ಶಿಕ್ಷಣದ ಜತೆಗೆ ನಾಯಕತ್ವದ ಗುಣ

habba
Published on

ಗಂಗೊಳ್ಳಿ: ಮಕ್ಕಳು ಹೇಳುವ ಸಮಸ್ಯೆ ನೃಜತೆಯಿಂದ ಕೂಡಿರುತ್ತದೆ. ಸಮಸ್ಯೆ ಗಂಭೀರವಾಗಿ ತೆಗೆದುಕೊಂಡು ಅದನ್ನು ಪರಿಹಾರ ಮಾಡುವ ಪ್ರಯತ್ನ ಮಾಡಬೇಕು. ಮಕ್ಕಳು ತಮ್ಮ ಪರಿಸರದ ಸಮಸ್ಯೆ ಯಾವುದೇ ಅಂಜಿಕೆ ಇಲ್ಲದೆ ಸ್ಥಳೀಯಾಡಳಿತ ಗಮನಕ್ಕೆ ತರಬೇಕಿದೆ. ಮಕ್ಕಳು ಶಿಕ್ಷಣದ ಜತೆಗೆ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ತಮಗೆ ಎದುರಾದ ಸಮಸ್ಯೆ ಗೆಲ್ಲಲು ಸನ್ನದ್ಧರಾಗಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಅನಂತ ಮೊವಾಡಿ ಹೇಳಿದರು.

ಮೊವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ತ್ರಾಸಿ ಗ್ರಾಪಂ 2024-25ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ ಸಭೆ ಮಕ್ಕಳ ಹಬ್ಬದಲ್ಲಿ ಮಾತನಾಡಿದರು.

ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಎಂ.ಡಿ. ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿ ನಾಯಕ ವಿಜೇತ ಮತ್ತು ನಾಯಕಿ ಪ್ರಗತಿ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಹೇಮಾ, ಸದಸ್ಯ ವಿಜಯ ಪೂಜಾರಿ, ಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಶರಾವತಿ, ಎಸ್‌ಡಿಎಂಸಿ ಅಧ್ಯಕ್ಷೆ ಸಂಧ್ಯಾ ಕಾರಂತ, ಮಕ್ಕಳ ಮಿತ್ರ ಶರತ್ ಮೊವಾಡಿ, ಆರೋಗ್ಯ ಇಲಾಖೆ ಭಾಗ್ಯಲಕ್ಷ್ಮೀ, ಪೊಲೀಸ್ ಇಲಾಖೆ, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಿಡಬ್ಲುೃಸಿ ಸಂಸ್ಥೆ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

ತ್ರಾಸಿ ಪಿಡಿಒ ಅಧಿಕಾರಿ ಶೋಭಾ ಸ್ವಾಗತಿಸಿದರು. ಸಿಡಬ್ಲುೃಸಿ ಸಂಸ್ಥೆ ಶ್ರೀನಿವಾಸ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಲೆಕ್ಕ ಸಹಾಯಕ ಶಿವಾನಂದ ಅನುಪಾಲನಾ ವರದಿ ಮಂಡಿಸಿದರು. ಸಹಶಿಕ್ಷಕಿ ಭಾಗೀರಥಿ ಕಾರ್ಯಕ್ರಮ ನಿರ್ವಹಿಸಿದರು.

ಸಮಸ್ಯೆ ಪರಿಹಾರಕ್ಕೆ ಆಗ್ರಹ

ಶಾಲೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಸ್ಥಳೀಯಾಡಳಿತದ ಗಮನಕ್ಕೆ ತಂದು ಪರಿಹಾರ ಮಾಡುವಂತೆ ಆಗ್ರಹಿಸಿದರು. ಬಳಿಕ ಶಾಲೆ ವಿದ್ಯಾರ್ಥಿಗಳನ್ನೊಳಗೊಂಡ ಶರತ್ ಮೊವಾಡಿ ರಚಿಸಿ ನಿರ್ದೇಶಿಸಿದ ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತಾದ ಕಥಾನಕ, ಮಕ್ಕಳಿಗೆ ವಿಶೇಷ ಮಾಹಿತಿ ಯಕ್ಷಗಾನ ಮುಕ್ತ ಸಾಮ್ರಾಜ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net