17ನೇ ವಯಸ್ಸಿಗೆ ಶಾಲೆ ಬಿಟ್ಟ.. 20ನೇ ವಯಸ್ಸಿಗೆ ಕ್ಯಾನ್ಸರ್​ ಗೆದ್ದ! ಕಂಡ ಕನಸು ನನಸು ಮಾಡಿಕೊಂಡ ಯುವಕ | Beat Cancer

Untitled design (86)
Published on

ವೃತ್ತಿಪರ ಫಿಟ್ನೆಸ್ ತರಬೇತಿ ಕೇಂದ್ರ ತೆರೆಯುವ ಕನುಸು ಕಾಣುತ್ತಿದ್ದ ಬಾಲಕ ತನ್ನ 17ನೇ ವಯಸ್ಸಿಗೆ ಶಾಲೆಯನ್ನು ಬಿಟ್ಟು ದೆಹಲಿಗೆ ತೆರಳಿದ. ಬಳಿಕ ಕೋವಿಡ್​ ಸಮಯದಲ್ಲಿ ಪಿಟ್ನೆಸ್​ ರೀಲ್ಸ್​ಗಳನ್ನು ನೋಡುತ್ತಾ. ತನ್ನ ದೇಹವನ್ನು ಗಟ್ಟಿಮುಟ್ಟಾಗಿ ಮಾಡಿಕೊಳ್ಳುವ ಕನಸು ಕಾಣುವುದ ಜತೆ ಅದೇ ರೀತಿ ದೇಹವನ್ನು ದೃಢ ಮಾಡಿಕೊಂಡ. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. 20ನೇ ವಯಸ್ಸಿಗೆ ಕ್ಯಾನ್ಸರ್ ರೋಗ ಧೃಢಪಟ್ಟಿತು.....

ಹೌದು, ಸಾಮಾನ್ಯವಾಗಿ ಹೆಚ್ಚಿನ ಹದೆಹರೆಯದವರು ಪಠ್ಯಪುಸ್ತಕ ಹಾಗೂ ಪರೀಕ್ಷೆಗಳಿಗೆ ಸಿದ್ಧ ಆಗುವ ಸಮಯಲ್ಲಿ ಉತ್ತರಖಂಡದ ಸಿತಾರಗಂಜ್​​ನ ಯುವಕ ಪರಸ್​​ ಬಜಾಜ್​​ ಪಿಟ್ನೆಸ್​ ಕನಸು ಕಾಣುತ್ತಿದ್ದ. ಓದು ಎಂದಿಗೂ ಅವನ ತಲೆಯೊಳಗೆ ಹೋಗಲಿಲ್ಲ. ಹೀಗಾಗಿ, ಅವನು ಕೋವಿಡ್​-19 ಸಮಯದಲ್ಲಿ ಪಿಟ್ನೆಸ್​ ಬಗ್ಗೆ ರೀಲ್ಸ್​ಗಳನ್ನು ನೋಡುತ್ತಾ ಸದ್ದಿಲ್ಲದೇ ದೇಹ ದಂಡಿಸುವ ಕಾರ್ಯಕ್ಕೆ ಕೈ ಹಾಕಿದನು.

ಕೇವಲ 17ನೇ ವಯಸ್ಸಿಗೆ ಶಾಲೆ ತೊರೆದು ಪಿಟ್ನೆಸ್​​ ಕನಸಿನ ಹಾದಿ ಹಿಡಿಯಲು ಪಿಯುಸಿ ತೊರೆದ ಪರಸ್​, ಪಿಟ್ನೆಸ್​ ಅಕಾಡೆಮೆಯಲ್ಲಿ ತರಬೇತಿ ಪಡೆಯಲು ದೆಹಲಿಗೆ ತೆರಳಿದನು. ಬಳಿಕ ಅವರು ಇತರರಿಗೆ ಕಲಿಸಲು ಪ್ರಾರಂಭಿಸಿದರು. ಅಲ್ಲಿಂದ ಒಂದು ಕನಸು ರೂಪುಗೊಂಡಿತು. ಆದು ಏನೆಂದ್ರೆ ತನ್ನದೇ ಆದ ಜಿಮ್ ತೆರೆಯುವುದು.

18ನೇ ವಯಸ್ಸಿನಲ್ಲಿ ಸರ್ಕಾರಿದಿಂದ ಸಾಲ ಪಡೆದು ತನ್ನದೇ ಆದ ಜಿಮ್​ ಸ್ಥಾಪನೆ ಮಾಡಿದನು.ಜಿಮ್​ಗೆ ಬೇಕಾದ ಸಲಕರಣೆಗಳು ತಂದುಕೊಂಡನು. ಅಲ್ಲಿಂದ ತಮ್ಮದೇ ಊರಿನ ಯುವಕರಿಗೆ ಜಿಮ್​ ಮತ್ತು ದೇಹ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹೇಳಿದನು. ಗ್ರಾಹರಿಗೆ ತರಭೇತಿ ನಿಡಲು ಪ್ರಾರಂಭಿಸಿದನು. ಅಲ್ಲಿಂದ ಅವನ ಉದ್ಯೋಗ ಬೆಳೆಯಿತು. ಫಿಟ್ನೆಸ್ ಕೇವಲ ಸ್ನಾಯುಗಳ ಬಗ್ಗೆ ಅಲ್ಲ - ಅದು ಶಿಸ್ತಿನ ಬಗ್ಗೆ ಎಂದು ನಾನು ಕಲಿತದ್ದು ಅಲ್ಲೇ" ಎಂದು ಬಜಾಜ್ ಹ್ಯೂಮನ್ಸ್ ಆಫ್ ಬಾಂಬೆಗೆ ವರದಿಗೆ ತಿಳಿಸಿದ್ದಾರೆ.

ಕ್ಯಾನ್ಸರ್ ಗೆದ್ದ ಪರಾಸ್​ ಬಜಾಜ್​​

ಜಿಮ್​ ಆರಂಭವಾಗಿ 2 ತಿಂಗಳು ಕಳೆದ ನಂತರ ಜೀವನ ವಿನಾಶಕಾರಿತ್ತ ಸಾಗಲು ಆರಂಭಿಸಿದನು. ಸಾಮಾನ್ಯ ಕೆಮ್ಮುನಿಂದ ಆರಂಭವಾಗಿ ಹೆಚ್ಚಿನ ಗಂಭೀರ ಕಾಯಿಲೆಯಾಗಿ ಪರಿಣಮಿಸಿತು ಈ ಕ್ಯಾನ್ಸರ್. ಅವರಿಗೆ ಬಲಭಾಗದ ಶ್ವಾಸಕೋಶದಲ್ಲಿ 5 ಕೆಜಿ ಕ್ಯಾನ್ಸರ್​ ಗಡ್ಡೆ ಇರುವುದು ಪತ್ತೆಯಾಯಿತು. ನಂತರ ಕೀಮೋ ಚಿಕಿತ್ಸೆ ನೀಡಲಾಯಿತು, ಮತ್ತು ದೈಹಿಕ ಕ್ಷೀಣತೆಯ ಕಠಿಣ ಹಂತವೂ ಆಯಿತು. "ನನ್ನ ಸ್ನಾಯುಗಳು ಮಾಯವಾದವು. ಕೂದಲು ಉದುರುತ್ತಿತ್ತು. ನಾನು ಕುಳಿತೇ ಮಲಗುತ್ತಿದ್ದೆ - ಮಲಗುವುದು ಅಸಾಧ್ಯವಾಗಿತ್ತು" ಎಂದು ಅವರು ಪರಾಸ್​​ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಪ್ರೇರಣೆಯ ಮೂಲವಾಗಿದ್ದ ಕನ್ನಡಿ, ಅವನು ಎಷ್ಟು ಕಳೆದುಕೊಂಡಿದ್ದಾನೆ ಎಂಬುದರ ಜ್ಞಾಪನೆಯಾಯಿತು. ಆದರೂ ಅವರ ಅತ್ಯಂತ ದುರ್ಬಲ ಕ್ಷಣಗಳಲ್ಲಿಯೂ ಅವರು ಒಂದು ಆಲೋಚನೆಯನ್ನು ಇಟ್ಟುಕೊಂಡಿದ್ದರು ಅದು ''ನನ್ನ ಫಿಟ್ನೆಸ್ ಕಟ್ಟುಪಾಡು ಮತ್ತು ಜಿಮ್‌ಗೆ ಏನಾಗುತ್ತದೆ?"

2024ರ ಏಪ್ರಿಲ್ 30ರಂದು, ಪ್ಯಾರಸ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಕೇವಲ 12 ದಿನಗಳ ನಂತರ, ಅವರನ್ನು ಕ್ಯಾನ್ಸರ್ ಮುಕ್ತ ಎಂದು ಘೋಷಿಸಲಾಯಿತು. ಮತ್ತು ಒಂದೂವರೆ ತಿಂಗಳ ನಂತರ, ಅವರು ತಮ್ಮ ಜಿಮ್‌ಗೆ ಮರಳಿದರು. ಅವರ ದೇಹವು ದುರ್ಬಲವಾಗಿತ್ತಾದರೂ ಅವರ ಆತ್ಮವು ಎಂದಿಗಿಂತಲೂ ಬಲವಾಗಿತ್ತು. ಇಂದು, ಪರಾಸ್ ತನ್ನ ಶಕ್ತಿ ಮತ್ತು ಕಥೆಯನ್ನು ಪುನರ್ನಿರ್ಮಿಸಲು ಮುಂದುವರೆದಿದ್ದಾರೆ. ಈಗ ಕ್ಯಾನ್ಸರ್ ಮುಕ್ತರಾಗಿರುವ ಅವರು ತಡವಾಗಿ 200 ಕೆಜಿ ತೂಕ ಇಳಿಸುವ ಮೂಲಕ ಒಂದು ಮೈಲಿಗಲ್ಲನ್ನು ತಲುಪಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net