More

    ಫಾರೂಕ್, ಒಮರ್ ಅಬ್ದುಲ್ಲಾ ರಾತ್ರಿ ಮೋದಿ, ಅಮಿತ್ ಜೊತೆ ರಹಸ್ಯ ಮಾತುಕತೆ: ಗುಲಾಂ ನಬಿ ಗಂಭೀರ ಆರೋಪ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಒಮರ್ ಅಬ್ದುಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ತಡರಾತ್ರಿ ಭೇಟಿಯಾಗಲು ಹೋಗುತ್ತಾರೆ ಎಂದು ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಸೋಮವಾರ ಹೇಳಿದ್ದಾರೆ.

    ಇದನ್ನೂ ಓದಿ:ಚಂಡೀಗಢ ಮೇಯರ್‌ ಚುನಾವಣೆ ವಿವಾದ: ಮತಪತ್ರ ತಿರುಚಿದ್ದನ್ನು ಒಪ್ಪಿಕೊಂಡ ಚುನಾವಣಾಧಿಕಾರಿ..! ಸುಪ್ರೀಂ ಕೋರ್ಟ್‌ ಹೇಳಿದ್ದೇನು?

    ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಮುಖ್ಯಸ್ಥರಾದ ಗುಲಾಂ ನಬಿ ಆಜಾದ್​ ಮಾತನಾಡಿ, ಫಾರುಕ್​ ಮತ್ತು ಆತನ ಪುತ್ರ ಶ್ರೀನಗರದಲ್ಲಿ ಒಂದು ಮಾತು, ಜಮ್ಮುವಿನಲ್ಲಿ ಇನ್ನೊಂದು ಮತ್ತು ದೆಹಲಿಯಲ್ಲಿ ಇನ್ನೇನನ್ನೋ ಮಾತನಾಡುತ್ತಿದ್ದಾರೆ ವಾಗ್ದಾಳಿ ನಡೆಸಿದರು.

    ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ ಅವರು 2014 ಲೋಕಸಭೆ ಚುನಾವಣೆ ವೇಳೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿರುವ ಗುಲಾಂ ನಬಿ, ತಂದೆ ಮತ್ತು ಮಗ ಡಬಲ್ ಗೇಮ್ ಆಡುತ್ತಿದ್ದಾರೆ. ಭವಿಷ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರುವ ಸುಳಿವು ನೀಡಿದ್ದರು, ನಂತರ ಅದನ್ನು ಒಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ ಎನ್ನಲಾಗಿದೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ (ಫೆ.20) ರಂದು ಜಮ್ಮುಗೆ ಭೇಟಿ ನೀಡಲಿದ್ದು ಇದಕ್ಕೂ ಒಂದು ದಿನ ಮುಂಚಿತವಾಗಿ ಈ ಹೇಳಿಕೆ ನೀಡಿದ್ದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

    ಜಮ್ಮು-ಕಾಶ್ಮೀರ ಪ್ರಧಾನಿ ಮೋದಿ ಭೇಟಿ: 30 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts