ದಂತ ಚಿಕಿತ್ಸೆ ಖುಷಿ ಪಸರಿಸಿದ ಡಾ.ನಿರಂಜನ್

Dr Niranjan
Published on

ದಂತ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಅಗ್ರಗಣ್ಯ ಹೆಸರು ಮಾಡಿರುವ ‘ಖುಷಿ ಡೆಂಟಲ್ ಕ್ಲಿನಿಕ್ (ಕೆಡಿಸಿ) ಮತ್ತು ಇಂಪ್ಲಾಂಟ್ ಸೆಂಟರ್’ ರಾಜ್ಯಾದ್ಯಂತ ವಿವಿಧ ಶಾಖೆಗಳನ್ನು ಹೊಂದಿದೆ. ಈವರೆಗೂ 10 ಲಕ್ಷಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಿದ್ದು, ಅತಿಕಡಿಮೆ ದರದಲ್ಲಿ 10 ಸಾವಿರಕ್ಕೂ ಅಧಿಕ ದಂತ ಕಸಿ (ಟೀತ್ ಇಂಪ್ಲಾಂಟ್) ಯಶಸ್ವಿಯಾಗಿ ಅಳವಡಿಸಿರುವ ಡಾ. ನಿರಂಜನ್ ಪರಮಶೆಟ್ಟಿ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ದಾಖಲೆ ನಿರ್ವಿುಸಿದ್ದಾರೆ. ಮುಖ್ಯವಾಗಿ ಶ್ರೀಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಖ್ಯಾತಿ ಹೊಂದಿರುವ ಇವರಿಗೆ ‘ವಿಜಯವಾಣಿ’ ಪತ್ರಿಕೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರು: ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಹಾಗೂ ಮುಖದ ಸೌಂದರ್ಯ ಇಮ್ಮಡಿಗೊಳಿಸುವಲ್ಲಿ ಹಲ್ಲು ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಹಲ್ಲುಗಳ ಆರೋಗ್ಯ ಕಾಪಾಡುವಲ್ಲಿ ‘ಖುಷಿ ಡೆಂಟಲ್ ಕ್ಲಿನಿಕ್’ (ಕೆಡಿಸಿ) ಇಂಪ್ಲಾಂಟ್ ಸೆಂಟರ್ ಕಳೆದ ಎರಡೂವರೆ ದಶಕದಿಂದ ಕಡಿಮೆ ದರದಲ್ಲಿ ಗುಣಮಟ್ಟದ ದಂತ ಚಿಕಿತ್ಸೆ ಒದಗಿಸುತ್ತ ಬಂದಿದೆ.

ಹಲ್ಲುಗಳ ಸುಧಾರಿತ ಚಿಕಿತ್ಸೆಗೆ ಹೆಸರಾಗಿರುವ ಕೆಡಿಸಿ ಡೆಂಟಲ್ ಇಂಪ್ಲಾಂಟ್ (ಹಲ್ಲುಗಳ ಕಸಿ) ಚಿಕಿತ್ಸೆ ನೀಡುವಲ್ಲಿ ವಿಶೇಷತೆಯನ್ನು ಪಡೆದಿದೆ. ದಂತವೈದ್ಯ ತಜ್ಞರಾದ ಡಾ. ನಿರಂಜನ್ ಪರಮಶೆಟ್ಟಿ ಹಾಗೂ ಡಾ. ಭಾಗ್ಯಲಕ್ಷ್ಮೀ ಫೌಜ್​ದಾರ್ ಅವರು ಹಲ್ಲಿನ ಸಮಸ್ಯೆಗಳಿಗೆ ಅತ್ಯುತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈವರೆಗೆ ಲಕ್ಷಾಂತರ ರೋಗಿಗಳಿಗೆ ದಂತ ಚಿಕಿತ್ಸೆ ನೀಡಿದ್ದು, ಅತಿಕಡಿಮೆ ದರದಲ್ಲಿ 10 ಸಾವಿರಕ್ಕೂ ಅಧಿಕ ದಂತ ಕಸಿಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

‘ಖುಷಿ ಡೆಂಟಲ್ ಕೇರ್’ ಬೆಂಗಳೂರಿನ ಆರ್.ಆರ್. ನಗರ, ವಿದ್ಯಾರಣ್ಯಪುರ, ನೆಲಮಂಗಲ, ರಾಮನಗರ, ಚನ್ನಪಟ್ಟಣ, ಹುಬ್ಬಳ್ಳಿ- ಧಾರವಾಡ ಸೇರಿ ರಾಜ್ಯಾದ್ಯಂತ 12 ಶಾಖೆಗಳನ್ನು ಹೊಂದಿದೆ. ಈ ಕ್ಲಿನಿಕ್​ಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಬಳಸಿ ಸುಧಾರಿತ ಕ್ರಮಗಳೊಂದಿಗೆ ನುರಿತ ತಜ್ಞರು ದಂತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಉಚಿತ ಮತ್ತು ರಿಯಾಯಿತಿ ದರದಲ್ಲಿ ಸೇವೆ ನೀಡುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಬಹಳಷ್ಟು ಜನರು ಇದರ ಅನುಕೂಲ ಪಡೆದುಕೊಂಡಿದ್ದಾರೆ.

Dr Niranjan

ಉದ್ಯೋಗದಾತ: ಸಮಾಜ ಸೇವಾ ಮನೋಭಾವ ಹಾಗೂ ನುರಿತ ಅನುಭವ ಮತ್ತು ಕೈಗುಣದಿಂದಾಗಿ ಡಾ. ನಿರಂಜನ್ ಪರಮಶೆಟ್ಟಿ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದು, ವಿಶೇಷ ಮನ್ನಣೆ ಪಡೆದುಕೊಂಡಿದ್ದಾರೆ. ಅನುಭವಿ ಸಿಬ್ಬಂದಿಯನ್ನು ಹೊಂದಿದ್ದು, ತಮ್ಮ ಶಾಖೆಗಳ ಮೂಲಕ 100ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ಇವರ ಸೇವೆ ಪಡೆದುಕೊಂಡು ತಮ್ಮ ಕ್ಲಿನಿಕ್​ಗೆ ಆಗಮಿಸುವವರಿಗೆ ಸೇವೆ ಒದಗಿಸುತ್ತಿದ್ದಾರೆ.

ಡಾ.ನಿರಂಜನ ನಡೆದುಬಂದ ಹಾದಿ: ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್​ನವರಾದ ಡಾ. ನಿರಂಜನ ಪರಮಶೆಟ್ಟಿ, ಧಾರವಾಡ ಜಿಲ್ಲೆಯ ಎಸ್​ಡಿಎಂ ಕಾಲೇಜಿನಲ್ಲಿ ಬಿಡಿಎಸ್ ಪದವಿ ಪಡೆದರು. ನಂತರ ಪುಣೆ, ಮುಂಬೈ ಸೇರಿ ಹಲವೆಡೆ ಡೆಂಟಲ್ ಇಂಪ್ಲಾಂಟ್ ಕೋರ್ಸ್ ಮಾಡಿದ್ದಾರೆ. ಅಮೆರಿಕದಲ್ಲಿ ದಂತ ವೈದ್ಯಕೀಯ ಹೆಚ್ಚುವರಿ ಸಂಶೋಧನೆ 3-4 ಅಡ್ವಾನ್ಸ್​ಡ್ ಕೋರ್ಸ್​ಗಳನ್ನು ಪೂರೈಸಿದ್ದಾರೆ. 1997ರಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ‘ಖುಷಿ ಡೆಂಟಲ್ ಕ್ಲಿನಿಕ್’ ಆರಂಭಿಸಿದರು. ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಚಿಕಿತ್ಸೆ ಒದಗಿಸುವ ಮೂಲಕ ಜನರಿಂದ ಸೈ ಎನ್ನಿಸಿಕೊಂಡರು. ಕಡಿಮೆ ದರದಲ್ಲಿ ಗುಣಮಟ್ಟದ ಸೇವೆಯಿಂದಾಗಿ ರಾಜ್ಯಾದ್ಯಂತ ಬೇಡಿಕೆ ಹೆಚ್ಚಾಯಿತು. ಹೀಗಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ 2ನೇ ಶಾಖೆ ಆರಂಭಿಸಿದರು. ನಂತದಲ್ಲಿ ಅತಿ ಕಡಿಮೆ ಸಮಯದಲ್ಲಿಯೇ ಬೆಂಗಳೂರು, ರಾಮನಗರ, ಚನ್ನಪಟ್ಟಣ ಸೇರಿ ರಾಜ್ಯಾದ್ಯಂತ 12 ಶಾಖೆಗಳನ್ನು ತೆರೆದರು. ಆ ಮೂಲಕ ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಲಕ್ಷಾಂತರ ಜನರಿಗೆ ದಂತ ಚಿಕಿತ್ಸೆ ಒದಗಿಸಿದ್ದಾರೆ.

