More

    ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!

    ಶೆಲ್ಡನ್​: ಬ್ರಿಟನ್​​ನ ಶೆಲ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿಲಕ್ಷಣ ಘಟನೆ ಈಗ ಜಗತ್ತಿನ ಗಮನಸೆಳೆದಿದೆ. ಆ ಠಾಣೆಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ವಿರುದ್ಧ ಚೀಸ್ ತುರಿಗಳನ್ನು ಬಳಸಿ ರೂಮ್​ಮೇಟ್​ಗೆ ಹಲ್ಲೆ ನಡೆಸಿ ಪ್ರಕರಣ ದಾಖಲಾಗಿದೆ! ಚೀಸ್ ಬಳಸಿ ಹಲ್ಲೆ ನಡೆಸೋದಾ ಅಂತ ಹುಬ್ಬೇರಿಸಬೇಡಿ ಅಸಲಿ ಕಥೆ ಇಲ್ಲಿದೆ..

    ನಾರ್ಥ್​ವೆಸ್ಟ್​ ಲೋವಾ ಕಮ್ಯೂನಿಟಿ ಕಾಲೇಜಿನ ವಿದ್ಯಾರ್ಥಿನಿಯರು ಅವರು. ನಾಲ್ವರೂ ಒಂದೇ ರೂಮಿನಲ್ಲಿದ್ದ ಗೆಳತಿಯರು. ಈ ಪೈಕಿ ನರ್ಸಿಂಗ್​ ವಿದ್ಯಾರ್ಥಿನಿ ಅನ್​ ಸಿ, ಕಿಯಾ ಎಲೈನ್​, ಎಲ್ಲೀ ಟಿ ಎಂಬ ಮೂವರಿಗೆ ಬೋರ್​ ಹೊಡೆಯೋದಕ್ಕೆ ಶುರುವಾಗಿತ್ತು. ಅದನ್ನು ಹೋಗಲಾಡಿಸಲು ಅವರು ನಾಲ್ಕನೇಯವಳನ್ನು ಬೇಸ್ತು ಬೀಳಿಸೋದಕ್ಕೆ ಸ್ಕೆಚ್​ ಹಾಕಿಕೊಂಡ್ರು. ನಾಲ್ಕನೇಯವಳ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

    ಇದನ್ನೂ ಓದಿ: VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಬೇಜಾರು ಹೋಗಲಾಡಿಸಲು ಅವರು ನಾಲ್ಕನೇಯವಳು ಹೊರಗೆ ಹೋಗಿದ್ದಾಗ ಅವಳ ಚೀಸ್​ ತುರಿಯ ಬ್ಯಾಗ್​ಗೇ ಕೈ ಹಾಕಿದ್ದರು. ಅಂಥದ್ದೊಂದು ಕೆಟ್ಟ ಉಪಾಯ ಅವರಿಗೇಕೆ ಹೊಳೆಯಿತೋ ಗೊತ್ತಿಲ್ಲ. ನಾಲ್ಕನೇಯವಳು ರೂಮಿಗೆ ಬಂದು ಚೀಸ್​ ಬಳಸುವುದನ್ನೇ ಅವರು ಕಾಯುತ್ತಿದ್ದರು. ಆದರೆ, ತಾವು ತೋಡಿದ ಹಳ್ಳಕ್ಕೆ ತಾವೇ ಬೀಳುತ್ತೇವೆ ಎಂಬ ಅರಿವು ಆ ಮೂವರಿಗೂ ಇರಲಿಲ್ಲ. ಅಂಥ ಟ್ವಿಸ್ಟ್​ ಅಲ್ಲಿ ಕಾದಿತ್ತು.

    ಚೀಸ್ ಬಳಸಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಆ ಮೂವರು ರೂಮ್​ ಮೇಟ್​ಗಳ ವಿರುದ್ಧವೇ ದೂರು ದಾಖಲಾಯಿತು ಶೆಲ್ಡನ್ ಪೊಲೀಸ್ ಠಾಣೆಯಲ್ಲಿ! ವಿಚಾರಣೆ ವೇಳೆ ಅಸಲಿ ಕಥೆ ಬಯಲಿಗೆ ಬಂತು. ಅದು ಹೀಗಿತ್ತು- ಆ ಮೂವರ ಪೈಕಿ ಒಬ್ಬಾಕೆ ತನ್ನ ಕಾಲಿನ ಸತ್ತ ಚರ್ಮವನ್ನು ಕ್ಲೀನ್ ಮಾಡುತ್ತಿದ್ದ ವೇಳೆ ಬೋರ್​ ಆಗೋದನ್ನು ತಪ್ಪಿಸುವ ಕೆಟ್ಟ ಐಡಿಯಾ ಹೊಳೆದಿತ್ತು. ಹಾಗಾಗಿಯೇ ನಾಲ್ಕನೇಯವಳ ಚೀಸ್​ ಬ್ಯಾಗ್​ಗೇ ಅವರು ಕೈ ಹಾಕಿದ್ದರು. ಚೀಸ್​ ತುರಿಗಳಿಗೂ ಕಾಲಿನ ಚರ್ಮದ ಪೀಸ್​ಗಳಿಗೂ ವ್ಯತ್ಯಾಸ ಗೊತ್ತಾಗಲ್ಲ ಎಂಬ ಕಾರಣಕ್ಕೆ ಅವರು ಆ ಕಸವನ್ನು ಚೀಸ್ ತುರಿಗಳ ಜತೆಗೆ ಮಿಕ್ಸ್​ ಮಾಡಿದ್ದರು!!! ಅಲ್ಲದೆ, ಆ ಕಲಬೆರಕೆ ಚೀಸ್​ ಅನ್ನು ನಾಲ್ಕನೇಯವಳು ತಿನ್ನುವುದನ್ನು ನೋಡಿ ಗೋಳು ಹೊಯ್ಯಬೇಕು ಎಂದು ಕಾಯುತ್ತಿದ್ದರು.

    ಇದನ್ನೂ ಓದಿ: ಲೇಸ್​ ಬ್ರಾ ಆಕಾರದ ಫೇಸ್​ಮಾಸ್ಕ್​ಗಳಿಗೆ ಜಪಾನಿನಲ್ಲಿ ಭಾರಿ ಬೇಡಿಕೆ- ಮಾರುಕಟ್ಟೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿ!

    ಪೊಲೀಸರ ಎಂಟ್ರಿಯೊಂದಿಗೆ ಮೂವರ ಜಂಘಾಬಲವೇ ಉಡುಗಿ ಹೋಗಿತ್ತು. ಅಲ್ಲಿನ ಕಾನೂನು ಪ್ರಕಾರ, ಚೀಸ್​ಗೆ ಕಾಲಿನ ಸತ್ತ ಚರ್ಮದ ಚೂರುಗಳನ್ನು ಮಿಶ್ರಣ ಮಾಡಿ ರೂಮ್​ ಮೇಟ್​ ಅನ್ನು ಗೋಳು ಹುಯ್ಯೋದಕ್ಕೆ ಪ್ರಯತ್ನಿಸಿದ್ದು ಹಲ್ಲೆಗೆ ಸಮ. ಹೀಗಾಗಿ ಅವರು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಕೂಡಲೇ ಆ ಪ್ರಕರಣವನ್ನು ಅಲ್ಲೇ ತಿಳಿಗೊಳಿಸುವ ಪ್ರಯತ್ನ ನಡೆಯಿತು. ಕಾಲೇಜು ಆಡಳಿತ ಮಂಡಳಿ ಮೂವರಿಗೂ ಎಚ್ಚರಿಕೆ ನೀಡಿತು. ಇಷ್ಟೆಲ್ಲ ಆಗಿಯೂ, ಮೂವರ ಪ್ರಯತ್ನ ನಾಲ್ಕನೇಯವಳಿಗೆ ಹೇಗೆ ತಿಳಿಯತು ಎಂಬುದೇ ಸಸ್ಪೆನ್ಸ್ ಆಗಿ ಉಳಿದುಬಿಟ್ಟಿದೆ!!!. (ಏಜೆನ್ಸೀಸ್)

    ಲಾಕ್​ಡೌನ್ ಅವಧಿಯಲ್ಲಿ ನಿಗೂಢತೆ ಸೃಷ್ಟಿಸಿದ ದಂಪತಿ: ಇದು ಅವರ ಬೆಡ್​ ರೂಮ್​ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts