More

    ಕರೊನಾ ಕಲಿಸಿದ ಪಾಠಗಳು!

    ಕರೊನಾ ಕಲಿಸಿದ ಪಾಠಗಳು!

    |ಡಾ. ಕೆ.ಪಿ. ಪುತ್ತೂರಾಯ

    ಇನ್ನೂರು ದೇಶಗಳಲ್ಲಿ ಮೇಲ್ಪಟ್ಟು ಜಗತ್ತಿನಾದ್ಯಂತ ಹರಡಿ ಹಬ್ಬಿ, ಲಕ್ಷಾಂತರ ಜನರ ಪ್ರಾಣಗಳನ್ನು ಬಲಿ ತೆಗೆದುಕೊಂಡಿರುವ ಹಾಗೂ ಕ್ಷಣ ಕ್ಷಣಕ್ಕೂ ತೆಗೆದುಕೊಳ್ಳುತ್ತಲೇ ಇರುವ ಈ ಭಾರೀ ಭಯಂಕರ ಮಹಾಮಾರಿ ಕರೊನಾ ಸೋಂಕು ಎಲ್ಲೆಲ್ಲೂ ಸಾಕಷ್ಟು ಕಷ್ಟ-ನಷ್ಟಗಳನ್ನು, ಸಾವು ನೋವುಗಳನ್ನು ತಂದೊಡ್ಡಿರೋದೇ ಮಾತ್ರವಲ್ಲದೆ, ಎಲ್ಲರ ಸ್ವಾಸ್ಥ್ಯ, ಸಂಬಂಧ, ವ್ಯಾಪಾರ-ವ್ಯವಹಾರ, ಆರ್ಥಿಕ-ಮಾನಸಿಕ, ಸಾಮಾಜಿಕ ಸ್ಥಿತಿಗತಿಗಳನ್ನೇ ಬುಡಮೇಲು ಮಾಡಿರೋದಂತೂ ಸತ್ಯ. ಎಲ್ಲಾ ಕ್ಷೇತ್ರಗಳಲ್ಲೂ ಇನ್ನಷ್ಟು ಬೇಗ ಚೇತರಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ತಂದೊಡ್ಡಿದೆ ಈ ಸೋಂಕು. ಒಟ್ಟಿನಲ್ಲಿ ನಮ್ಮ ಕಾಲದ ಅತಿ ದೊಡ್ಡ ದುರಂತವಿದು. ಆದರೆ, ಕರೊನಾ ನೀಡಿದ ಸಂದೇಶಗಳು, ಕಲಿಸಿದ ಪಾಠಗಳು ಅನೇಕ.

    • ಯಾವುದೇ ಬಾಂಬ್, ಮಿಸೈಲ್, ಶಸ್ತ್ರಾಸ್ತ್ರಗಳನ್ನು ಬಳಸದೇನೇ, ಸೈನಿಕರ ಸಹಾಯವಿಲ್ಲದೇನೇ, ವಿಶ್ವಯುದ್ಧವನ್ನು ಸಾರಲು ಸಾಧ್ಯವೆಂಬುದು, ಕರೊನಾ ಕಲಿಸಿದ ಮೊದಲ ಪಾಠ.
    • ಪ್ರಳಯವೆಂದರೆ, ಸಾಮಾನ್ಯವಾಗಿ ಒಂದೇ ಕಡೆ ಸೀಮಿತವಾದ ಜಲ ಪ್ರಳಯವೆಂದು ತಿಳಿದಿದ್ದ ನಮಗೆ, ಕಣ್ಣಿಗೆ ಕಾಣದ ವಿಷಕಾರಕ ವೈರಾಣುಗಳಿಂದಲೂ, ಪ್ರಳಯದಂತಹ ಪರಿಸ್ಥಿತಿ ನಿರ್ಮಿಸಲು ಸಾಧ್ಯವಾಗಿದೆ!.
    • ಕ್ರಿಮಿಕೀಟಗಳಲ್ಲ, ಪ್ರಾಣಿ-ಪಶು ಪಕ್ಷಿಗಳಲ್ಲ, ನೀವೇ ನಮ್ಮ Target ಎಂಬುದು ಮನುಕುಲಕ್ಕೆ ಸೋಂಕು ರವಾನಿಸಿದ ಸಂದೇಶ. ಇದರ ದಾಳಿ, ಜಾತಿ ಮತ, ದೇಶ ಧರ್ಮಗಳನ್ನು ಮೀರಿ, ಶ್ರೀಮಂತ ಬಡವರೆನ್ನದೆ ಎಲ್ಲರ ಮೇಲೂ ನಡೆದಿದೆ.

    ಇದನ್ನೂ ಓದಿ: ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!

    • ಆಸೆಯೇ ದುಃಖಕ್ಕೆ ಮೂಲ ಕಾರಣವೆಂದು ಬುದ್ಧ ಹೇಳಿದ್ದರೂ, ಆಸೆಯಲ್ಲ, ಮನುಷ್ಯನ ದುರಾಸೆ-ದುರ್ಬುದ್ಧಿಗಳೇ ದುಃಖಕ್ಕೆ ಮೂಲ ಕಾರಣವೆಂಬುದು ಕರೊನಾ ಕಲಿಸಿದ ಇನ್ನೊಂದು ಪಾಠ. ರೋಗಿಷ್ಟ ಮನಸ್ಸಿಗೆ, ಪಾಪಿಷ್ಟ ಕನಸು ಎಂಬಂತೆ ಮಾಡಬಾರದ್ದನ್ನು ಮಾಡಿದರೆ, ಆಗಬಾರದ್ದು ಆಗುತ್ತದೆ. ಜನರು ತಮ್ಮ ಶತ್ರುಗಳನ್ನು ಸಂಹರಿಸೋದನ್ನ ನೋಡಿದ್ದೇವೆ. ವೈರಿ ರಾಷ್ಟ್ರಗಳ ವಿರುದ್ಧ ಸಮರ ಸಾರೋದನ್ನ ಕಂಡಿದ್ದೇವೆ. ಆದರೆ, ಎಂದೂ ಕ್ಷಮಿಸದ ಅಕ್ಷಮ್ಯ ಅಪರಾಧ! ಮಾನವೀಯತೆಗೆ ಒಂದು ಕಳಂಕ.
    • ನನ್ನೆದುರು ನೀನು ಏನೇನೂ ಅಲ್ಲ ತೃಣ ಸಮಾನ ಎಂದೆಂದಿಗೂ ನಾನೇ ಬಾಸ್! Greater is greater than creatures; ನಿನ್ನ ಅಹಂಕಾರ-ಅಟ್ಟಹಾಸ ಅತಿಯಾದಾಗ, ನಿನ್ನನ್ನು ಬಗ್ಗು ಬಡೆದು, ಪ್ರಾಕೃತಿಕ ಸಮತೋಲನತೆಯನ್ನು ಕಾಪಾಡಿಕೊಳ್ಳೋದು ಹೇಗೆಂದು ನನಗೆ ಗೊತ್ತು ಎಂಬುದನ್ನು ಪ್ರಕೃತಿ ಕಲಿಸಿತು. ಮನುಷ್ಯನ ಅಹಂಕಾರವನ್ನು ಸುಟ್ಟುಹಾಕಿತು; ಅಟ್ಟಹಾಸವನ್ನು ಮಟ್ಟಹಾಕಿತು. ಎಲ್ಲೆಲ್ಲೂ ಅಂಧಕಾರವನ್ನು ತಂದು ಬಿಟ್ಟಿತು.
    • ಈ ಕೆಟ್ಟ ಸೋಂಕು ಒಮ್ಮೆ ತಗುಲಿದರೆ, ಎಷ್ಟೇ ಅಧಿಕಾರ-ಅಂತಸ್ತುಗಳಿದ್ದರೂ, ಏನೇ ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳಿದ್ದರೂ, ಯಾವುದೂ ಉಪಯೋಗಕ್ಕೆ ಬಾರದೆ ಹತಾಶನಾಗಿದ್ದಾನೆ ಮಾನವ. ಅಸ್ಪೃಶ್ಯತೆ, ಅಸಹಾಯಕತೆ ಎಂದರೇನು ಎಂಬುದರ ಸಂಪೂರ್ಣ ಪರಿಚಯ ಮಾಡಿಕೊಟ್ಟಿದೆ ಈ ಕರೊನಾ.

