More

    ಕಡು ಬಡತನದಿಂದಾಗಿ ಕನಸಾಗೇ ಉಳಿದಿದ್ದ ತಾಯಿಯ ಆಸೆಯನ್ನು ಈಡೇರಿಸಿದ ಮಕ್ಕಳು! ಮನಕಲಕುತ್ತೆ ಈ ಸ್ಟೋರಿ

    ಹೈದರಾಬಾದ್​: ತಾಯಿಗಿಂತ ದೇವರಿಲ್ಲ ಎಂದು ಹೇಳುತ್ತಾರೆ. ದೇವರು ತನ್ನ ಬದಲು ಈ ಭೂಮಿಯಲ್ಲಿ ತಾಯಿಯನ್ನು ಸೃಷ್ಟಿಸಿದನೆಂದು ಹಿರಿಯರು ಹೇಳುತ್ತಾರೆ. ಒಂಬತ್ತು ತಿಂಗಳು ಮಗುವನ್ನು ಹೆತ್ತು, ಹೊತ್ತು ಸಾಕಿ, ಸಲಹುವ ತಾಯಿ ತನ್ನ ಮಕ್ಕಳಿಗಾಗಿ ಅನೇಕ ತ್ಯಾಗಗಳನ್ನು ಮಾಡುತ್ತಾಳೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ಗಂಡುಮಕ್ಕಳು ತಮ್ಮ ಹೆತ್ತವರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ತಮಗೆ ಹೊರೆ ಅಂತಾ ತಂದೆ-ತಾಯಿಯನ್ನು ವೃದ್ಧಾಶ್ರಮ ದಾಖಲಿಸುವವರೂ ಇದ್ದಾರೆ. ಬೆಳೆಸಿದ ತಂದೆ-ತಾಯಿಯನ್ನು ಕೀಳಾಗಿ ಕಾಣುವವರೂ ಇದ್ದಾರೆ. ಆದರೆ, ತಂದೆ-ತಾಯಿ ಮರಣ ನಂತರವೂ ಅವರಿಗೆ ದೇವಾಲಯವನ್ನು ಕಟ್ಟಿ ಪೂಜೆ ಮಾಡುವಂತಹ ಮಕ್ಕಳೂ ಇದ್ದಾರೆ. ಇಲ್ಲೊಬ್ಬ ಪುತ್ರ ಅಮ್ಮನಿಗೆ ಕೊಟ್ಟ ಮಾತಿನಂತೆ ವಿನೂತನವಾಗಿ ಸಮಾರಂಭ ಏರ್ಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಗುಮ್ಮಡಿದಾಲ ಗ್ರಾಮದ ಚೆನ್ನಂಶೆಟ್ಟಿ ಸತ್ಯನಾರಾಯಣ ಹಾಗೂ ನಾಗಲಕ್ಷ್ಮಿ ದಂಪತಿ 50 ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಸಮಯದಲ್ಲಿ ಅವರು ಕಡು ಬಡತನದಲ್ಲಿ ವಿವಾಹವಾದರು. ಮೂಲತಃ ಆಂಧ್ರಪ್ರದೇಶದ ಭೀಮಾವರದ ಮೂಲದ ಕುಟುಂಬ ಜೀವನೋಪಾಯಕ್ಕಾಗಿ 1978ರಲ್ಲಿ ಗುಮ್ಮಡಿಲಕ್ಕೆ ಬಂದಿತ್ತು. ಸತ್ಯನಾರಾಯಣ ರೈಸ್ ಮಿಲ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದರು. ತುಂಬಾ ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಪುತ್ರರು ದೊಡ್ಡವರಾದ ನಂತರ ಪ್ರತಿಯೊಬ್ಬರೂ ತಮ್ಮದೇ ಆದ ವ್ಯಾಪಾರವನ್ನು ಪ್ರಾರಂಭಿಸಿದರು ಮತ್ತು ಆರ್ಥಿಕವಾಗಿ ಸ್ಥಿರರಾದರು.

    ಚೆನ್ನಂಶೆಟ್ಟಿ ಸತ್ಯನಾರಾಯಣ ಹಾಗೂ ನಾಗಲಕ್ಷ್ಮಿ ದಂಪತಿಗೆ ಐವರು ಗಂಡು ಮಕ್ಕಳು. ಇವರದ್ದು ಅವಿಭಕ್ತ ಕುಟುಂಬವಾಗಿದ್ದು, ಮಕ್ಕಳು ಮತ್ತು ಸೊಸೆಯರಿಂದ ಮನೆ ತುಂಬಿ ತುಳುಕುತಿತ್ತು. ನಾಗಲಕ್ಷ್ಮಿಯ, ತಮ್ಮ ಪುತ್ರರು ಮತ್ತು ಸೊಸೆಯರ ಜತೆ ಆಗಾಗ ತಮ್ಮ ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಆಗ ಕಡು ಬಡತನದಿಂದ ಮದುವೆಯಲ್ಲಿ ಹಾರ ಬದಲಾಯಿಸಿಕೊಳ್ಳಲೂ ಆಗಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಿದ್ದರು. ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ತಮ್ಮ ಸಂಬಂಧಿಕರೊಂದಿಗೆ ಆಚರಿಸಲು ಬಯಸಿರುವುದಾಗಿ ಪುತ್ರರಿಗೆ ತಿಳಿಸಿದ್ದರು. ತಾಯಿಯ ಆಸೆಯನ್ನು ಈಡೇರಿಸುವುದಾಗಿ ಪುತ್ರರು ಮತ್ತು ಸೊಸೆಯರು ಭರವಸೆ ಸಹ ನೀಡಿದ್ದರು.

    ಆದರೆ, ನಾಗಲಕ್ಷ್ಮಿ ಅವರು ತಮ್ಮ 50ನೇ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ವರ್ಷ ಮುಂಚಿತವಾಗಿಯೇ ಅನಾರೋಗ್ಯದಿಂದ ನಿಧನರಾದರು. ಈ ದುಃಖದ ನಡುವೆಯೂ ತಮ್ಮ ತಾಯಿಗೆ ನೀಡಿದ ಭರವಸೆಯನ್ನು ಪುತ್ರರು ಮತ್ತು ಸೊಸೆಯರು ಉಳಿಸಿಕೊಂಡಿದ್ದಾರೆ. ತಮ್ಮ ತಂದೆ-ತಾಯಿಯ 50ನೇ ವಿವಾಹ ವಾರ್ಷಿಕೋತ್ಸವವನ್ನು 2024, ಮಾರ್ಚ್ 1ರಂದು ಅದ್ಧೂರಿಯಾಗಿ ಆಚರಿಸಿದ್ದಾರೆ. ತಾಯಿ ನಾಗಲಕ್ಷ್ಮಿಯ ವಿಗ್ರಹವನ್ನು ಮಾಡಿ, ವೇದಿಕೆಯ ಮೇಲೆ ತಮ್ಮ ತಂದೆಯ ಜೊತೆಗೆ ಮತ್ತೊಂದು ಕುರ್ಚಿಯಲ್ಲಿ ವಿಗ್ರಹವನ್ನು ಇಟ್ಟು ಹೂವಿನ ಹಾರ ಬದಲಾಯಿಸುವ ಮೂಲಕ ವಿವಾಹ ವಾರ್ಷಿಕೋತ್ಸವ ಆಚರಿಸಿದರು.

    ಈ ವಿಶೇಷ ಕಾರ್ಯಕ್ರಮಕ್ಕೆ 1500 ಬಂಧುಗಳು ಪಾಲ್ಗೊಳ್ಳುವ ಮೂಲಕ ಕುಟುಂಬವನ್ನು ಆಶೀರ್ವದಿಸಿದರು. ತಂದೆ-ತಾಯಿಯನ್ನು ನಿರ್ಲಕ್ಷಿಸುವ ಈ ಕಾಲದಲ್ಲಿ ತಮ್ಮ ತಾಯಿಗಾಗಿ ಪುತ್ರರು ಮಾಡಿರುವ ಮಹತ್ಕಾರ್ಯಕ್ಕೆ ಎಲ್ಲರಿ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

    ಏಕಕಾಲದಲ್ಲಿ 5 ಸರ್ಕಾರಿ ಕೆಲಸ ಗಿಟ್ಟಿಸಿದ ಯುವತಿ! ಆಯ್ದುಕೊಂಡ ಹುದ್ದೆ, ಕಾರಣ ತಿಳಿದ್ರೆ ಮೆಚ್ಚಿಕೊಳ್ತೀರಾ

    ಕ್ರಿಕೆಟ್​​ ಇತಿಹಾಸದಲ್ಲೇ ನೀವು ಇದುವರೆಗೂ ನೋಡಿರದ ವಿಚಿತ್ರ ರನೌಟ್ ಇದು! ವಿಡಿಯೋ ವೈರಲ್​​

    ಮೆದುಳಿನಲ್ಲಿ ರಕ್ತಸ್ರಾವ, ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts