More

    ಕೈ ಮುಗಿತೀನಿ ನನ್ನನ್ನು ಬಿಟ್ಟುಬಿಡು ತಾಯಿ! ಸಂಗೀತಾ ಫೋಗಟ್​ರನ್ನು ಬೇಡಿಕೊಂಡ ಚಾಹಲ್

    ನವದೆಹಲಿ: ಟೀಮ್​ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕ್ರಿಕೆಟ್​ ಹೊರತಾಗಿ ತಮ್ಮ ಮೋಜಿನ ಗುಣದಿಂದಲೇ ತುಂಬಾ ಫೇಮಸ್. ತಮ್ಮ​ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಸದಾ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಚಹಲ್ ಒಂದು ವರ್ಷದ ಹಿಂದೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದು ಗೊತ್ತೇ ಇದೆ. ಆದರೆ, ಇತ್ತೀಚೆಗಷ್ಟೇ ಬಿಸಿಸಿಐ ಬಿಡುಗಡೆ ಮಾಡಿದ ಕೇಂದ್ರ ಗುತ್ತಿಗೆಯಲ್ಲೂ ಸ್ಥಾನ ಕಳೆದುಕೊಂಡಿದ್ದಾರೆ. ಇದರೊಂದಿಗೆ ಲೆಗ್ ಸ್ಪಿನ್ನರ್ ವೃತ್ತಿಜೀವನ ಪ್ರಶ್ನಾರ್ಹವಾಗಿದೆ.

    ಇದರ ನಡುವೆ ಚಾಹಲ್​ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸ್ಟಾರ್ ಕುಸ್ತಿಪಟು ಸಂಗೀತಾ ಫೋಗಟ್, ಯಜುವೇಂದ್ರ ಚಾಹಲ್ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನಾಲ್ಕೈದು ಸುತ್ತು ಸುತ್ತುತ್ತಿದ್ದಾರೆ. ಚಹಲ್ ಪತ್ನಿ ಧನಶ್ರೀ ವರ್ಮಾ ಡಾನ್ಸರ್ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅವರು ಝಲಕ್ ದಿಖ್ಲಾ ಜಾ ನೃತ್ಯ ಕಾರ್ಯಕ್ರಮದ 11ನೇ ಆವೃತ್ತಿಯಲ್ಲಿ ಫೈನಲ್ ತಲುಪಿದರು. ಈ ನೃತ್ಯ ಕಾರ್ಯಕ್ರಮದ ಆಯೋಜಕರು ಆಯೋಜಿಸಿದ್ದ ಪಾರ್ಟಿಯಲ್ಲಿ ಸಂಗೀತಾ ಫೋಗಟ್, ಚಾಹಲ್ ಅವರನ್ನು ಹೆಗಲ ಮೇಲೆ ಹೊತ್ತು ತಿರುಗಿದರು.

    ಚಾಹಲ್​ ತುಂಬಾ ತೆಳ್ಳಗಿರುವ ಕಾರಣ ಸಂಗೀತಾ ಫೋಗಟ್, ತುಂಬಾ ಸುಲಭವಾಗಿ ಚಾಹಲ್​ರನ್ನು ತನ್ನ ಭುಜದ ಮೇಲೆ ಎತ್ತಿದರು. ಸುಂಟರಗಾಳಿ ರೀತಿ ನಾಲ್ಕೈದು ಸುತ್ತು ಹಾಕಿದರು. ಚಿಂತಾಕ್ರಾಂತರಾದ ಚಾಹಲ್, ಫೋಗಟ್‌ಗೆ ‘ನನ್ನನ್ನು ಬಿಟ್ಟುಬಿಡಿ ತಾಯಿ… ನಾನು ಇಳಿಯುತ್ತೇನೆ’ ಎಂದು ಬೇಡಿಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಂದಹಾಗೆ ಡಾನ್ಸರ್​ ಹಾಗೂ ದಂತವೈದ್ಯೆ ಧನಶ್ರೀ ವರ್ಮಾ ಮತ್ತು ಯಜುವೇಂದ್ರ ಚಾಹಲ್ 2020ರ ಡಿಸೆಂಬರ್ ತಿಂಗಳಲ್ಲಿ ವಿವಾಹವಾದರು. ಇಬ್ಬರದು ಪ್ರೇಮ ವಿವಾಹ. ಧನಶ್ರೀ ವರ್ಮಾ ಸ್ವಭಾವತಃ ನರ್ತಕಿಯಾಗಿರುವುದರಿಂದ, ಚಾಹಲ್ ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. (ಏಜೆನ್ಸೀಸ್)

    ಏಕಕಾಲದಲ್ಲಿ 5 ಸರ್ಕಾರಿ ಕೆಲಸ ಗಿಟ್ಟಿಸಿದ ಯುವತಿ! ಆಯ್ದುಕೊಂಡ ಹುದ್ದೆ, ಕಾರಣ ತಿಳಿದ್ರೆ ಮೆಚ್ಚಿಕೊಳ್ತೀರಾ

    ಕಡು ಬಡತನದಿಂದಾಗಿ ಕನಸಾಗೇ ಉಳಿದಿದ್ದ ತಾಯಿಯ ಆಸೆಯನ್ನು ಈಡೇರಿಸಿದ ಮಕ್ಕಳು! ಮನಕಲಕುತ್ತೆ ಈ ಸ್ಟೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts