ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ. ಹಳೆಯ ಅಥವಾ ಮುರಿದ ವಸ್ತುಗಳನ್ನು ಹೆಚ್ಚಾಗಿ ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಬಳಸಿದ ವಸ್ತುವನ್ನು ಮರುಬಳಕೆ ಮಾಡಬಹುದು ಎಂಬ ವಿಷಯವೆ ನಮಗೆ ತಿಳಿದಿರುವುದಿಲ್ಲ. ಅಂತಹ ಒಂದು ವಸ್ತುವಿನ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಇದನ್ನು ಓದಿ: ಡಯಾಬಿಟಿಸ್​​ ಇರುವವರು ದಿನಕ್ಕೆ ಎಷ್ಟು ಸಮಯ ನಿದ್ರೆ ಮಾಡ್ಬೇಕು ಗೊತ್ತಾ; ಅಪಾಯ ಬರುವ ಮುನ್ನ ಎಚ್ಚೆತ್ತುಕೊಳ್ಳಿ

ಮೇಣದಬತ್ತಿಯ ಬಗ್ಗೆ ಜನರ ಆಲೋಚನೆ ಸರಳವಾಗಿದೆ. ಅದು ಸುಟ್ಟುಹೋದ ಬಳಿಕ ಕೊನೆಗೊಳ್ಳುತ್ತದೆ ಎಂದು ನಾವೆಲ್ಲರೂ ಭಾವಿಸುತ್ತೇವೆ. ಅದನ್ನು ಮರುಬಳಕೆ ಮಾಡಬಹುದು ಎಂದು ತಿಳಿದ್ರೆ ಎಷ್ಟು ಆಶ್ಚರ್ಯವಾಗುತ್ತದೆ. ಹೌದು, ಕರಗಿದ ಮೇಣದಬತ್ತಿಗಳು ತುಂಬಾ ಉಪಯುಕ್ತವಾಗಬಹುದು ಎಂದು ಯೋಚಿಸಿದ್ದೀರಾ? ಇದಷ್ಟೆ ಅಲ್ಲ ಕರಗಿದ ಮೇಣದಬತ್ತಿಯನ್ನು ಮನೆಯ ಅಲಂಕಾರಿಕ ವಸ್ತುಗಳನ್ನಾಗಿ ಮಾಡಬಹುದು. ಹೇಗೆ ಎಂಬ ಕೆಲವು ವಿಧಾನದ ಬಗ್ಗೆ ಮಾಹಿತಿ ನೀಡಲಾಗಿದೆ.

ಕರಗಿದ ಮೇಣದಬತ್ತಿಯನ್ನು ಮರುಬಳಕೆ ಮಾಡಲು ಸುಲಭವಾದ ಮತ್ತು ಹೆಚ್ಚು ಉಪಯುಕ್ತವಾದ ಮಾರ್ಗವೆಂದರೆ ಅದರ ಸಹಾಯದಿಂದ ಹೊಸ ದೀಪವನ್ನು ಮಾಡುವುದು. ಮೊದಲು ನೀವು ಕರಗಿದ ಮೇಣದಬತ್ತಿಯನ್ನು ಬಿಸಿ ಮಾಡಬೇಕು. ಈಗ ಅದನ್ನು ದೀಪದಲ್ಲಿ ಹಾಕಿ ನಂತರ ಹತ್ತಿ ಬತ್ತಿಯನ್ನು ಮಾಡಿ. ಹತ್ತಿ ಬತ್ತಿಯನ್ನು ದೀಪದಲ್ಲಿ ಹಾಕಿ ಸುಮಾರು 5-8 ಗಂಟೆಗಳ ಕಾಲ ಬಿಡಿ. ನೀವು ಬಯಸಿದರೆ ಸುಗಂಧಕ್ಕಾಗಿ ನಿಮ್ಮಗಿಷ್ಟದ ಸುವಾಸನೆಯ ತೈಲವನ್ನು ಸಹ ಅದರಲ್ಲಿ ಸೇರಿಸಬಹುದು.

ಕರಗಿದ ಮೇಣದಬತ್ತಿಯಿಂದ ವಿಶಿಷ್ಟವಾದ ಮನೆ ಅಲಂಕಾರಿಕ ವಸ್ತುಗಳನ್ನು ಮಾಡಬಹುದು. ಇದಕ್ಕಾಗಿ ನೀವು ವಿವಿಧ ಆಕಾರಗಳ ಅಚ್ಚುಗಳನ್ನು ತರಬೇಕಾಗುತ್ತದೆ. ಈಗ ನಿಮ್ಮ ಆಯ್ಕೆಯ ಅಚ್ಚಿನಲ್ಲಿ ಹಿಂದಿನ ಮೇಣದಬತ್ತಿಯನ್ನು ಹಾಕಿದ ನಂತರ, ಕೆಲವು ಹೂವಿನ ದಳಗಳನ್ನು ಸಹ ಹಾಕಿ. ಅದು ಒಣಗಿದಾಗ, ಅಚ್ಚಿನಿಂದ ಮೇಣವನ್ನು ಹೊರತೆಗೆಯಿರಿ. ಈ ರೀತಿಯಾಗಿ ನಿಮ್ಮ ಶೋಪೀಸ್ ಅನ್ನು ಸುಲಭವಾಗಿ ತಯಾರಿಸಬಹುದು.

ಕರಗಿದ ಮೇಣದಬತ್ತಿಗಳಿಂದ ಆಭರಣಗಳನ್ನು ತಯಾರಿಸುವುದು ತುಂಬಾ ಸುಲಭ. ಇದಕ್ಕಾಗಿ ನೀವು ಅಚ್ಚು ಬಳಸಬೇಕಾಗುತ್ತದೆ. ನೀವು ಮಾಡಲು ಬಯಸುವ ಆಭರಣದ ಪ್ರಕಾರದ ಅಚ್ಚನ್ನು ಮಾರುಕಟ್ಟೆಯಿಂದ ತನ್ನಿ. ಈಗ ನೀವು ಅದರ ಮೇಲೆ ಕರಗಿದ ಮೇಣವನ್ನು ಸುರಿದು ಅದಕ್ಕೆ ಕೊಕ್ಕೆ ಸೇರುಸಿ. ಅದು ಒಣಗಿದಾಗ ನೀವು ಅವುಗಳನ್ನು ಬಳಸಬಹುದು.

ಅಲಂಕಾರಿಕ ಮತ್ತು ಉಪಯುಕ್ತ ವಸ್ತುಗಳನ್ನು ತಯಾರಿಸುವುದರ ಜತೆಗೆ ಕರಗಿದ ಮೇಣದಬತ್ತಿಯನ್ನು ಗೋಡೆಗಳನ್ನು ಸರಿಪಡಿಸಲು ಸಹ ಬಳಸಲಾಗುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ಗೋಡೆಯಲ್ಲಿ ರಂಧ್ರವಿದ್ದರೆ, ಅದನ್ನು ಮೇಣದ ಸಹಾಯದಿಂದ ಮುಚ್ಚಿ. ಕರಗಿದ ಮೇಣದಬತ್ತಿಯನ್ನು ಸುರಿದ ನಂತರ ನೀವು ಗೋಡೆಗೆ ಬಣ್ಣ ಹಾಕಿದರೆ, ಅಲ್ಲಿ ರಂಧ್ರವಿದೆ ಎಂದು ಯಾರಿಗೂ ತಿಳಿದಿರುವುದಿಲ್ಲ.

ಕಹಿಬೇವಿಗಿಂತ ಸಿಹಿಬೇವು ಎಷ್ಟು ಶಕ್ತಿಶಾಲಿ ಗೊತ್ತಾ?; ಗ್ಲೋಯಿಂಗ್​ ಸ್ಕಿನ್​​ ಪಡೆಯಲು ಇದು ಉತ್ತಮ ಮಾರ್ಗ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…