    ಇದನ್ನೂ ಓದಿ: ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜೂನ್ ನಲ್ಲಿ: ಸುರೇಶ್ ಕುಮಾರ್

    • ಜೀವಕ್ಕೆ ಕುತ್ತು ಬಂದಾಗ, ಈ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿಕೊಳ್ಳಲು, ಇದರ ವಿರುದ್ಧ ಹೋರಾಡಲು ಎಲ್ಲ ಭೇದ ಭಾವಗಳನ್ನು ಮರೆತು, ಜನ ಒಟ್ಟಾದರು-ಒಗ್ಗಟ್ಟಾದರು; ಭಾವನಾತ್ಮಕ ಐಕ್ಯತೆಯನ್ನು ಮೆರೆದರು.
    • ಆಧುನಿಕತೆಯ ಹೆಸರಿನಲ್ಲಿ ಕೌಟುಂಬಿಕ ಮೌಲ್ಯಗಳನ್ನು, ಮನೆ ವಾಸವನ್ನೇ ಮರೆತ ಜನ, ಮನೆಯೇ ಮಂತ್ರಾಲಯವೆಂಬ ಸತ್ಯವನ್ನು ಅರಿತುಕೊಂಡರು. ಮನೆಯಲ್ಲಿದ್ದುಕೊಂಡೂ ಕೆಲಸ ಮಾಡಲು ಸಾಧ್ಯವೆಂಬುದನ್ನು ಕಲಿತುಕೊಂಡರು. ಕೂಡಿ ಬಾಳುವ ಕಲೆಯನ್ನು, ಹಂಚಿ ತಿನ್ನುವ ಕ್ರಮವನ್ನು ಸಹನೆಯನ್ನು ಹೊಂದಾಣಿಕೆ ಎಂದರೆ ಏನೆಂಬುದನ್ನು ತಿಳಿಸಿಕೊಟ್ಟಿದೆ ಈ ಕರೊನಾ.
    • ಎಷ್ಟೊಂದು ಮಡಿ ಮೈಲಿಗೆ ಎಂದು ಹಿಂದಿನ ಕಾಲದವರನ್ನು ತಮಾಷೆ ಮಾಡುತ್ತಿದ್ದವರು ಈಗ ಅದರ ಅರ್ಥ ಮತ್ತು ಅವಶ್ಯಕತೆಯನ್ನು ಅರಿತುಕೊಂಡು, ಆರೋಗ್ಯ, ಶಿಸ್ತು, ಶುಚಿತ್ವದತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ. ಹೊರಗೆ ತಿನ್ನುವ ಚಟಕ್ಕೂ ಕಡಿವಾಣ ಹಾಕಿ, ಸಾತ್ವಿಕ ಆಹಾರ, ಸರಳ ಜೀವನದ ಮಹತ್ವವನ್ನು ತಿಳಿ ಹೇಳಿದೆ ಈ ಸೋಂಕು.

    ಇದನ್ನೂ ಓದಿ: ಇ-ಮೇಲ್​, ವಾಟ್ಸ್​ಆ್ಯಪ್​ ಮೂಲಕ ಜನೌಷಧಿ ಕೇಂದ್ರದಿಂದ ಔಷಧ ಖರೀದಿಸಬಹುದು..

    • ಎಲ್ಲರೂ ಇದ್ದರೂ, ಯಾರು ಇಲ್ಲದಂತವರಾಗೋದು ಹೇಗೆ ಎಂಬ ವಿಚಿತ್ರ ಪರಿಸ್ಥಿತಿಯನ್ನು ಈ ಗೃಹ ದಿಗ್‌ಬಂಧನ ತೋರಿಸಿಕೊಟ್ಟಿದೆ. ಮಕ್ಕಳು ವಿದೇಶದಲ್ಲಿದ್ದರಂತೂ, ನಮಗೆ ಏನೇ ಆದರೂ, ಅವರು ನಮ್ಮ ಬಳಿ ಬರುವಂತಿಲ್ಲ; ನಾವು ಅವರ ಬಳಿ ಹೋಗುವಂತಿಲ್ಲ. ಯಾರಿಗೆ ಯಾರುಂಟು ಎರವಿನ ಸಂಸಾರ? ಎಂದಂತಾಗಿದೆ.
    • ಅಂತರ್‌ಮುಖಿಗಳನ್ನಾಗಿ ನಮ್ಮನ್ನು ಮಾಡಿ, ಸಂಯಮ, ಸ್ವಯಂ ನಿಯಂತ್ರಣ, ಸ್ವಯಂ ನಿರ್ಬಂಧಗಳನ್ನು ಹುಟ್ಟು ಹಾಕಿ; ನನ್ನಿಂದ ಎಲ್ಲವೂ ಸಾಧ್ಯವೆಂದು ಬೀಗುತ್ತಿದ್ದ ಮನುಷ್ಯನಿಗೆ ಬೆಪ್ಪೆ, ನಿನ್ನ ಜೀವದ ಬೆಲೆ ಇಷ್ಟೆ ನಿನ್ನಂತಹವರು ಇದ್ದರೆಷ್ಟು ಇರದಿದ್ದರೆಷ್ಟು! ಎಂಬ ಪಾರಮಾರ್ಥಿಕ ಸತ್ಯವನ್ನು ಹೊರಹಾಕಿದೆ. ನಾವು ಹುಟ್ಟಿದ ಮಾತ್ರಕ್ಕೆ ಭೂಮಿ ಭಾರವಾಗಲೂ ಇಲ್ಲ; ಸತ್ತು ಹೋದ ಮಾತ್ರಕ್ಕೆ ಭೂಮಿ ಹಗುರವಾಗಲೂ ಇಲ್ಲ ಎಂಬ ತತ್ವವನ್ನು ಸಾರಿ ಹೇಳಿದೆ.
    • ಗೃಹ ಬಂಧನದ ಪರಿಣಾಮವಾಗಿ, ದಿನೇ ದಿನೇ ಏರುತ್ತಿದ್ದ ವಾಯು ಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯಗಳು ಕಡಿಮೆಯಾಗಿರೋದರಿಂದ ಪರಿಸರವನ್ನು ನಾವು ಹೇಗೆ ಕೆಡಿಸುತ್ತಿದ್ದೆವು ಎಂಬುದರ ಅರಿವಾಗಿದೆ, ವಾಹನ ಸಂಚಾರಗಳ ನಿರ್ಬಂಧದಿಂದ ರಸ್ತೆ ಅಪಘಾತಗಳು ಇಲ್ಲವಾಗಿವೆ.

    ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಇ-ಮೇಲ್ ಮೂಲಕ ಅರ್ಜಿ ಆಹ್ವಾನ

    • ನಮಗೂ ಜೀವಿಸುವ ಹಕ್ಕು ಇದೆ: ನಮ್ಮನ್ನು ಬದುಕಲು ಬಿಡಿ ಎಂಬ ಪಶುಪಕ್ಷಿಗಳ ಮೂಕವೇದನೆಯನ್ನು ಅರ್ಥ ಮಾಡಿಕೊಳ್ಳದ ಮನುಷ್ಯನಿಗೆ ಅವನ ಕುಲಬಾಂಧವರನ್ನು ಮಾತ್ರ ಕಾಡುತ್ತಿರುವ ಈ ಕಾಯಿಲೆ, ತಕ್ಕ ಪಾಠವನ್ನೇ ಕಲಿಸಿದೆ. ಮನುಷ್ಯರ ಕಾಟವಿಲ್ಲದೆ, ಮೃಗಾಲಯಗಳಲ್ಲಿನ ಪ್ರಾಣಿಗಳು ಹಾಯಾಗಿರುವಂತಾಗಿದೆ.
    • ಚಿತ್ರ ನಟ ನಟಿಯರಲ್ಲಿ, ಕ್ರಿಕೆಟ್ ತಾರೆಗಳಲ್ಲಿ, ರಾಜಕಾರಣಿಗಳಲ್ಲಿ ವೈದ್ಯಕೀಯ ತಂಡ, ಆರಕ್ಷಕ ದಳ, ಸಾಮಾಜಿಕ ಸೇವಾಕರ್ತರು ಮತ್ತು ಮಾಧ್ಯಮದವರೇ ನಿಜವಾದ ಹೀರೋಗಳು ಎಂಬುದರ ಅರಿವಾಗಿದೆ. ಕೆಲವು ವಿಕೃತ ಮನಸ್ಸಿನ ಕರೊನಾ ರೋಗಿಗಳಿಂದ ಉಗಿಸಿಕೊಂಡರೂ, ಹೊಡೆಸಿಕೊಂಡರೂ, ತಮ್ಮ ಜೀವದ ಹಂಗನ್ನು ತೊರೆದು, ಮನೆಯವರಿಂದ ದೂರವಾಗಿ, ರೋಗಿಗಳ ಸೇವೆ ಮಾಡುವ ಇವರೇ ಕಣ್ಣಿಗೆ ಕಾಣುವ ದೇವರುಗಳು!
    • ಅಂತೆಯೇ ದಾನ ಧರ್ಮ ಮಾಡಲು, ಸತ್ಕಾರ್ಯಗಳಿಗೆ ದೇಣಿಗೆ ನೀಡಲು, ಸಮಾಜಸೇವೆ ಮಾಡಲು ಇದಕ್ಕಿಂತ ಉತ್ತಮವಾದ ಸಕಾಲ ಇನ್ನೊಂದಿಲ್ಲವೆಂಬುದು ರವಾನೆಯಾದ ಇನ್ನೊಂದು ಸಂದೇಶ.

    ಇದನ್ನೂ ಓದಿ: ಮದುವೆಗೋ, ಮಸಣಕೋ? ಎಲ್ಲಿ, ಎಷ್ಟು ಜನ ಸೇರಬಹುದು? ಕೇಂದ್ರದ ಪರಿಷ್ಕೃತ ಆದೇಶ ಪ್ರಕಟ

    • ಒಟ್ಟಿನಲ್ಲಿ ಒಂದಂತೂ ನಿಜ: ಕರೊನಾ ಎಲ್ಲರಿಗೂ ಒಂದು ಹೊಸ ಸತ್ಯವನ್ನು, ತತ್ವವನ್ನು, ಜೀವನ ಸಿದ್ಧಾಂತವನ್ನು, ಜೀವನ ಪದ್ಧತಿಯನ್ನು ಕಲಿಸಿಕೊಟ್ಟಿದೆ. ನನಗಿಲ್ಲದ ಭೇದ ಭಾವ ನಿಮ್ಮಲ್ಲಿ ಏತಕೆ? ಎಂದು ಹೇಳಿದೆ.
    • ಆದುದರಿಂದ ಆತಂಕ ಬೇಡ: ಆತ್ಮವಿಶ್ವಾಸವಿರಲಿ. ಇದು ಒಬ್ಬರಿಗೇ ಬಂದ ಕಷ್ಟವಲ್ಲ; ಊರಿಗೆ ಬಂದ ಅನಿಷ್ಟ. ಆಶಾಭಾವವಿರಲಿ; ನಿರಾಶಾಭಾವ ಬೇಡ ಕಾರಣ ಈ ಕಷ್ಟ ಈ ನಷ್ಟ ಯಾವುದು ಶಾಶ್ವತವಲ್ಲ: ತಾತ್ಕಾಲಿಕ. ಕತ್ತಲು ಮುಗಿದ ಬಳಿಕ, ಬೆಳಕು ಹರಿಯಲೇ ಬೇಕಲ್ಲವೇ! ಸತ್ತೆನೆಂದೆನಬೇಡ: ಸೋತೆನೆಂದೆನಬೇಡ ಬತ್ತಿತೆನ್ನೊಳು ಸತ್ವದೊಡೆ ಎನಬೇಡ: ಮೃತ್ಯುವೆನ್ನುವುದೊಂದು ತೆರೆ ಇಳಿತ, ತೆರೆವರು, ಮತ್ತೆ ತೇಳ್ವುದು ನಾಳೆ ಎಂಬ ಡಿ.ವಿ.ಜಿಯವರ ಮಾತು ಸದಾ ನೆನಪಿರಲಿ. ಗೌರವಿಸು ಜೀವನವ, ಗೌರವಿಸು ಚೇತನವ.
    • ಅಂತೆಯೇ ಭಯ ಬೇಡ, ಭರವಸೆ ಇರಲಿ! ಪುಟ್ಟ ಸಸಿಯೊಂದು ಮರವಾಗೋದು ಭರವಸೆಯ ಬೇರಗಳಿಂದಲ್ಲವೇ! ಕಡಿದು ಕತ್ತರಿಸಿದರೂ ಮತ್ತೆ ಚಿಗುರಿಲ್ಲವೇ ಗಿಡ? ಮಿಂಚಿದರೂ, ಗುಡುಗಿದರೂ, ಮಳೆ ಸುರಿಸಿಲ್ಲವೇ ಮೋಡ? ಮುಂದೇನು, ಮತ್ತೇನೋ, ಇಂದಿಗಾ ಮಾತೇತಕೆ, ಇಂದಿಗಿಂದನು ಬದುಕು ನೀ ಮಂಕುತಿಮ್ಮ

    ಇದನ್ನೂ ಓದಿ: ದೇವರಕೊಂಡ ಬೆನ್ನಿಗೆ ನಿಂತ ಮಹೇಶ್ ಬಾಬು … ನನ್ನ ಸಪೋರ್ಟ್ ಇದೆ ಎಂದು ಪ್ರಿನ್ಸ್ ಹೇಳಿದ್ದೇಕೆ?

    • ಗೃಹ ಬಂಧನವಿದ್ದರೂ, ಮಾನಸಿಕ ಬಂಧನ ಬೇಡ, ಸಾಹಿತ್ಯ-ಸಂಗೀತ-ಸಂಸಾರ ನಮ್ಮ ಸಂಗಾತಿಯಾಗಿರಲಿ ಸಾಮಾಜಿಕ ಅಂತರವಿರಲಿ-ಆದರೆ ಮಾನಸಿಕ ಅಂತರ ಬೇಡ. ಸಾಕಾರಾತ್ಮಕ ಮನೋಭಾವವಿರಲಿ!.
    • ದೇಶ ದೇಶಗಳೇ Lockdown ಆಗಿವೆ ನಿಜ. ಆದರೆ, ಪ್ರೀತಿ-ಪ್ರೇಮ, ಕರುಣೆ-ಕಾಳಜಿ, ಕನಿಕರ-ಕಳಕಳಿ, ದಯೆ ಧರ್ಮ, ಆತ್ಮೀಯತೆ, ಐಕ್ಯತೆ, ಸೌಹಾರ್ದತೆಗಳು Lockdown ಆಗಿಲ್ಲವಲ್ಲ! ಅವನ್ನ ಮುಂದುವರಿಸೋಣ.
    • ಭಗವಂತನನ್ನು ಪೂಜಿಸಲು-ಪ್ರಾರ್ಥಿಸಲು, ಮಠ-ಮಂದಿರ-ಮಸೀದಿ-ಚರ್ಚುಗಳಿಗೇ ಹೋಗಬೇಕೆಂದಿಲ್ಲ! ಮನೆಯೊಳಗಿದ್ದುಕೊಂಡೂ ಸಾಧ್ಯ. ಹಬ್ಬ ಹರಿದಿನಗಳನ್ನು ಆಚರಿಸಲು ಇಂದಿನ ದಿನಗಳೇ ಆಗಬೇಕೆಂದಿಲ್ಲ. ಬದುಕಿ ಉಳಿದರೆ, ಬರುವ ವರುಷವೂ ಆಚರಿಸಬಹುದಲ್ಲ!

    ಇದನ್ನೂ ಓದಿ: ಕರ್ನಾಟಕದಲ್ಲಿ ಮದ್ಯ ಮಾರಾಟ ಮಾಡಿದ್ರೆ, ನೀವೂ ಮಾಡ್ಬೇಕು ಅಂತ ರೂಲ್ಸ್ ಇದೆಯಾ?

    • ಸದ್ಯಕ್ಕಂತೂ, Death is the only common fear science is the only common hope and humanity is the only common thread” for the control world. ಆದುದರಿಂದ let us by good human beings first and be human.
    • ಅಂತೆಯೇ, Lockdown ತೆರವು ಆದ ತಕ್ಷಣ, ಹಳೆಯ ಚಟ ಚಾಳಿಗಳಿಎ ಮತ್ತೆ ಹಿಂತಿರುಗದಿರೋಣ; ಕರೊನಾ ಕಲಿಸಿದ ಈ ದುಬಾರಿ ಪಾಠಗಳನ್ನು ಮರೆಯದಿರೋಣ, ಬನ್ನಿ ಬದುಕನ್ನು ಪ್ರೀತಿಸೋಣ!

    ಪ್ರತಿಕ್ರಿಯಿಸಿ: [email protected]

    ರಾಮ್ ಗೋಪಾಲ್ ವರ್ಮಾ ಬಾಯಿ ಮುಚ್ಚಿಸಿದ ಸೋನಾ!

    ಲೇಸ್​ ಬ್ರಾ ಆಕಾರದ ಫೇಸ್​ಮಾಸ್ಕ್​ಗಳಿಗೆ ಜಪಾನಿನಲ್ಲಿ ಭಾರಿ ಬೇಡಿಕೆ- ಮಾರುಕಟ್ಟೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts