ಬದುಕಿನ ಮೌಲ್ಯ ಅರಿತು ವ್ಯಕ್ತಿತ್ವ ರೂಪಿಸಿಕೊಳ್ಳಲಿ

jnana sudha karyagara..
jnana sudha karyagara..
Published on

ಕಾರ್ಕಳ: ಬದುಕು ಆಕರ್ಷಣೆಯ ಗುಚ್ಚ. ಅದರಾಚೆಗಿರುವ ಮೌಲ್ಯವನ್ನು ಅರಿತರೆ ಜೀವನ ಸ್ವಚ್ಛವಾಗಿರಲು ಸಾಧ್ಯ. ಸವಾಜದೆದುರು ನಾವು ಏನು ಅನ್ನೋದನ್ನು ತೋರಿಸಿಕೊಡುವಲ್ಲಿ ತಲೆ ತಗ್ಗಿಸದಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ನಮ್ಮೊಳಗಿನ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡು ಮುನ್ನಡೆಯಬೇಕು ಎಂದು ಹಿಪ್ನೋಥೆರಪಿಸ್ಟ್ ಜ್ಯೋತಿ ಮಹಾದೇವ್ ಹೇಳಿದರು.

ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಕಳ ರೋಟರಿ ಕ್ಲಬ್, ಆನ್ಸ್ ಕ್ಲಬ್ ಹಾಗೂ ಕಾಲೇಜಿನ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಟಕ ವತಿಯಿಂದ ಆಯೋಜಿಸಲಾಗಿದ್ದ ‘ಮಕ್ಕಳು ಎದುರಿಸುತ್ತಿರುವ ಮನೋ ಸಮಸ್ಯೆ’ ಕುರಿತ ಕಾರ್ಯಕ್ರಮದಲ್ಲಿ ವಾತನಾಡಿದರು.

ರೋಟರಿ ಕ್ಲಬ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ.ಕೊಡವೂರು, ಉಪಪ್ರಾಂಶುಪಾಲ ಶ್ರೀಸಾಹಿತ್ಯ, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಎನ್‌ಎಸ್‌ಎಸ್ ಟಕಾಧಿಕಾರಿ ಶೈಲೇಶ್ ಶೆಟ್ಟಿ ಹಾಗೂ ಎನ್‌ಸಿಸಿ ಲೆಫ್ಟಿನೆಂಟ್ ಮಂಜುನಾಥ್ ಮುದೂರು ಉಪಸ್ಥಿತರಿದ್ದರು. ವೃಂದಾ ಶೆಟ್ಟಿ ಸ್ವಾಗತಿಸಿದರು. ಆನ್ಸ್‌ಕ್ಲಬ್ ಅಧ್ಯಕ್ಷೆ ಜಯಂತಿ ನಾಯ್ಕ ಅತಿಥಿಯನ್ನು ಪರಿಚಯಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಸಹನಾ ಕುಲಾಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net