Women Gang: ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದೇ ತಡ ಆತನ ಮನೆಯಲ್ಲಿ ದರೋಡೆಕೋರರ ಮಹಿಳಾ ಗ್ಯಾಂಗ್ನಿಂದ ಚಿನ್ನಾಭರಣಗಳು ಕಳುವಾಗಿವೆ. ಈ ಘಟನೆ ನ್ಯಾಕುಮಾರಿ ಜಿಲ್ಲೆಯ ರಾಜಮಂಗಲಂನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಮಗಳು ಇರಾಳನ್ನು ಅಪ್ಪಿ ಸಂತೈಸಿದ ಅಮೀರ್ ಖಾನ್; ವಿಡಿಯೋ ನೋಡಿ ಹೊಸ ತಾಯಿ ಇಷ್ಟವಾಗಲಿಲ್ಲವೇ ಎಂದ ನೆಟ್ಟಿಗರು | Aamir Khan
ರಾಜಮಂಗಲಂನಲ್ಲಿ ನೆಲೆಸಿರುವ 55 ವರ್ಷದ ವ್ಯಕ್ತಿಗೆ, ಹೆಂಡತಿ, ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ, ಆರು ವರ್ಷಗಳ ಹಿಂದೆ ಪತ್ನಿಯೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ದೂರವಾಗಿದ್ದಾರೆ. ಮೊದಲ ಮದುವೆಯಿಂದ ಬೇಸತ್ತಿದ್ದ ವ್ಯಕ್ತಿ, 55ನೇ ವಯಸ್ಸಿನಲ್ಲಿ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಬಯಸಿದ್ದರು. ಈ ವೇಳೆ ಆನ್‌ಲೈನ್ ಮ್ಯಾಚ್‌ಮೇಕಿಂಗ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು, ವಧುವನ್ನು ಹುಡುಕಿದ್ದರು.
ಈ ವ್ಯಕ್ತಿಯನ್ನು ವೆಬ್‌ಸೈಟ್‌ನಲ್ಲಿ ನೋಡಿದ ಮಧುರೈನ ಮುರುಗೇಶ್ವರಿ ಎಂಬ ಮಹಿಳೆ, ಎಲ್‌ಐಸಿ ಏಜೆಂಟ್ ಅನ್ನು ಸಂಪರ್ಕಿಸಿ, ತಮ್ಮನ್ನು ಮದುವೆಯಾಗುವ ಬಯಕೆಯಿದೆ ಎಂದು ಹೇಳಿಕೊಂಡಿದ್ದಳು. ಆಕೆಯ ಮಾತಿನ ಮೇರೆಗೆ ಮನೆಗೆ ಬರುವಂತೆ ಆಗಮಿಸಿದ ವ್ಯಕ್ತಿ, ನಮ್ಮ ಮನೆಯಲ್ಲಿ ತಾಯಿಯಿದ್ದಾರೆ, ಅವರನ್ನು ನಿಮ್ಮವರೊಂದಿಗೆ ಭೇಟಿ ಮಾಡಿ ಎಂದು ತಿಳಿಸಿದ್ದರು. ಖುದ್ದಾಗಿ ತಾನೇ ಬರುವುದಾಗಿ ಹೇಳಿದ ಕಿರಾತಕಿ ಮುರುಗೇಶ್ವರಿ, ತನ್ನ ತಂಗಿ ಕಾರ್ತಿಗೈಯಿನಿ (28), ಮುತ್ತುಲಕ್ಷ್ಮಿ (45), ಮತ್ತು ಪೋದುಮ್ ಪೊನ್ನು (43) ಕರೆದುಕೊಂಡು ಎಲ್ಐಸಿ ಏಜೆಂಟ್ ಮನೆಗೆ ಹೋಗಿದ್ದಳು.
ಇದನ್ನೂ ಓದಿ: ವಿದ್ಯುತ್ ಲೈನ್ ಸುಸ್ಥಿತಿಯಲ್ಲಿರಿಸಿ : ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಮೆಸ್ಕಾಂಗೆ ಮನವಿ
ವ್ಯಕ್ತಿಯ ಮನೆಗೆ ತೆರಳಿದ ಮುರುಗೇಶ್ವರಿ ಮತ್ತು ಆಕೆಯ ಗ್ಯಾಂಗ್, ಮನೆಯನ್ನು ನೋಡುವವರಂತೆ ವ್ಯಕ್ತಿಯ ರೂಮ್ಗೆ ಹೋಗಿ, ವಾರ್ಡ್ರೋಬ್ನಲ್ಲಿದ್ದ ಚಿನ್ನದ ಸರ, ಬಳೆ ಮತ್ತು ಇತರೆ ಒಡವೆಗಳನ್ನು ಹೊತ್ತು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಹಿಳೆಯ ಮನೆಯವರು ಹೋದ ನಂತರ ಒಡವೆಗಳತ್ತ ಕಣ್ಣಾಯಿಸಿದ ವ್ಯಕ್ತಿಗೆ ಚಿನ್ನಾಭರಣಗಳು ಕಳುವಾಗಿರುವುದು ಗೊತ್ತಾಗಿದೆ. ಏಜೆಂಟ್ ನೀಡಿದ ದೂರಿನ ಆಧಾರದ ಮೇರೆಗೆ ಖಾಕಿ ಪ್ರಕರಣ ದಾಖಲಿಸಿಕೊಂಡು, ನಿನ್ನೆ (ಮಾ.17) ಮಧುರೈನ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ತಾವು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡ ಕಿರಾತಕಿಯರ ಗ್ಯಾಂಗ್, ಕದ್ದ ಆಭರಣಗಳನ್ನು ಖಾಕಿ ಪಡೆಗೆ ಒಪ್ಪಿಸಿದ್ದಾರೆ. ಕಳ್ಳತನದ ಆರೋಪದಡಿ ಪೊಲೀಸರು ಮುರುಗೇಶ್ವರಿ, ಕಾರ್ತಿಗೈಯಿನಿ, ಮುತ್ತುಲಕ್ಷ್ಮಿ ಮತ್ತು ಪೋದುಮ್ ಪೊನ್ನು ಎಂಬ ನಾಲ್ವರನ್ನು ಬಂಧಿಸಿದ್ದಾರೆ,(ಏಜೆನ್ಸೀಸ್).
ಎಷ್ಟೇ ಹುಡುಕಿದ್ರೂ ಸಿಗಲಿಲ್ಲ; ಭರವಸೆಗಳು ಸುಳ್ಳಾದ ಬೆನ್ನಲ್ಲೇ ನೇಣಿಗೆ ಶರಣಾದ ಯುವಕ, ಹೆತ್ತವರು ಕಣ್ಣೀರು | Suicide