ತಾಳಮದ್ದಳೆ ಕಲಾವಿದರಿಗೆ ಮಾತೇ ಪ್ರಧಾನ : ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿಕೆ

New Project (13)
Published on

ಕಟೀಲು: ಮೌನದ ಸಾಂಗತ್ಯ ಮಾತಿಗೆ ಬಹಳ ಇದೆ. ಮಾತೇ ಪ್ರಧಾನವಾಗಿರುವ ತಾಳಮದ್ದಳೆ ಕಲಾವಿದರಿಗೆ ಇದು ತಿಳಿದಿರಬೇಕು ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನಲ್ಲಿ ಯಕ್ಷಗಾನ ಅಕಾಡೆಮಿ, ಶ್ರೀ ಕಟೀಲು ದೇವಳ, ಶ್ರೀ ದುರ್ಗಾ ಮಕ್ಕಳ ಮೇಳ ಸಹಯೋಗದಲ್ಲಿ ನಡೆದ ಎರಡು ದಿನಗಳ ತಾಳಮದ್ದಳೆ ಕಮ್ಮಟದ ವಿಚಾರಗೋಷ್ಠಿ ತಾಳಮದ್ದಳೆಯಲ್ಲಿ ಪುರಾಣ, ಪ್ರಸಂಗಗಳ ಸಮನ್ವಯದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊಗಳಿದರೆ ತೆಗಳಿದಂತೆ ತೆಗಳಿದರೆ ಹೊಗಳಿದಂತೆ ಕಾಣುವಂತೆ ಮಾಡುವ, ವಿರೋಧ-ಅವಿರೋಧವನ್ನು ಒಟ್ಟಿಗೆ ಕಾಣುವ ಸಾಧ್ಯತೆ ಮಾತಿಗೆ ಇದೆ. ಆಧ್ಯಾತ್ಮಿಕತೆ ರಹಸ್ಯ ಅರ್ಥೈಸಿಕೊಂಡರೆ ಕಲಾವಿದ ಬೆಳೆಯುತ್ತಾನೆ ಎಂದರು.

ಶ್ರೀಧರ ಡಿ.ಎಸ್., ಗಣರಾಜ ಕುಂಬ್ಳೆ , ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವರಂಗಾ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net