ಪರಿಷತ್ ಚುನಾವಣೆ: ನಮೋಶಿ, ಪುಟ್ಟಣ್ಣ, ಚಿದಾನಂದಗೌಡ, ಸಂಕನೂರ ಬಿಜೆಪಿ ಅಭ್ಯರ್ಥಿಗಳು

Namoshi and Puttanna
Published on

ನವದೆಹಲಿ: ಕರ್ನಾಟಕ ಮತ್ತು ಬಿಹಾರದ ವಿಧಾನ ಪರಿಷತ್ತಿನ ಒಟ್ಟು ಒಂಭತ್ತು ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇಂದು ಸಂಜೆ ಪ್ರಕಟಿಸಿದೆ. ಇದರಲ್ಲಿ ಬಿಹಾರದ ಐದು ಮತ್ತು ಕರ್ನಾಟಕದ ನಾಲ್ಕು ಸ್ಥಾನಗಳ ಅಭ್ಯರ್ಥಿಗಳ ಹೆಸರಿವೆ.

ಈ ಪಟ್ಟಿ ಪ್ರಕಾರ, ಬಿಹಾರದ ಕೋಸಿ ಸ್ನಾತಕ್ ಕ್ಷೇತ್ರಕ್ಕೆ ಎನ್​.ಕೆ.ಯಾದವ್, ಪಟನಾ ಶಿಕ್ಷಕ ಕ್ಷೇತ್ರಕ್ಕೆ ನವಲ್ ಕಿಶೋರ್ ಯಾದವ್, ದರ್ಬಂಗ್ ಶಿಕ್ಷಕ ಕ್ಷೇತ್ರಕ್ಕೆ ಸುರೇಶ್ ರಾಯ್​, ತಿರ್​ಹತ್ ಶಿಕ್ಷಕ ಕ್ಷೇತ್ರಕ್ಕೆ ನರೇಂದ್ರ ಸಿಂಹ, ಸಾರಣ್​ ಶಿಕ್ಷಕ ಕ್ಷೇತ್ರಕ್ಕೆ ಚಂದ್ರಮಾ ಸಿಂಹರನ್ನು ಅಭ್ಯರ್ಥಿಗಳಾಗಿ ಬಿಜೆಪಿ ಕಣಕ್ಕೆ ಇಳಿಸಿದೆ.

ಇದೇ ರೀತಿ, ಕರ್ನಾಟಕದಲ್ಲಿ ಆಗ್ನೇಯ ಸ್ನಾತಕ ಕ್ಷೇತ್ರಕ್ಕೆ ಚಿದಾನಂದ ಎಂ.ಗೌಡ, ಪಶ್ಚಿಮ ಸ್ನಾತಕ ಕ್ಷೇತ್ರಕ್ಕೆ ಎಸ್​.ವಿ.ಸಂಕನೂರ, ಈಶಾನ್ಯ ಶಿಕ್ಷಕ ಕ್ಷೇತ್ರಕ್ಕೆ ಶಶಿಲ್ ಜಿ ನಮೋಶಿ, ಬೆಂಗಳೂರು ಶಿಕ್ಷಕ ಕ್ಷೇತ್ರಕ್ಕೆ ಪುಟ್ಟಣ್ಣ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net