ಮಗಳು ಇರಾಳನ್ನು ಅಪ್ಪಿ ಸಂತೈಸಿದ ಅಮೀರ್​ ಖಾನ್​​; ವಿಡಿಯೋ ನೋಡಿ ಹೊಸ ತಾಯಿ ಇಷ್ಟವಾಗಲಿಲ್ಲವೇ ಎಂದ ನೆಟ್ಟಿಗರು | Aamir Khan

Untitled design (6)
Published on

ಮುಂಬೈ: ಬಾಲಿವುಡ್​ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಅಮೀರ್​ ಖಾನ್(Aamir Khan)​​ ತಮ್ಮ 60ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಗೌರಿ ಸ್ಪ್ರಾಟ್ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಸದ್ಯ ಇದು ಸಿನಿರಂಗದಲ್ಲಿ ಚರ್ಚೆಯ ಹಾಟ್​ ಟಾಪಿಕ್​ ಆಗಿದೆ.

ಅಂದ್ಹಾಗೆ ಗೌರಿಯನ್ನು ಮಾಧ್ಯಮಗಳಿಗೆ ಪರಿಚಯಿಸುವಾಗ ಅಮೀರ್​ ಖಾನ್​​ ತನ್ನ ಮಕ್ಕಳು ಈ ಸಂಬಂಧದಿಂದ ಸಂತೋಷವಾಗಿದ್ದಾರೆ ಮತ್ತು ಕುಟುಂಬವು ಅವರನ್ನು ಆತ್ಮೀಯವಾಗಿ ಸ್ವಾಗತಿಸಿತು ಎಂದು ಹೇಳಿದ್ದರು. ಆದರೆ ಏತನ್ಮಧ್ಯೆ ಅಮೀರ್​​ ಅವರ ಪುತ್ರಿ ಇರಾ ಖಾನ್ ಅವರ ವಿಡಿಯೋವೊಂದು ವೈರಲ್​ ಆಗಿದೆ. ಅದರಲ್ಲಿ ಅವರು ಅಳುತ್ತಿರುವುದನ್ನು ನೋಡಬಹುದು.

ಇರಾ ಅವರ ತಂದೆ ಅಮೀರ್ ಖಾನ್ ಅವರನ್ನು ಭೇಟಿಯಾಗಲು ಬಂದಿದ್ದರು. ಆದರೆ ಅವರ ಕಣ್ಣುಗಳಲ್ಲಿ ನೀರು ಇರುವುದು ಹಾಗೂ ಮುಖದಲ್ಲಿ ದುಃಖದಿಂದ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇರಾಳನ್ನು ನೋಡಿದ ನಂತರ ಅಮೀರ್​​ ಸ್ವತಃ ಆಶ್ಚರ್ಯ ಮತ್ತು ಅಸಮಾಧಾನಗೊಂಡಂತೆ ಕಾಣುತ್ತಿದ್ದರು.

ಈ ವಿಡಿಯೋ ವೈರಲ್ ಆದ ನಂತರ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಆಕೆಗೆ ಹೊಸ ತಾಯಿ ಇಷ್ಟವಾಗಲಿಲ್ಲ ಎಂದು ತೋರುತ್ತಿದೇ?, ಆಕೆಗೆ ಮೂರನೇ ತಾಯಿ ಸಿಕ್ಕಿದ್ದಾಳೆ, ಹೊಸ ತಾಯಿ ಬರುತ್ತಿದ್ದಾಳೆ ಎಂಬ ಸಂತೋಷದ ಕಣ್ಣೀರು, ಇರಾಗೆ ಗೌಪ್ಯತೆ ನೀಡಿ, ದುಃಖದಲ್ಲಿರುವವರನ್ನು ಸೆರೆಹಿಡಿಯುವುದು ಸೂಕ್ತವೇ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net