ಅಪ್ಪಿತಪ್ಪಿಯೂ ಈ 5 ಮಾತುಗಳನ್ನು ಎಂದಿಗೂ ಆಡಬೇಡಿ: ಆಡಿದ್ರೆ ಶನಿಯ ಕೋಪಕ್ಕೆ ನೀವು ಗುರಿಯಾಗ್ತೀರಿ ಎಚ್ಚರ! Lord Shani

Lord Shani
Published on

Lord Shani : ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಒಂದು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ನಾವು ಆಡುವ ಕೆಲವು ಪದಗಳು ಅಥವಾ ಮಾಡುವ ಕೆಲವು ಕೆಲಸಗಳು ಶನಿಯನ್ನು ಕೋಪಗೊಳಿಸುತ್ತವೆ. ಇದರಿಂದ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಮಾತುಗಳನ್ನು ನಮ್ಮ ಪೂರ್ವಜರು ಕೂಡ ನಮಗೆ ಹೇಳಿದ್ದಾರೆ.

ಅಂದಹಾಗೆ, ಶನಿಯು ನ್ಯಾಯದ ದೇವರು ಮತ್ತು ಅವನು ಎಲ್ಲರಿಗೂ ಸಮಾನ ನ್ಯಾಯವನ್ನು ನೀಡುತ್ತಾನೆ. ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಲಿ ಸಮಾನವಾಗಿ ನೀಡುತ್ತಾನೆ. ಅದಕ್ಕಾಗಿಯೇ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ನಾವು ಇತರರೊಂದಿಗೆ ಮಾತನಾಡುವಾಗ ಆಡುವ ಕೆಲವು ಮಾತುಗಳು ಹಾಗೂ ನಾವು ಪ್ರತಿದಿನ ಮಾಡುವ ಕೆಲವು ಕೆಲಸಗಳು ಶನಿ ದೇವನನ್ನು ಕೋಪಗೊಳಿಸಬಹುದು. ಇದರಿಂದ ನಿಮ್ಮ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು. ಹಾಗದರೆ, ಯಾವ ಮಾತುಗಳನ್ನು ಆಡಬಾರದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಸುಳ್ಳು ಹೇಳುವುದು, ಮೋಸ ಮಾಡುವುದು

ಶನಿ ದೇವರು ತುಂಬಾ ಪ್ರಾಮಾಣಿಕ. ಆದ್ದರಿಂದ ಅವನಿಗೆ ಸುಳ್ಳು ಹೇಳುವುದು ಇಷ್ಟವಿಲ್ಲ. ತಪ್ಪು ಮಾಡಿ ನಂತರ "ನಾನು ಅದನ್ನು ಮಾಡಲಿಲ್ಲ" ಎಂದು ಹೇಳಿದರೆ, ಅದು ಶನಿ ದೇವರನ್ನು ಕೋಪಗೊಳಿಸುತ್ತದೆ. ಇತರರನ್ನು ಅವಮಾನಿಸುವ, ಅಪಹಾಸ್ಯ ಮಾಡುವ ಅಥವಾ ಟೀಕಿಸುವ ಪದಗಳು ಕೂಡ ಶನಿಗೆ ಇಷ್ಟವಾಗುವುದಿಲ್ಲ. ನೀವು ವಿಫಲರು, ನೀವು ಏನನ್ನೂ ಮಾಡಲು ಸಾಧ್ಯವಿಲ್ಲ ಅಂತಾನೂ ಹೇಳಬಾರದು.

ಇತರರನ್ನು ಶಪಿಸುವ ಪದಗಳು

ಎಂದಿಗೂ ಯಾರನ್ನೂ ಶಪಿಸಬಾರದು. ಇದು ಶನಿಗೆ ಇಷ್ಟವಾಗುವುದಿಲ್ಲ. ನೀನು ಖಂಡಿತ ಸೋಲಬೇಕು, ಮಾಡುವ ಕೆಲಸವೆಲ್ಲ ವಿಫಲಬಾಗಲಿ, ನೀನು ಉದ್ಧಾರವಾಗಬಾರದು, ನಿನಗೆ ಖಂಡಿತ ಶಿಕ್ಷೆಯಾಗಬೇಕು, ನಿನಗೆ ಎಲ್ಲಿಯೂ ಒಳೆಯದಾಗಬಾರದು ಇತ್ಯಾದಿ ಪದಗಳನ್ನು ಎಂದಿಗೂ ಬಳಸಬೇಡಿ. ಬಳಸಿದರೆ ಖಂಡಿತವಾಗಿ ನೀವು ಶನಿಯ ಕೋಪಕ್ಕೆ ಗುರಿಯಾಗುತ್ತೀರಿ.

