20,000 ರೂ. ಬಜೆಟ್​​ನಲ್ಲಿ ಖರೀದಿಸಬಹುದಾದ Android 13 5G ಸ್ಮಾರ್ಟ್​​ಫೋನ್​​ಗಳು ಇಲ್ಲಿವೆ ನೋಡಿ

top smartphones
Published on

ನವದೆಹಲಿ: ಕೇವಲ 20,000 ರೂ. ಬಜೆಟ್​​ನೊಳಗೆ ಖರೀದಿಸಬಹುದಾದ ಭಾರತದ ಟಾಪ್ 5 5G ಆಂಡ್ರಾಯ್ಡ್ 13 ಸ್ಮಾರ್ಟ್​​ಫೋನ್​​ಗಳ ಬಗ್ಗೆ ಇಲ್ಲಿದೆ ಮಾಹಿತಿ ಅನುಸರಿಸಿ.

iQoo Z7s 5G: ಭಾರತದ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್​​ಫೋನ್ (Smartphone)​ ಬೆಲೆ 18,999 ರೂ.ಗಳು ಇದ್ದು, ಕ್ವಾಲ್ಕಮ್​ ಸ್ನಾಪ್​​ಡ್ರಾಗನ್​(Qualcomm Snapdragon) 695 ಪ್ರೊಸಸರ್​​ ಅನ್ನು ಅಳವಡಿಸಲಾಗಿದೆ. ಈ ಫೋನ್ ಗ್ರಾಹಕರಿಗೆ ಕೈಗೆಟುಕವ ದರದಲ್ಲಿ ಲಭ್ಯವಿದೆ.

ಓಪೋ A78 5G: ಭಾರತದ ಮಾರುಕಟ್ಟೆಯಲ್ಲಿ ಈ ಮಾಡೆಲ್ ಬೆಲೆ 18,410 ರೂ. ಇದ್ದು, 5,000mAh ಬ್ಯಾಟರಿ ಮತ್ತು 13 ಮೆಗಾ ಪಿಕ್ಸಲ್​ ಬ್ಯಾಕ್​ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಕೂಡ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ.

ಟೆಕ್ನೋ ಸ್ಪಾರ್ಕ್ 10 5G: ಈ ಫೋನ್‌ನ ಬೆಲೆ ಕೇವಲ 15,000 ರೂ. ಇದ್ದು, ಕಡಿಮೆ ದರದಲ್ಲಿ ಸ್ಮಾರ್ಟ್​ಫೋನ್​ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಈ ಫೋನ್ ಹೇಳಿ ಮಾಡಿಸಿದೆ.

ಸ್ಯಾಮ್​​ಸಂಗ್ ಗ್ಯಾಲಕ್ಸಿ A14 5G: ಸ್ಯಾಮ್​ಸಂಗ್(Samsung) ಸ್ಮಾರ್ಟ್​ಪೋನ್​ಗಳಲ್ಲಿ ವಿವಿಧ ದರದಲ್ಲಿ ಲಭ್ಯವಿರುವ ಫೋನ್​ಗಳ ಪೈಕಿ ಗ್ಯಾಲಕ್ಸಿ A14 5G 18,999 ರೂ. ಬೆಲೆಗೆ ಲಭ್ಯವಿದೆ. ಇದರಲ್ಲಿ ಟ್ರಿಪಲ್ ಬ್ಯಾಕ್​ ಕ್ಯಾಮೆರಾ ಸೆಟಪ್ ಇದ್ದು, 5000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ರಿಯಲ್ ಮಿ 10 ಪ್ರೋ 5G: ಈ ಸ್ಮಾರ್ಟ್​​ಫೋನ್​​ನಲ್ಲಿ ಕ್ವಾಲ್ಕಮ್​ ಸ್ನಾಪ್​​ಡ್ರಾಗನ್​ 695 ಪ್ರೊಸೆಸರ್‌ ಅಳವಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೇವಲ 13,990 ರೂ.ಗೆ ದೊರೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net