ಮೋದಿ, ಅಮಿತ್​ ಶಾ ಜೊತೆ ತಡರಾತ್ರಿ ಮಾತುಕತೆ? ಆಜಾದ್ ಆರೋಪಕ್ಕೆ ಫಾರೂಕ್ ಅಬ್ದುಲ್ಲಾ ವಾಗ್ದಾಳಿ

faroq
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿ ಕೂಟದ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಲೋಕಸಭಾ ಚುನಾವಣೆ ಎದುರಿಸಲು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ತೀರ್ಮಾನ ಮಾಡಿದ ಮಾರನೇ ದಿನವೇ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರು ಫಾರೂಕ್ ಅಬ್ದುಲ್ಲಾ ವಿರುದ್ಧ ಆರೋಪ ಮಾಡಿದ್ದರು.

ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಫಾರೂಕ್ ಅಬ್ದುಲ್ಲಾ ರಾತ್ರಿ ವೇಳೆ ಗೌಪ್ಯವಾಗಿ ಮಾತುಕತೆ ನಡೆಸುತ್ತಾರೆ. ಸಾರ್ವಜನಿಕರ ಕಣ್ತಪ್ಪಿಸಿ ಈ ಭೇಟಿ ನಡೆಯುತ್ತಿದೆ ಎಂದು ಖಾಸಗಿ ಸುದ್ದಿ ವಾಹನಿಗೆ ನೀಡಿದ ಸಂದರ್ಶನದ ವೇಳೆ ಗುಲಾಂ ನಬಿ ಆಜಾದ್ ಆರೋಪ ಮಾಡಿದ್ದರು.

ಗುಲಾಂ ನಬಿ ಆಜಾದ್ ಅವರ ಈ ಆರೋಪಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವರಿಷ್ಠ ಫಾರೂಕ್ ಅಬ್ದುಲ್ಲಾ ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ನಾನು ನನ್ನ ಮಗ ಹಗಲಿನಲ್ಲೇ ಹೋಗುತ್ತೇವೆ. ರಾತ್ರಿ ಯಾಕೆ ಎಂದು ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ವಿರುದ್ಧ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್​ ಅಬ್ದುಲ್ಲಾ ಮತ್ತು ಅವರ ಮಗ ಓಮರ್ ಅಬ್ದುಲ್ಲಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಗಾರರೊಂದಿಗೆ ಮಾತನಾಡಿದ ಫಾರುಕ್​ ಅಬ್ದುಲ್ಲಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ತಡರಾತ್ರಿ ಭೇಟಿಯಾಗಲು ಹೋಗುತ್ತಾರೆ ಎಂದು ಹೇಳಿದ್ದ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿದರು.

ಗುಲಾಂ ನಬಿ ಆಜಾದ್​ ಅವರು ನನಗೆ ಅಪಕೀರ್ತಿ ತರುವ ಅವರ ಆಲೋಚನೆ ಹಿಂದೆ ಯಾವ ಕಾರಣವಿದೆ ಎಂಬುದು ನನಗೆ ತಿಳಿದಿಲ್ಲ. ಯಾರು ರಾಜ್ಯಸಭಾ ಸ್ಥಾನವನ್ನು ಕೊಡದೇ ಇದ್ದಾಗ ಅವರನ್ನು ಕರೆದು ಕೊಟ್ಟಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಮನೆಯಲ್ಲಿ ಕುಳಿತಿರುವ ಏಜೆಂಟ್ ಯಾರು ಎಂದು ಅವರೇ ಹೇಳಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net