ಗರ್ವ ಪಡುವುದು

ಇತರರು ನಮಗೆ ಸಹಾಯ ಮಾಡಲು ಮುಂದೆ ಬಂದಾಗ, ನಾವು ಇದೆಲ್ಲವೂ ನಮಗೆ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಅವರನ್ನು ಅವಮಾನಿಸುತ್ತೇವೆ. ಆದರೆ, ಈ ನಡೆ ಶನಿಯ ನ್ಯಾಯ ಪ್ರಜ್ಞೆಗೆ ವಿರುದ್ಧವಾಗಿದೆ. ಅಲ್ಲದೆ, ನಾವು ಬೇರೆಯವರಿಗೆ ಸಹಾಯ ಮಾಡಿದ್ದನ್ನು ಕೂಡ ಹೇಳಿಕೊಳ್ಳಬಾರದು. ಬಡಾಯಿ ಕೊಚ್ಚಿಕೊಂಡು ಇತರರನ್ನು ನೋಯಿಸುವ ಅಭ್ಯಾಸ ಶನಿ ದೇವನಿಗೆ ಇಷ್ಟವಿಲ್ಲ. ಏನಾದರೂ ನಡೆದರೆ ಅದಕ್ಕೆಲ್ಲ ನಾನೇ ಕಾರಣ ಎಂದು ಹೇಳಿ ಗರ್ವ ಪಡೆಯುವುದು ಶನಿಗೆ ಕೋಪ ತರಿಸುತ್ತದೆ.

ಸ್ವಯಂ ಶಿಸ್ತಿನ ಕೊರತೆ

ಕೆಲವರಿಗೆ ಸ್ವಭಾವತಃ ಸ್ವಯಂ ಶಿಸ್ತು ಇರುವುದಿಲ್ಲ. ಈ ಅಭ್ಯಾಸ ದೇವರಿಗೆ ಇಷ್ಟವಾಗುವುದಿಲ್ಲ. ದೇವರ ಅನುಗ್ರಹ ಪಡೆಯಲು, ಒಬ್ಬರಿಗೆ ಅರ್ಹತೆ ಮತ್ತು ಸದ್ಗುಣಗಳು ಇರಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ನಾನು ಏನೇ ತಪ್ಪು ಮಾಡಿದರೂ ದೇವರು ನನ್ನನ್ನು ಕ್ಷಮಿಸುತ್ತಾನೆ, ಮನುಷ್ಯರು ತಪ್ಪುಗಳನ್ನು ಮಾಡುವುದು ಸಹಜ ಮತ್ತು ಅವುಗಳನ್ನು ಸರಿಪಡಿಸುವುದು ದೇವರ ಕೆಲಸ ಎಂಬಂತೆ ಬೇಜವಾಬ್ದಾರಿಯಿಂದ ಮಾತನಾಡಬಾರದು.

ಹಾಗಾದರೆ ಶನಿ ದೇವನನ್ನು ಮೆಚ್ಚಿಸುವ ಚಟುವಟಿಕೆಗಳು ಯಾವುವು?

ನೀವು ಮೇಲೆ ತಿಳಿಸಿದ ಕೆಲಸಗಳನ್ನು ಮಾಡಿದರೆ, ನೀವು ಜೀವನದಲ್ಲಿ ಅಡೆತಡೆಗಳು, ಒತ್ತಡ, ಆರ್ಥಿಕ ಬಿಕ್ಕಟ್ಟು ಮತ್ತು ಸಂಬಂಧಗಳಲ್ಲಿ ಬಿರುಕುಗಳನ್ನು ಅನುಭವಿಸಬಹುದು. ಇದರಲ್ಲಿಯೂ ಸಹ, ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ 4, 7 ಮತ್ತು 10 ನೇ ಮನೆಯಲ್ಲಿದ್ದಾಗ, ಅವನ ಪ್ರಭಾವ ಹೆಚ್ಚಾಗುತ್ತದೆ. ಈ ವೇಳೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ.

ಯಾವಾಗಲೂ ಸತ್ಯವನ್ನೇ ಮಾತನಾಡಿ, ಇತರರನ್ನು ಗೌರವಿಸಿ, ವಿನಮ್ರರಾಗಿರಿ, ಸೋಮಾರಿತನವನ್ನು ತಪ್ಪಿಸಿ, ಕಷ್ಟಪಟ್ಟು ಕೆಲಸ ಮಾಡಿ, ಜವಾಬ್ದಾರಿಯನ್ನು ಸ್ವೀಕರಿಸಿ, ಬಡವರಿಗೆ ಸಹಾಯ ಮಾಡಿ ಹಾಗೂ ಶನಿವಾರದಂದು ಕಪ್ಪು ಬಟ್ಟೆ ಮತ್ತು ಕಡಲೆಕಾಯಿಯನ್ನು ದಾನ ಮಾಡಿ, ಶನಿವಾರದಂದು ಶನಿ ದೇವರಿಗೆ ಎಳ್ಳೆಣ್ಣೆಯ ದೀಪಗಳನ್ನು ಬೆಳಗಿಸುವುದು, ಹನುಮಂತನನ್ನು ಪೂಜಿಸುವುದು, ಶನಿ ಮಂತ್ರಗಳನ್ನು ಪಠಿಸುವುದು ಮತ್ತು ಇತರರನ್ನು ಅವಮಾನಿಸದಿರುವುದರಿಂದ ಶನಿಯ ಕೋಪವನ್ನು ತಣ್ಣಗಾಗಿಸಬಹುದು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net