ಅಕಾಲಿಕ ಮರಣವನ್ನು ತಪ್ಪಿಸುವುದೇಗೆ? ಪ್ರೇಮಾನಂದ​ ಮಹಾರಾಜ್ ಹೇಳಿದ್ದು ಹೀಗೆ.. | Premature Death

Untitled design (85)
Published on

Premature Death : ಶ್ರೀಕೃಷ್ಣನ ಮೇಲಿನ ಭಕ್ತಿಗೆ ಹೆಸರುವಾಸಿಯಾಗಿರುವ ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರು ಭಾರತದ ಹಿಂದು ಧರ್ಮದ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದಾರೆ. ಶ್ರೀಕೃಷ್ಣನಿಗೆ ಅರ್ಪಿತವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ಶ್ರೀಕೃಷ್ಣನ ಕಟ್ಟಾ ಭಕ್ತರಾಗಿದ್ದು, ಶ್ರೀಕೃಷ್ಣನ ಮೇಲಿನ ಪ್ರೀತಿ ಮತ್ತು ಭಕ್ತಿಯ ಮಹತ್ವವನ್ನು ಯಾವಾಗಲೂ ಒತ್ತಿ ಹೇಳುತ್ತಾರೆ.

ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರ ಬಗ್ಗೆ ಸಮಾಜದಲ್ಲಿ ಅಪಾರ ಗೌರವವಿದೆ. ಅವರ ಆಧ್ಯಾತ್ಮಿಕ ಪ್ರವಚನಗಳು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿವೆ ಮತ್ತು ಅವರ ಧ್ವನಿಯು ಶಾಂತಿ, ಉದ್ದೇಶ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಬಯಸುವ ಅಸಂಖ್ಯಾತ ಜನರಿಗೆ ಮಾರ್ಗದರ್ಶಕ ಬೆಳಕಾಗಿದೆ. ಅವರು ಹೇಳುವ ಪ್ರವಚನದಲ್ಲಿ ಇದೀಗ ಅಕಾಲಿಕ ಮರಣ ಮತ್ತು ಆದರಿಂದ ತಪ್ಪಿಸಿಕೊಳ್ಳೊದೇಗೆ? ಎಂದು ಕೆಲ ಪರಿಹಾರಗಳನ್ನು ಹೇಳಿದ್ದಾರೆ.

ಜೀವನ ತುಂಬಾ ಚಿಕ್ಕದಾಗಿದೆ. ಇತ್ತೀಚಿನ ದಿನಗಳಲ್ಲಿ ನಾವು ಯಾರೊಂದಿಗೆ ಯಾವಾಗ? ಸಂವಹನ ಕಳೆದುಕೊಳ್ಳುತ್ತೇವೆಯೇ ತಿಳಿಯದು? ಕೆಲವರು ಅಕಾಲಿಕ ಮತ್ತು ಅಪಘಾತದಿಂದ ದಿಢೀರ್​ ಸಾಯುತ್ತಾರೆ. ಈ ದುರದೃಷ್ಟಕರ ಘಟನೆಯಿಂದ ತಪ್ಪಿಸಿಕೊಳ್ಳೊದೇಗೆ? ಎಂದು ಭಕ್ತರೊಬ್ಬರು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸಿದ ಸ್ವಾಮಿ ಪ್ರೇಮಾನಂದ ಮಹಾರಾಜ್ ತಪ್ಪಿಸಿಕೊಳ್ಳುವ ಹಂತಗಳನ್ನು ಹೇಳಿದ್ದಾರೆ.

ಪ್ರೇಮಾನಂದ ಮಹಾರಾಜ್ ಹೇಳಿದ್ದೇನು?

ನೀವು ಮೆನೆಯಿಂದ ಹೊರ ಹೋದಾಗಲೆಲ್ಲಾ "ಕೃಷ್ಣಾಯ ವಾಸುದೇವಾಯ ಹರಾಯೇ ಪರಮಾತ್ಮನೇ ಪ್ರಣತಃ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ" ಎಂಬ ಮಂತ್ರವನ್ನು ಕನಿಷ್ಠ 11 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ನಿಮಗೆ ಎಂದಿಗೂ ಅಪಘಾತವಾಗುವುದಿಲ್ಲ.

ಪ್ರತಿದಿನ ದೇವರ ಮುಂದೆ 10 ರಿಂದ 30 ನಿಮಿಷಗಳ ಕಾಲ ಜಪಿಸಬೇಕು. ನಿಮಗೆ ಯಾವ ಹೆಸರು ಇಷ್ಟವೋ ಅದೇ ಹೆಸರನ್ನು ಜಪಿಸಿ. ಕನಿಷ್ಠ 11 ಬಾರಿಯಾದರೂ ದೇವರಿಗೆ ನಮಸ್ಕಾರ ಮಾಡಬೇಕು. 11 ಬಾರಿ ನಮಸ್ಕರಿಸುವುದರಿಂದ 10 ಅಶ್ವಮೇಧ ಯಾಗಗಳಿಗೆ ಸಮ.

ವೃಂದಾವನದ ಧೂಳನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪವನ್ನು ನಿಮ್ಮ ತಲೆಯ ಮಧ್ಯದಲ್ಲಿ ಇರಿಸಿ ಎಂದು ಹೇಳಿದರು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನವಾಗುತ್ತದೆ. ಪರಿಹಾರಗಳು ಯಾರು ಅನುಸರಿಸುತ್ತಾರೋ ಅವರು ಯಾವುದೇ ತೊಂದರೆಯಿಂದ ಸುಲಭವಾಗಿ ಹೊರಬರಬಹುದು ಎಂದಿದ್ದಾರೆ.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net