

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳಲ್ಲಿನ ಅಸಮತೋಲನದಿಂದ ಗ್ರಹಗಳು ಒಟ್ಟಿಗೆ ಸೇರಿದಾಗ ಕೆಲವು ಯೋಗಗಳು ರೂಪುಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ರೂಪುಗೊಳ್ಳುವ ಅಪರೂಪದ ಯೋಗಗಳ ಪ್ರಭಾವವು ಎಲ್ಲ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಬುದ್ಧಿಶಕ್ತಿ, ಮಾತು, ಅಧ್ಯಯನ ಮತ್ತು ವ್ಯವಹಾರದ ಅಧಿಪತಿಯಾಗಿದೆ. ಈ ಗ್ರಹವನ್ನು ಮಿಥುನ ಮತ್ತು ಕನ್ಯಾ ರಾಶಿಗಳ ಅಧಿಪತಿ ಅಂತಾನೂ ಪರಿಗಣಿಸಲಾಗುತ್ತದೆ. ಅದೇ ರೀತಿ, ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾದ ಸೂರ್ಯನು ಆತ್ಮವಿಶ್ವಾಸ, ಗೌರವ, ರಾಜಕೀಯ, ಸರ್ಕಾರಿ ಕೆಲಸ ಮತ್ತು ಪಿತೃತ್ವದ ಅಂಶವಾಗಿದ್ದಾನೆ. ಸೂರ್ಯ, ಸಿಂಹ ರಾಶಿಯ ಅಧಿಪತಿಯೂ ಹೌದು.
ಸುಮಾರು ಒಂದು ವರ್ಷಗಳ ಬಳಿಕ ಸೂರ್ಯ ಮತ್ತು ಬುಧ ಸಂಯೋಗಗಳ ಸಮಯ ಮತ್ತೆ ಬಂದಿದೆ. ಇದರಿಂದ ಪ್ರಬಲವಾದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ. ಸೆಪ್ಟೆಂಬರ್ 17 ರಂದು, ಕನ್ಯಾರಾಶಿಗೆ ಸೂರ್ಯ ಪ್ರವೇಶ ಮಾಡುತ್ತಾನೆ. ಅದಕ್ಕೂ ಮುನ್ನ ಅಂದರೆ, ಸೆಪ್ಟೆಂಬರ್ 15ರಂದೇ ಕನ್ಯಾ ರಾಶಿ ಬುಧ ಎಂಟ್ರಿ ಕೊಡುತ್ತಾನೆ. ಇದರಿಂದ ಬುಧಾದಿತ್ಯ ರಾಜಯೋಗ ರೂಪುಗೊಂಡು ಎಲ್ಲ ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರುತ್ತದೆ. ಆದಾಗ್ಯೂ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಾತ್ರ ಅದೃಷ್ಟ ಸಿಗುತ್ತದೆ. ಆ ನಿಟ್ಟಿನಲ್ಲಿ, ಸೂರ್ಯ-ಬುಧ ಸಂಯೋಗದಿಂದ ಉಂಟಾಗುವ ರಾಜಯೋಗದಿಂದಾಗಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮಿಥುನ ರಾಶಿಯ 4ನೇ ಮನೆಯಲ್ಲಿ ಬುಧ ಮತ್ತು ಸೂರ್ಯ ಸಂಯೋಗದ ಪರಿಣಾಮವಾಗಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಇದರಿಂದಾಗಿ, ಅನೇಕ ಸಂತೋಷದ ಸಂಗತಿಗಳು ಸಂಭವಿಸುತ್ತವೆ. ನೀವು ಹೊಸ ಮನೆ ಮತ್ತು ವಾಹನದೊಂದಿಗೆ ಸಮೃದ್ಧ ಜೀವನವನ್ನು ನಡೆಸುತ್ತೀರಿ. ಈ ಸಮಯದಲ್ಲಿ ನೀವು ಆನುವಂಶಿಕ ಆಸ್ತಿಗಳನ್ನು ಪಡೆಯುತ್ತೀರಿ. ವಾಹನಗಳನ್ನು ಖರೀದಿಸಲು ನಿಮಗೆ ಅವಕಾಶವಿರುವುದರಿಂದ, ಸಂಬಂಧಿಕರ ಗಮನವು ನಿಮ್ಮ ಮೇಲೆ ಇರುತ್ತದೆ ಎಚ್ಚರ! ಈ ಅವಧಿಯಲ್ಲಿ ನೀವು ಹೊಸ ರೀತಿಯ ಗೌರವವನ್ನು ಪಡೆಯುತ್ತೀರಿ. ನೀವು ಕೆಲಸದಲ್ಲಿಯೂ ಪ್ರಗತಿ ಸಾಧಿಸುವಿರಿ. ಬಡ್ತಿ ಪಡೆಯುವ ಸಾಧ್ಯತೆಯಿದೆ.
ಧನುಸ್ಸು ರಾಶಿಯಲ್ಲಿ ಜನಿಸಿದವರಿಗೆ ಬುಧ ಮತ್ತು ಸೂರ್ಯ 10ನೇ ಮನೆಯಲ್ಲಿ ಸಂಯೋಗದಲ್ಲಿರುತ್ತಾರೆ. ಆ ಸಮಯದಲ್ಲಿ ಬರುವ ಬುಧಾದಿತ್ಯ ರಾಜಯೋಗವು ಕೆಲಸದಲ್ಲಿ ಪ್ರಗತಿಯನ್ನು ತರುತ್ತದೆ. ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ, ಲಾಭವು ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ನಿಮಗೆ ಅದೃಷ್ಟ ಸಿಕ್ಕರೆ, ನೀವು ಅದನ್ನು ಸರಿಯಾಗಿ ಬಳಸಿದರೆ, ನಿಮ್ಮ ಸಂಬಂಧವು ಸುಧಾರಿಸುತ್ತದೆ.
ಕನ್ಯಾ ರಾಶಿಯ ಮೊದಲ ಮನೆಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗವು ಈ ಯೋಗವನ್ನು ಸೃಷ್ಟಿಸುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿವಾಹಿತರ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಮಾಯವಾಗುತ್ತವೆ ಮತ್ತು ಅವರು ಸಂತೋಷದಿಂದ ಬದುಕಲು ಪ್ರಾರಂಭಿಸುತ್ತಾರೆ. ಅವಿವಾಹಿತರಿಗೆ, ಮದುವೆಯಾಗುವ ಯೋಗ ಬರುತ್ತದೆ. ಇಲ್ಲಿಯವರೆಗೆ ಇದ್ದ ಕೆಲಸದ ಹೊರೆ ದೂರವಾಗುತ್ತದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿದ್ದ ಭಯ ಮಾಯವಾಗುತ್ತದೆ ಮತ್ತು ಅವರು ಅಧ್ಯಯನದಲ್ಲಿ ಆಸಕ್ತಿ ಹೊಂದಿರುತ್ತಾರೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಮತ್ತು ಗೌರವ ಹೆಚ್ಚಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.