ಲಾಯಿಲ ಚಂದ್ಕೂರು ರಸ್ತೆಯಲ್ಲಿ ಚಿರತೆ ಓಡಾಟ : ಅರಣ್ಯ ಇಲಾಖೆಯಿಂದ ಪರಿಶೀಲನೆ

New Project (15)
Published on

ಬೆಳ್ತಂಗಡಿ: ಲಾಯಿಲ ಗ್ರಾಮದ ಚಂದ್ಕೂರು ರಸ್ತೆಯಲ್ಲಿ ಚಿರತೆ ಓಡಾಟ ಕಂಡು ಬಂದಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಚಂದ್ಕೂರು ರಸ್ತೆಯ ನಿರ್ಪರಿ ಎಂಬಲ್ಲಿ ಸ್ಥಳೀಯರಾದ ಸಿಪ್ರಿಯನ್ ಎಂಬುವರು ರಸ್ತೆಯಲ್ಲಿ ಬರುತ್ತಿದ್ದಾಗ ದೊಡ್ಡ ಗಾತ್ರದ ಚಿರತೆ ರಸ್ತೆಯಲ್ಲಿ ಹೋಗುತ್ತಿರುವುದನ್ನು ಗಮನಿಸಿದ್ದಾರೆ.

ಈ ಬಗ್ಗೆ ಪಕ್ಕದ ಮನೆಯ ಸುನೀಲ್ ಎಂಬುವರಿಗೆ ವಿಷಯ ತಿಳಿಸಿದಾಗ ಸ್ಥಳೀಯ ಪಂಚಾಯಿತಿ ಸದಸ್ಯ ಪ್ರಸಾದ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಗೆ ವಿಷಯ ತಿಳಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.

ಈ ಬಗ್ಗೆ ಹಂದೆವೂರು, ಅಮ್ಮನಂಗಡಿ, ನಿರ್ಪರಿ ಭಾಗದ ಕೆಲವು ಮನೆಗಳಿಗೆ ತೆರಳಿ ರಾತ್ರಿ ಹೊತ್ತು ಒಬ್ಬಂಟಿಯಾಗಿ ಸಂಚರಿಸದಂತೆ ಹಾಗೂ ಸಾಕುಪ್ರಾಣಿಗಳ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ. ಮತ್ತೊಮ್ಮೆ ಚಿರತೆ ಕಂಡು ಬಂದರೆ ಗೂಡು ಇಡುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಇದೇ ಸಮಯದಲ್ಲಿ ಚಿರತೆ ಈ ಭಾಗದಲ್ಲಿ ಕಂಡು ಬಂದಿದ್ದು, ಕೆಲವು ಮನೆಗಳ ಸಾಕುನಾಯಿಗಳನ್ನು ಹಿಡಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net