ನಿಮ್ಮ ಮಕ್ಕಳು ಹೆಚ್ಚು ಹೆಚ್ಚು ಸ್ಕ್ರೀನ್​ ನೋಡುತ್ತಿದ್ದಾರ? ಹಾಗಿದ್ದರೆ ಇಂದೇ ತಪ್ಪಿಸಿ; ಇದು ಹೃದಯಕ್ಕೆ ಅಪಾಯ ! | Screen

untitled-design-2025-08-29t122152075-68b14e1e98762
Published on

Screen: ಡಿಜಿಟಲ್​ ಯುಗ ಎಂದೇ ಕರೆಯಲ್ಪಡುವ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್​, ಕಂಪ್ಯೂಟರ್​ ಇನ್ನಿತರ ತಾಂತ್ರಿಕ ಉಪಕರಣಗಳ ಮೇಲೆ ಅವಲಂಬಿರುತ್ತಾರೆ. ಒತ್ತಡ ಇರುವಂತಹ ಈ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಮೊಬೈಲ್​ ನೀಡಿ ಮಕ್ಕಳಿಂದ ಶಾಂತಿ ಪಡೆಯಲು ಬಯಸುತ್ತಾರೆ. ಅಂದಹಾಗೆ,ಮಲಗುವ ಮುನ್ನ ಮಕ್ಕಳು ಸ್ಮಾರ್ಟ್​ಫೋನ್​ಗಳನ್ನು ಹೋಮ್​ವರ್ಕ್​ ಮಾಡಲು, ಆನ್​ಲೈನ್​ ತರಗತಿಗಳು, ಗೇಮಿಂಗ್, ಸ್ಟ್ರೀಮಿಂಗ್​ ನಂತಹ ಕಾರ್ಯಗಳನ್ನು ಮಾಡಲು ಅತೀ ಹೆಚ್ಚು ಬಳಸಲಾರಂಭಿಸುತ್ತಾರೆ. ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಿ ನಿಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಹೃದಯೀ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು.

ಇನ್ನು ಈ ವಿಷಯದ ಕುರಿತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಬಂದ ಮಾಹಿತಿ ಪ್ರಕಾರ, ಮಕ್ಕಳಲ್ಲಿ ಹೆಚ್ಚುವರಿ ಸ್ಕ್ರೀನ್​ ಸಮಯವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅದರಲ್ಲಿ 8-9 ನೇ ತರಗತಿಯ ಮಕ್ಕಳಲ್ಲಿ ತೂಕ ಹೆಚ್ಚಳದ ಬಗ್ಗೆ ನಡೆಸಿದ ಅಧ್ಯಯನದಲ್ಲಿ 1-4 ಗಂಟೆಗಳವರೆಗೆ ಮೊಬೈಲ್​ ಬಳಕೆ, ಜಂಕ್​ ಫುಡ್​ ಸೇವನೆ, ದೈಹಿಕ ಚಟುವಟಿಕೆಗಳ ಕೊರತೆಯಿಂದ ಚಿಕ್ಕ ಬವಯಸ್ಸಿನಲ್ಲಿಯೇ ಹೃದಯೀ ಸಂಬಂಧೀ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದು ತಿಳಿಸಿದೆ.

ನಿಮ್ಮ ಮಕ್ಕಳನ್ನು ಮೊಬೈಲ್​ಗಳಿಂದ ರಕ್ಷಿಸುವುದು ಹೇಗೆ?

* ಸ್ಕ್ರೀನ್ ಸಮಯವನ್ನುಕಡಿಮೆ ಮಾಡಿ

2 ವರ್ಷಕಿಂತ ಕಡಿಮೆ ಇರುವಂತಹ ಮಕ್ಕಳಿಗೆ ನಿಮ್ಮ ಮೊಬೈಲ್​​ಗಳನ್ನು ಸಂಪೂರ್ಣವಾಗಿ ತಪ್ಪಿಸಿ, ಹಾಗೇ 2-5 ವರ್ಷದೊಳಗಿರುವ ಮಕ್ಕಳಿಗೆ ದಿನಕ್ಕೆ 1 ಗಂಟೆಗಿಂತ ಕಡಿಮೆ ಸ್ಕ್ರೀನ್​ ಸಮಯವನ್ನು ಅನುಮತಿಸಿ. ಹಾಗೆಯೇ ಕೆಲವೊಂದು ಜಾಗಗಳಲ್ಲಿ ಮೊಬೈಲ್​ಗಳನ್ನು ನಿಯಂತ್ರಿಸಿ. ಉದಾಹರಣೆಗೆ ಊಟದ ಮೇಜು, ಮಲಗುವ ಕೊಠಡಿ ಇನ್ನಿತರ ಸೂಕ್ಷ್ಮ ಜಾಗಗಳಲ್ಲಿ ನಿಯಂತ್ರಿಸಿ.

* ದೈಹಿಕ ಚಟುವಟಿಕೆಗಳಿಗೆ ಉತ್ತೇಜಿಸಿ

ನಿಮ್ಮ ಮಕ್ಕಳಿಗೆ ಓದುವುದರ ಜೊತೆಗೆ ದಿನಕ್ಕೆ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಆಟ ಆಡುವುದು, ಸೈಕಲ್​ ತುಳಿಯುವುದು, ಓಡುವುದು ಈ ರೀತಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ.

* ಆರೋಗ್ಯಕರ ಆಹಾರವನ್ನು ನೀಡಿ

ನಿಮ್ಮ ಮಕ್ಕಳು (ಜಂಕ್​ ಫುಡ್​) ಹೊರಗೆ ತಿನ್ನುತ್ತಾರಾ ಹಾಗಿದ್ದರೆ ಮೊದಲು ಅವುಗಳನ್ನು ನಿಯಂತ್ರಿಸಿ, ಅವುಗಳ ಬದಲು ಹಣ್ಣು, ತರಕಾರಿ, ಧಾನ್ಯಗಳು, ಮತ್ತು ಕಡಿಮೆ ಎಣ್ಣೆ ಇರುವಂತಹ ಆಹಾರವನ್ನು ನೀಡಿ.

* ತಂತ್ರಜ್ಞಾನ-ಮುಕ್ತ ವಲಯಗಳನ್ನು ನಿರ್ಮಿಸಿ

ನಿಮ್ಮ ಮಕ್ಕಳು ಮೊದಲು ಹೆಚ್ಚು ನೋಡುವ ಸ್ಕ್ರೀನ್​ ಸಮಯವನ್ನು ಕಡಿಮೆ ಮಾಡಿ. ಹಾಗೆಯೇ ಕೆಲವೊಂದು ಪ್ರದೇಶಗಳಲ್ಲಿ ನಿರ್ಬಂಧಿಸಿ. ಅಂದರೆ, ಮಲಗುವ ಮುಂಚೆ, ಊಟದ ಸಮಯದಲ್ಲಿ ಆದಷ್ಟು ಟಿವಿ ಹಾಗೂ ಮೊಬೈಲ್​ನಿಂದ ದೂರ ಇಡಿ. (ಏಜೆನ್ಸೀಸ್)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net