ಡಯಾಬಿಟಿಸ್​​ ಇರುವವರು ದಿನಕ್ಕೆ ಎಷ್ಟು ಸಮಯ ನಿದ್ರೆ ಮಾಡ್ಬೇಕು ಗೊತ್ತಾ; ಅಪಾಯ ಬರುವ ಮುನ್ನ ಎಚ್ಚೆತ್ತುಕೊಳ್ಳಿ

ಫಿಟ್​ ಆ್ಯಂಡ್​ ಹೆಲ್ತಿಯಾಗಿರಲು ಪೋಷ್ಟಿಕಾಂಶದ ಆಹಾರದ ಸೇವನೆ ಜತೆಗೆ ಸಾಕಷ್ಟು ವಿಶ್ರಾಂತಿ ಪಡೆಯುವುದು ಮುಖ್ಯವಾಗಿದೆ. ಒತ್ತಡ ಮತ್ತು ನಿದ್ರೆಯ ಕೊರತೆಯಿಂದಾಗಿ ಅನೇಕ ರೀತಿಯ ರೋಗಗಳು ಸಂಭವಿಸಬಹುದು. ವಿಶೇಷವಾಗಿ ಮಧುಮೇಹ ರೋಗಿಗಳು ಈ ವಿಷಯವನ್ನು ನಿರ್ಲಕ್ಷಿಸಬಾರದು. ನೀವು ಟೈಪ್ 2 ಡಯಾಬಿಟಿಸ್ ಹೊಂದಿದ್ದರೆ ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ ಎನ್ನುವುದನ್ನು ಮರೆಯಬೇಡಿ. ಮಧುಮೇಹದಿಂದ ಬಳಲುತ್ತಿರುವವರು ಸರಿಯಾಗಿ ವಿಶ್ರಾಂತಿ ಪಡೆಯದಿದ್ದರೆ ರಕ್ತದಲ್ಲಿನ ಸಕ್ಕರ ಮಟ್ಟದಲ್ಲಿ ಏರುಪೇರು ಉಂಟಾಗಬಹುದು ಎಂದು ಆರೋಗ್ಯ ತಜ್ಞರ ಹೇಳುತ್ತಾರೆ.

ಇದನ್ನು ಓದಿ: ಮುಖದಲ್ಲಿನ ಈ ಬದಲಾವಣೆ ಅಪಾಯದ ಮುನ್ಸೂಚನೆ; ನಿರ್ಲಕ್ಷಿಸುವುದು ಬೇಡ.. ಎಚ್ಚರವಹಿಸಿ

ಡಯಾಬಿಟಿಸ್​​​​​​ ಇರುವವರು ಪ್ರತಿದಿನ ಎಷ್ಟು ಗಂಟೆಗಳ ಕಾಲ ಮಲಗಬೇಕು. ಆದ್ದರಿಂದ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೇಗೆ ನಿಯಂತ್ರಣದಲ್ಲಿರುತ್ತದೆ ಎಂಬ ಪ್ರಶ್ನೆ ಬರುವುದು ಸಹಜ. ಇದಕ್ಕೆ ಉತ್ತರಿಸುವುದರ ಜತೆಗೆ ಮಧುಮೇಹಿಗಳು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಆಹಾರ, ವ್ಯಾಯಾಮದ ಜತೆಗೆ ನಿದ್ರೆಯೂ ದೇಹಕ್ಕೆ ಮುಖ್ಯವಾಗಿದೆ. ನಿದ್ರೆಯ ಕೊರತೆಯಿಂದ ದೇಹವು ಜಡವಾಗುವುದಲ್ಲದೆ ಒತ್ತಡವೂ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ ಅಥವಾ ಕಡಿಮೆಯಾದಾಗ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ವಿಶೇಷವಾಗಿ ಟೈಪ್ 2 ಡಯಾಬಿಟಿಸ್ ಇರುವವರು ಯಾವಾಗಲೂ ಸಾಕಷ್ಟು ನಿದ್ರೆ ಮಾಡಬೇಕು. ನೀವು ತಡರಾತ್ರಿಯವರೆಗೆ ಎಚ್ಚರವಾಗಿರುವ ಅಭ್ಯಾಸ ಹೊಂದಿದ್ದರೆ ಅಥವಾ ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರೆ, ನಿಮ್ಮ ಈ ಅಭ್ಯಾಸವು ನಿಮ್ಮನ್ನು ಅಪಾಯಕ್ಕೆ ದೂಡಬಹುದು.

ಮಧುಮೇಹ ರೋಗಿಗಳಿಗೆ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಅಗತ್ಯ. ನೀವು ರಾತ್ರಿಯಲ್ಲಿ ನಿದ್ರೆ ಮಾಡಲಾಗದಂಥ ಸಮಸ್ಯೆ ಎದುರಿಸುತ್ತಿದ್ದರೆ ಹಗಲಿನಲ್ಲಿ ನಿದ್ರೆ ಮಾಡುವುದನ್ನು ತಪ್ಪಿಸಬೇಕು. ಪ್ರತಿ ರಾತ್ರಿ ಮಲಗುವ ಸಮಯವನ್ನು ನಿರ್ಧರಿಸುವುದರ ಜತೆಗೆ ಅದೇ ಸಮಯದಲ್ಲಿ ನಿದ್ರಿಸಲು ಪ್ರಯತ್ನಿಸಿಬೇಕು. ಇದಲ್ಲದೆ, ಮಲಗುವ ಮುನ್ನ ನೀವು ಆಲ್ಕೋಹಾಲ್ ಮತ್ತು ಕೆಫಿನ್​​ ಸೇವಿಸುವುದನ್ನು ತಪ್ಪಿಸಬೇಕು. ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವು ಸೇವಿಸುವ ಹಲವು ಆಹಾರಗಳು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಡಿಮೆ ಮಾಡುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಬಯಸಿದರೆ ಧಾನ್ಯಗಳು, ಓಟ್ಸ್, ಟೋನ್ಡ್ ಹಾಲು, ನಾರಿನ ತರಕಾರಿಗಳು, ಸಿಪ್ಪೆ ಸುಲಿದ ಬೇಳೆಕಾಳುಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಎಣ್ಣೆಗಳು ಇತ್ಯಾದಿಗಳನ್ನು ಪ್ರತಿದಿನ ಸೇವಿಸಬೇಕು. ಇದಲ್ಲದೆ, ಪಪ್ಪಾಯಿ, ಸೇಬು, ಕಿತ್ತಳೆ ಮತ್ತು ಸೀಬೆಹಣ್ಣು ತಿನ್ನುವುದು ಸಹ ನಿಮಗೆ ಪ್ರಯೋಜನಕಾರಿಯಾಗಿದೆ.

8000 ವರ್ಷಗಳ ಹಿಂದಿನ ಈ ಮೂಲಿಕೆಯಿಂದ ಎಷ್ಟೆಲ್ಲಾ ಪ್ರಯೋಜನ; ತಿಳಿದ್ರೆ ತಪ್ಪದೆ ನೀವು ಬಳಸುತ್ತೀರಾ

Share This Article

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…

ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…