ಕುಂದಾಪುರ: ಕ್ರೀಡೆಯಲ್ಲಿ ಭಾಗವಹಿಸಿ, ಸ್ಪರ್ಧೆಯಲ್ಲಿ ಸೋಲು ಗೆಲುವನ್ನು ಅನುಭವಿಸಿದರೆ ಜೀವನದಲ್ಲಿ ಬರುವ ಸವಾಲು ಎದುರಿಸಲು ಸಾಧ್ಯ ಎಂದು ಕುಂದಾಪುರ ಉದ್ಯಮಿ ಕೆ.ಆರ್. ನಾಯ್ಕ ಹೇಳಿದರು.
ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್, ಮಹಾವಿಷ್ಣು ಯುವಕ ಮಂಡಲ ಹರೇಗೋಡು, ಭದ್ರ ಮಹಾಕಾಳಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ, ಕಟ್‌ಬೆಲ್ತೂರ್ ಗ್ರಾಪಂ, ಶ್ರೀವತ್ಸ ಕೋಚಿಂಗ್ ಸೆಂಟರ್ ಹರೇಗೋಡು, ನಮ್ಮ ಭೂಮಿ ಸಂಸ್ಥೆ ಹಟ್ಟಿಯಂಗಡಿ ಕನ್ಯಾನ ಹಾಗೂ ಮಾನಸ ಯುವತಿ ಮಂಡಲ ಆಶ್ರಯದಲ್ಲಿ ಹರೆಗೋಡು ಯುವಕ ಮಂಡಲ ವಠಾರದಲ್ಲಿ ಭಾನುವಾರ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಲಯನ್ಸ್ ಕ್ಲಬ್ ಕ್ರೌನ್ ಅಧ್ಯಕ್ಷ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಭೂಮಿ ಸಂಸ್ಥೆ ನಿರ್ದೇಶಕ ಶ್ರೀನಿವಾಸ ಗಾಣಿಗ, ಪ್ರವೀಣ್ ಕುಮಾರ್ ಶೆಟ್ಟಿ, ಅಶ್ರಫ್, ಅಶೋಕ್ ಕುಮಾರ್ ಕುಂದಾಪುರ, ನರಸಿಂಹ ಗಾಣಿಗ ಹರೆಗೋಡು, ವಕೀಲ ರಾಘವೇಂದ್ರ ಚರಣ್ ನಾವುಡ, ಯುವಕ ಮಂಡಲ ಅಧ್ಯಕ್ಷ ದೀಪಕ್ ಆರ್. ಗಾಣಿಗ, ಯುವತಿ ಮಂಡಲ ಅಧ್ಯಕ್ಷೆ ಗೀತಾ ಸುರೇಶ ದೇವಾಡಿಗ, ಯುವತಿ ಮಂಡಲ ಗೌರವಾಧ್ಯಕ್ಷೆ ಗಂಗಮ್ಮ ಸುಂದರ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ರವೀಶ್ ಡಿ.ಎಚ್. ಸಾಗತಿಸಿದರು. ಲಿಖಿತಾ ದೀಪಕ್ ರಾಜ್ ವಂದಿಸಿದರು. ಪ್ರಸಾದ್ ಆಚಾರ್ಯ ನಿರೂಪಿಸಿದರು.