ಡೆಂಟಲ್ ಇಂಪ್ಲಾಂಟ್ ವಿಶೇಷ: ‘ಖುಷಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್’ನಲ್ಲಿ ಅತ್ಯಾಧುನಿಕ ಸುಧಾರಿತ ಕ್ರಮಗಳು, ಪರಿಕರಗಳೊಂದಿಗೆ ಇಂಪ್ಲಾಂಟ್ ಚಿಕಿತ್ಸೆ ನಡೆಸಲಾಗುತ್ತಿದೆ. ಹುಳುಕು ಸೇರಿ ನಾನಾ ಕಾರಣಗಳಿಂದ ಹಲ್ಲು ಕಳೆದುಕೊಂಡವರಿಗೆ ಈ ಇಂಪ್ಲಾಟ್ ವರದಾನವಾಗಿ ಪರಿಣಮಿಸಿದೆ. ಬಿದ್ದುಹೋದ ಹಲ್ಲಿನ ಜಾಗದಲ್ಲಿ ವಸಡಿನ ಮೂಳೆಯಲ್ಲಿ ಸಣ್ಣದೊಂದು ರಂಧ್ರ ಕೊರೆದು ಸ್ಕೂ ೃ ಅಳವಡಿಸಿ ಅದರ ಮೇಲೆ ಕ್ಯಾಪ್ ಹಾಕುವ ಮೂಲಕ ಹಲ್ಲಿನ ಇಂಪ್ಲಾಂಟ್ ಮಾಡಲಾಗುತ್ತದೆ. ಈ ರೀತಿಯಾಗಿ ಕಸಿ ಮಾಡಿದ ಹಲ್ಲುಗಳು ನೈಜವಾಗಿ ಕಾಣಿಸುವುದಲ್ಲದೆ ಗಟ್ಟಿಮುಟ್ಟಾಗಿರುತ್ತವೆ. ಸುದೀರ್ಘ ಕಾಲ ಬಾಳಕೆಯೂ ಬರಲಿವೆ. ಈ ರೀತಿಯ ಚಿಕಿತ್ಸೆ ಇತರೆ ಡೆಂಟಲ್ ಕ್ಲಿನಿಕ್​ಗಳಲ್ಲಿಯೂ ಲಭ್ಯವಿದೆಯಾದರೂ, ಈ ಇಂಪ್ಲಾಂಟ್ ಚಿಕಿತ್ಸೆಯಲ್ಲಿ ‘ಕೆಡಿಸಿ’ ತನ್ನದೇ ಆದ ಛಾಪು ಮೂಡಿಸಿದೆ. ಅದೇನೆಂದರೆ, ಬೇರೆ ಕ್ಲಿನಿಕ್​ಗಳಲ್ಲಿ 30-35 ಸಾವಿರ ರೂ. ದುಬಾರಿ ದರದಲ್ಲಿ ಲಭ್ಯವಿರುವ ಹಲ್ಲಿನ ಇಂಪ್ಲಾಂಟ್ ಚಿಕಿತ್ಸೆ, ‘ಕೆಡಿಸಿ’ಯಲ್ಲಿ 8-10 ಸಾವಿರ ರೂ.ಗಳಲ್ಲಿ ಲಭ್ಯವಿದೆ. ಇದುವರೆಗೂ ‘ಕೆಡಿಸಿ’ ವತಿಯಿಂದ 10 ಸಾವಿರಕ್ಕೂ ಅಧಿಕ ಮಂದಿಗೆ ಡೆಂಟಲ್ ಇಂಪ್ಲಾಂಟ್ ಮಾಡಲಾಗಿದೆ.

ಆರೋಗ್ಯ ಸೇವೆಯೊಂದಿಗೆ ಸಮಾಜ ಸೇವೆ: ಅತಿಕಡಿಮೆ ದರದಲ್ಲಿ ಸಾಮಾನ್ಯ ಜನರಿಗೆ ದಂತ ಚಿಕಿತ್ಸೆ ಲಭಿಸುವಂತೆ ಮಾಡಿದ್ದಾರೆ ಡಾ. ನಿರಂಜನ. ಹಾಗೆಂದು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವವರಲ್ಲ. ತಮ್ಮ ಸೇವಾ ಅವಧಿಯಲ್ಲಿ ಅನೇಕ ಕ್ಲಿಷ್ಟಕರ ಪ್ರಕರಣಗಳನ್ನೂ ಪರಿಹರಿಸಿ ಮೆಚ್ಚುಗೆ ಗಳಿಸಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವುದು ಗಮನಾರ್ಹ. ಈ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಉಚಿತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ಸಹ ನೀಡುತ್ತ ಬಂದಿದ್ದಾರೆ. ಇದಲ್ಲದೆ, ಪ್ರತಿ ವರ್ಷ 100 ವೃದ್ಧರಿಗೆ ಉಚಿತ ಹಲ್ಲಿನ ಸೆಟ್ ಒದಗಿಸುತ್ತಿದ್ದಾರೆ. ಹೀಗೆ ತಮ್ಮ ಸೇವೆಯ ಮೂಲಕ ಹಲವಾರು ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಕೆಡಿಸಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ಸುಧಾರಿತ ಚಿಕಿತ್ಸಾ ಕ್ರಮ ಮತ್ತು ಸೇವಾ ಮನೋಭಾವನೆಯನ್ನು ಪರಿಗಣಿಸಿ ‘ಬೆಸ್ಟ್ ಮಲ್ಟಿಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಇನ್ ಇಂಡಿಯಾ’ ಅವಾರ್ಡ್ ನೀಡಲಾಗಿದೆ. 2016ರಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಟೈಮ್್ಸ ಬಿಜಿನೆಸ್ ಅವಾರ್ಡ್ ಸಹ ಲಭಿಸಿದೆ. ಡಾ. ನಿರಂಜನ್ ಪರಮಶೆಟ್ಟಿ ಹಾಗೂ ಡಾ. ಭಾಗ್ಯಲಕ್ಷ್ಮೀ ಫೌಜ್​ದಾರ್ ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ನಾನಾ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ಆಡಳಿತ ಮಂಡಳಿಯ ಎಲ್ಲ ಕೆಲಸವನ್ನು ನಿರ್ವಹಿಸುತ್ತಾರೆ.

ಉಚಿತ ದಂತ ಚಿಕಿತ್ಸಾ ಶಿಬಿರಗಳು: ಸಾಮಾನ್ಯವಾಗಿ ಜನರು ಉಡುವ ಬಟ್ಟೆಗೆ, ಮುಖದ ಸೌಂದರ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆ ಹಾಗೂ ಗಮನವನ್ನು ಹಲ್ಲಿನ ಆರೋಗ್ಯದ ಕಡೆಗೆ ನೀಡುವುದಿಲ್ಲ. ಯಾವಾಗ ಹಲ್ಲಿನ ಆರೋಗ್ಯ ಕೆಡುತ್ತದೆಯೋ ಆಗ ವೈದ್ಯರನ್ನು ಹುಡುಕಿಕೊಂಡು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರೋಗ್ಯ ಕಾಳಜಿ ಹೊಂದಿರುವ ‘ಕೆಡಿಸಿ’, ಶಾಲಾ-ಕಾಲೇಜುಗಳು, ಗ್ರಾಮೀಣ ಪ್ರದೇಶಗಳು, ನಗರದ ಐಟಿ ಕಂಪನಿಗಳು, ಕಾರ್ಖಾನೆಗಳಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿ ಹಲ್ಲಿನ ಮಹತ್ವ ಹಾಗೂ ಅದರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದೆ.

ದಂತಕುಳಿ ಬಗ್ಗೆ ನಿರ್ಲಕ್ಷ್ಯ ಬೇಡ: ಜನರು ಸಾಮಾನ್ಯವಾಗಿ ದಂತಕುಳಿಯನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇದಕ್ಕೆ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಸಮಸ್ಯೆ ಇರುವ ಹಲ್ಲು ಸೇರಿ ಇತರೆ ಹಲ್ಲುಗಳನ್ನು ರಕ್ಷಿಸಬಹುದಾಗಿದೆ. ಇಲ್ಲವಾದರೆ ಈ ಸಮಸ್ಯೆ ಇತರ ಹಲ್ಲುಗಳಿಗೂ ವ್ಯಾಪಿಸಿ ಅವುಗಳ ಹಾನಿಗೂ ಕಾರಣವಾಗಲಿವೆ. ಎರಡು ಹಲ್ಲುಗಳ ನಡುವೆ ಚಿಕ್ಕದಾಗಿ ಕಂಡುಬರುವ ಕಪು್ಪ ಕುಳಿಯು ದಂತ ಕುಳಿಯ ಆರಂಭಿಕ ಲಕ್ಷಣ. ಈ ರೀತಿ ಕಂಡುಬಂದ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎನ್ನುತ್ತಾರೆ ಡಾ. ನಿರಂಜನ ಪರಮಶೆಟ್ಟಿ.

ಎಕ್ಸ್​ಪ್ರೆಸ್ ಡೆಂಟಲ್ ಕ್ಲಿನಿಕ್: ಡಾ. ನಿರಂಜನ್ ಪರಮಶೆಟ್ಟಿಯವರ ನೇತೃತ್ವದಲ್ಲಿ ಕೆಡಿಸಿ ದಂತ ಸಮೂಹವು ಇದೀಗ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಬಳಸಿ ಹುಬ್ಬಳ್ಳಿ ಹಾಗೂ ಬೆಂಗಳೂರು ಮಹಾನಗರದಲ್ಲಿ ಎಕ್ಸ್​ಪ್ರೆಸ್ ಡೆಂಟಲ್ ಕ್ಲಿನಿಕ್ ಮೂಲಕ ಡೆಂಟಲ್ ಇನ್​ಪ್ಲಾಂಟ್ ಅಳವಡಿಸಿ ಕೆಲವೇ ದಿನಗಳಲ್ಲಿ ಫಿಕ್ಸ್ ಹಲ್ಲುಗಳನ್ನು ಕಟ್ಟಲು ಶಾಖೆಯೊಂದನ್ನು ಆರಂಭಿಸಿದೆ. ಡೆಂಟಲ್ ಇನ್​ಪ್ಲಾಂಟ್ ಬಳಸಿ ಪಕ್ಕದ ಹಲ್ಲುಗಳನ್ನು ಕೊರೆಯದೆ ಫಿಕ್ಸ್ ಹಲ್ಲು ಹಾಕಲಾಗುವುದು. ಎಲ್ಲಾ ಹಲ್ಲುಗಳನ್ನು ಈ ಚಿಕಿತ್ಸೆಯ ಮೂಲಕ ಫಿಕ್ಸ್ ಮಾಡಬಹುದು. ಇವು ನೋಡಲು, ಮಾತನಾಡಲು, ಭಾವಿಸಲು ನೈಸರ್ಗಿಕ ಹಲ್ಲುಗಳಂತೆ ಕೆಲಸ ಮಾಡುತ್ತವೆ. ಮಧುಮೇಹ, ರಕ್ತದೊತ್ತಡ, ಹೃದಯ ರೋಗಿಗಳಿಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ದಂತ ಕಸಿ ಮಾಡಬಹುದು.

ಹಲ್ಲಿನ ಆರೈಕೆಗೆ ಆಹಾರ: ಹಲ್ಲಿನ ಆರೋಗ್ಯ ಕೇವಲ ಬ್ರಶ್ ಮಾಡುವುದರಿಂದ ಮಾತ್ರ ಸಾಧ್ಯವಿಲ್ಲ. ಸದೃಢ ಹಲ್ಲುಗಳಿಗಾಗಿ ಉತ್ತಮ ಆಹಾರ ಕ್ರಮವನ್ನು ಹೊಂದಬೇಕು. ಜಂಕ್​ಫುಡ್ ಸೇವನೆ ಆರೋಗ್ಯದ ಜತೆಗೆ ಹಲ್ಲಿನ ಗುಣಮಟ್ಟವನ್ನು ಹಾಳುಗೆಡವುತ್ತದೆ. ಹಾಗಾಗಿ ತಾಜಾ ಹಣ್ಣು, ತರಕಾರಿ, ದ್ವಿದಳ ಧಾನ್ಯಗಳು ಸೇರಿ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಉತ್ತಮ. ಕಬ್ಬು, ಕ್ಯಾರೆಟ್ ಸೇರಿ ಕೆಲ ತರಕಾರಿಗಳನ್ನು ಹಲ್ಲಿನಿಂದ ಚೆನ್ನಾಗಿ ಅಗಿದು, ಜಗಿದು ಸೇವಿಸಬೇಕು. ಇದರಿಂದ ವಸಡು ಸದೃಢಗೊಳ್ಳುತ್ತದೆ.

Dr Niranjan

ಎಕ್ಸ್​ಪ್ರೆಸ್ ಡೆಂಟಲ್ ಕ್ಲಿನಿಕ್: ಡಾ. ನಿರಂಜನ ಪರಮಶೆಟ್ಟಿ ನೇತೃತ್ವದಲ್ಲಿ ‘ಕೆಡಿಸಿ’ ದಂತ ವೈದ್ಯಕೀಯ ಚಿಕಿತ್ಸಾ ಸಮೂಹ ಅತ್ಯುತ್ತಮ ಸೇವೆ ಒದಗಿಸುತ್ತಿದೆ. ಇದೀಗ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಬಳಸಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ನೂತನವಾಗಿ ಆರಂಭಿಸಿರುವ ‘ಎಕ್ಸ್​ಪ್ರೆಸ್ ಡೆಂಟಲ್ ಕ್ಲಿನಿಕ್’ ಹಲವು ವಿಶೇಷತೆಗಳಿಂದ ಕೂಡಿದೆ. ಡೆಂಟಲ್ ಇಂಪ್ಲಾಂಟ್ ಮೂಲಕ ಕಳೆದು ಹೋದ ನಿರ್ದಿಷ್ಟ ಜಾಗದಲ್ಲಿ ಹಲ್ಲು ಮರಳಿ ಹೊಂದಬಹುದು. ಅಕ್ಕಪಕ್ಕದ ಹಲ್ಲಿಗೆ ಹಾನಿಯಾಗದ ರೀತಿಯಲ್ಲಿ ಹಲ್ಲಿನ ಇಂಪ್ಲಾಂಟ್, ಮರುಜೋಡಣೆ ಮಾಡಲಾದ ಈ ಹಲ್ಲು ನೈಸರ್ಗಿಕ ಹಲ್ಲಿನ ರೀತಿಯಲ್ಲಿ ಬಳಕೆ ಮತ್ತು ಬಾಳಿಕೆ ಬರಲಿದೆ. ಮಧುಮೇಹ, ರಕ್ತದೊತ್ತಡ ಸೇರಿ ಇತರೆ ಸಮಸ್ಯೆ ಹೊಂದಿರುವವರಿಗೂ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ದಂತ ಕಸಿ ಚಿಕಿತ್ಸೆ ಪಡೆಯಲು ಇಲ್ಲಿ ಇಎಂಐ ಸೌಲಭ್ಯವೂ ಲಭ್ಯವಿದೆ.

ಜಾಗೃತಿ ಕಾರ್ಯಕ್ರಮ: ದಂತ ಆರೋಗ್ಯ ಹಾಗೂ ದಂತ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ತಂಬಾಕು, ಗುಟ್ಕಾ ಸೇವನೆಯಿಂದ ಹಲ್ಲಿನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ‘ಕೆಡಿಸಿ’ ಪ್ರತಿ ವರ್ಷ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದುವರೆಗೂ 5 ಸಾವಿರಕ್ಕೂ ಅಧಿಕ ಶಿಬಿರ ಹಾಗೂ 200ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿರುವ ಹೆಗ್ಗಳಿಕೆ ‘ಖುಷಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್’ಗೆ ಸಲ್ಲುತ್ತದೆ.

ಹಲ್ಲುಗಳ ಆರೈಕೆ ಸಲಹೆ: ಡಾ. ನಿರಂಜನ ಪರಮಶೆಟ್ಟಿ ಅವರು ಹಲ್ಲುಗಳ ಆರೈಕೆ ಕುರಿತು ಕೆಲ ಸಲಹೆಗಳನ್ನು ನೀಡಿದ್ದಾರೆ. ಪ್ರತಿದಿನ ಎರಡು ಬಾರಿ (ಬೆಳಗ್ಗೆ ಏಳುವಾಗ ಹಾಗೂ ರಾತ್ರಿ ಮಲಗುವ ಮೊದಲು) ಹಲ್ಲು ಉಜ್ಜಬೇಕು. ಯಾವುದೇ ಆಹಾರ ಸೇವಿಸಿದ ನಂತರ ನೀರಿನಿಂದ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಹಾರದಲ್ಲಿ ಸಕ್ಕರೆ ಅಂಶ ಇರುವ ಚಾಕೊಲೇಟ್, ಕೇಕ್, ಪೇಸ್ಟ್ರಿ, ಜ್ಯೂಸ್, ಐಸ್ಕ್ರೀಮ್ ಸ್ವೀಟ್ಸ್ ಹಾಗೂ ತಂಪು ಪಾನೀಯಗಳು, ಅಧಿಕ ಹುಳಿ ಮತ್ತು ಉಪ್ಪಿನ ಅಂಶ ಇರುವ ಆಹಾರ ಸೇವನೆ ಬಗ್ಗೆ ಎಚ್ಚರ ಇರಬೇಕು. ಹಲ್ಲಿನ ನಡುವೆ ಸಿಕ್ಕಿಕೊಂಡಿರುವ ಆಹಾರವನ್ನು ತೆಗೆಯಲು ಕಡ್ಡಿ ಅಥವಾ ಪಿನ್ ಬಳಸಬಾರದು. ಬದಲಿಗೆ ಬ್ರಶ್ ಮಾಡುವ ಮೂಲಕ ಹೊರತೆಗೆಯಬೇಕು. ಹಲ್ಲಿನ ಸಮಸ್ಯೆ ಇರಲಿ, ಇಲ್ಲದಿರಲಿ ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ.

Dr Niranjan

ಆಧುನಿಕತೆಗೆ ಒಗ್ಗಿಕೊಂಡಿರುವ ಜನರು ತಮ್ಮ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಿಕೊಂಡಿರುವ ಪರಿಣಾಮ ಇತರೆ ಆರೋಗ್ಯ ಸಮಸ್ಯೆಗಳ ಜತೆಗೆ ದಂತ ಆರೋಗ್ಯವೂ ಹದಗೆಡುತ್ತಿದೆ. ನೋವು ಕಾಣಿಸಿಕೊಳ್ಳುವವರೆಗೂ ದಂತ ಆರೋಗ್ಯದ ಬಗ್ಗೆ ಗಮನಹರಿಸದ ಜನರಿಗೆ ಸಮಸ್ಯೆ ಗಂಭೀರವಾದಾಗ ಚಿಕಿತ್ಸೆಗೆ ಬರುತ್ತಾರೆ. ಹಾಗಾಗಿ ದಂತ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನೂರಾರು ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ಉಚಿತ ದಂತ ತಪಾಸಣಾ ಶಿಬಿರಗಳನ್ನು ನಡೆಸಲಾಗಿದೆ.

| ಡಾ. ನಿರಂಜನ ಪರಮಶೆಟ್ಟಿ ಕೆಡಿಸಿ ಮತ್ತು ಇಂಪ್ಲಾಂಟ್ ಸೆಂಟರ್ ಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net