More

    ಜ್ವರ, ಶೀತ ಇದ್ದರೆ ತಕ್ಷಣ ಕರೊನಾ ಟೆಸ್ಟ್ ಮಾಡಿಸಿ

    ತ್ಯಾಗರ್ತಿ: ಶಬರಿಮಲೆ ಯಾತ್ರೆಗೆ ಹೋಗಿ ಬರುವವರು ಹಾಗೂ ಅಂತಾರಾಜ್ಯ ಪ್ರವಾಸ ಮಾಡಿದವರು ಕೆಮ್ಮು, ಶೀತ, ಜ್ವರ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀದೇವಿ ಹೇಳಿದರು.

    ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕರೊನಾ ಹಾಗೂ ಕೆಎಫ್‌ಡಿ ಮುಂಜಾಗ್ರತಾ ಮಾರ್ಗಸೂಚಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ತ್ಯಾಗರ್ತಿ ಭಾಗದಲ್ಲಿ ಯಾವುದೇ ಕರೊನಾ ಪ್ರಕರಣ ಕಂಡುಬಂದಿಲ್ಲ. ಆದರೂ ಮುಂಜಾಗ್ರತೆ ಇರಬೇಕು. ಆರೋಗ್ಯ ಇಲಾಖೆಯ ಸೂಚನೆಯಂತೆ ಜ್ವರ ಲಕ್ಷಣಗಳಿದ್ದರೆ ತಪ್ಪದೇ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
    ಕೆಎಫ್‌ಡಿ ಹತೋಟಿಯಲ್ಲಿದೆ. ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ಕೆಎಫ್‌ಡಿ ಪ್ರಕರಣ ಕಂಡು ಬಂದಿಲ್ಲ. ಮಂಗಗಳು ಸಾವನ್ನಪ್ಪಿದರೆ ಆರೋಗ್ಯ, ಅರಣ್ಯ, ಪಶು ವೈದ್ಯಕೀಯ, ಗ್ರಾಪಂ ಸಹಯೋಗದಲ್ಲಿ ಅದರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಬೇಕು ಎಂದು ಸೂಚಿಸಿದರು.
    ಪಿಡಿಒ ಮೋಹನ್ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಸರ್ಕಾರ ನೀಡುವ ಮಾರ್ಗಸೂಚಿ ಪಾಲಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಹೇಳಿದರು.
    ತ್ಯಾಗರ್ತಿ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕೇಶ್, ಉಪಾಧ್ಯಕ್ಷೆ ರೇಣುಕಾ ಸುರೇಶ್, ಹಿರೇಬಿಲಗುಂಜಿ ಗ್ರಾಪಂ ಅಧ್ಯಕ್ಷ ನಾಗರಾಜ, ಪಿಡಿಒ ಶೇಖರ್, ಸದಸ್ಯ ಸುಭಾಷ್ ಕಲ್ಲನ, ಮರಾಠಿ ಪರಶುರಾಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts