More

    ಮದುವೆಗೋ, ಮಸಣಕೋ? ಎಲ್ಲಿ, ಎಷ್ಟು ಜನ ಸೇರಬಹುದು? ಕೇಂದ್ರದ ಪರಿಷ್ಕೃತ ಆದೇಶ ಪ್ರಕಟ

    ನವದೆಹಲಿ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಮದುವೆ, ಅಂತ್ಯಕ್ರಿಯೆ ಮತ್ತಿತರ ಕಾರ್ಯಗಳಿಗೆ ಎಷ್ಟು ಜನ ಸೇರಬಹುದು ಎಂಬುದರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಮಂಗಳವಾರ ಪರಿಷ್ಕರಿಸಿ ಆದೇಶ ಹೊರಡಿಸಿದೆ.

    ‘‘ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಮದುವೆಗಳಲ್ಲಿ ಐವತ್ತಕ್ಕಿಂತ ಹೆಚ್ಚು ಜನ ಇರಬಾರದು. ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಇರಕೂಡದು’’ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲ ಶ್ರೀವಾತ್ಸವ ಹೇಳಿದ್ದಾರೆ.

    ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಇ-ಮೇಲ್ ಮೂಲಕ ಅರ್ಜಿ ಆಹ್ವಾನ

    ಈ ಮೊದಲು ಮಾರ್ಚ್ 15ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಸೂಚಿಸಲಾಗಿತ್ತು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಅಲ್ಲಿ ಸೇರುವ ಸ್ನೇಹಿತರು, ಪರಿಚಿತರು ಮತ್ತು ಕುಟುಂಬದವರಿಗೂ ಕರೊನಾ ಸೋಂಕು ತಗುಲಬಹುದೆಂಬ ಕಾರಣಕ್ಕಾಗಿ ಜನ ಸೇರುವುದನ್ನು ನಿರ್ಬಂಧಿಸಲಾಗಿತ್ತು. ದೈಹಿಕ ಅಂತರ ಕಾಯ್ದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿತ್ತು. ಅದರಲ್ಲೂ ಕರೊನಾ ಸಂಬಂಧಿ ಸಾವುಗಳ ಸಂದರ್ಭದಲ್ಲಿ ಅಂತ್ಯಸಂಸ್ಕಾರದಲ್ಲಿ ಕೇವಲ ಐದು ಜನರು ಮಾತ್ರ ಭಾಗವಹಿಸಬಹುದಾಗಿತ್ತು.

    ಇದನ್ನೂ ಓದಿ: ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!

    ಇನ್ನು ಕೆಲವು ನಿಯಮಗಳ ಕುರಿತೂ ಅಧಿಕಾರಿಗಳು ಮಂಗಳವಾರದ ಗೃಹ ಸಚಿವಾಲಯದ ಬ್ರೀಫಿಂಗ್‌ನಲ್ಲಿ ವಿವರ ನೀಡಿದರು.
    ‘‘ಎಲ್ಲ ಕಚೇರಿಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ. ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ಲಭ್ಯವಿದೆಯೇ ಎಂಬುದನ್ನು ಕಚೇರಿಯ ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳಬೇಕು. ದೈಹಿಕ ಅಂತರವನ್ನು ಪಾಲಿಸಬೇಕು. ಎಲ್ಲ ಉದ್ಯೋಗಿಗಳೂ ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಣಿ ಆಗಿದ್ದಾರೆಯೇ ಎಂಬುದನ್ನು ಉದ್ಯೋಗದಾತರು ಖಚಿತಪಡಿಸಿಕೊಳ್ಳಬೇಕು’’ ಎಂದು ಹೇಳಿದರು. (ಏಜೆನ್ಸೀಸ್​)

    ಇ-ಮೇಲ್​, ವಾಟ್ಸ್​ಆ್ಯಪ್​ ಮೂಲಕ ಜನೌಷಧಿ ಕೇಂದ್ರದಿಂದ ಔಷಧ ಖರೀದಿಸಬಹುದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts