನು ಕಾಪಾಡುತ್ತದೆ. ಸಣ್ಣ ಸರಪಳಿಯ ಕೊಬ್ಬಿನಾಮ್ಲ ಹೊಂದಿರುವುದರಿಂದ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ತುಪ್ಪದಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ತುಪ್ಪವನ್ನು ಚಹಾದೊಂದಿಗೆ ಸೇರಿಸಿ ಸೇವಿಸಿದಾಗ ತುಪ್ಪವು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
  • ತುಪ್ಪದ ಚಹಾ ಸೇವಿಸುವುದರಿಂದ ಹಸಿವಾಗುವುದು ಕಡಿಮೆಯಾಗುತ್ತದೆ. ಹೊಟ್ಟೆ ತುಂಬಿರುವ ರೀತಿ ಅನುಭವವಾಗುತ್ತದೆ. ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವುದುರಿಂದ ಅಗತ್ಯ ಶಕ್ತಿಯನ್ನು ನೀಡುತ್ತದೆ. ಸ್ವಲ್ಪ ಹಸಿವು ಹೊಂದಿರುವವರಿಗೆ ಅಗತ್ಯವಿರುವ ಕ್ಯಾಲೊರಿಗಳನ್ನು ಪಡೆಯಲು ಸಹಾಯ ಮಾಡುತ್ತದೆ.
  • ತುಪ್ಪದ ಚಹಾ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಹಾದಿಂದ ಕೆಫೀನ್ ಮತ್ತು ತುಪ್ಪದಿಂದ ಆರೋಗ್ಯಕರ ಕೊಬ್ಬಿನ ಸಂಯೋಜನೆಯು ಚಯಾಪಚಯವನ್ನು ಉತ್ತೇಜಿಸುತ್ತದೆ.
  • ತುಪ್ಪವು ಅದರ ಜೀರ್ಣಕಾರಿ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ದೇಹದ ಇತರ ಆಹಾರಗಳಿಂದ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಚಹಾದೊಂದಿಗೆ ಸೇರಿಸಿ ಕುಡಿದಾಗ ತುಪ್ಪವು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯ ಕಾಪಾಡುತ್ತದೆ.
  • ತುಪ್ಪದ ಚಹಾ ಸೇವಿಸುವುದರಿಂದ ಗ್ಲೋಯಿಂಗ್​ ಸ್ಕಿನ್​ ಪಡೆಯುವ ನಿಮ್ಮ ಕನಸು ನನಸಾಗುತ್ತದೆ. ನಿಯಮಿತ ಸೇವನೆಯು ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ತುಪ್ಪದ ಸಮೃದ್ಧ ವಿಟಮಿನ್‌ಗಳಾದ A, D, E, K, ಪೋಷಕಾಂಶಗಳು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದರಿಂದ ಚರ್ಮವು ಮೃದುವಾಗಿ ಕಾಣುತ್ತದೆ.
  • ಒಂದು ಕಪ್ ತುಪ್ಪದ ಚಹಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತದೆ. ಸಕ್ಕರೆ ಪಾನೀಯಗಳಿಗಿಂತ ಭಿನ್ನವಾಗಿ ತುಪ್ಪದ ಚಹಾವು ರಕ್ತದ ಸಕ್ಕರೆಯ ಸ್ಪೈಕ್‌ಗಳ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net