More

    ಕಾಂಗ್ರೆಸ್​ಗೆ ಗುಲಾಂ ನಬಿ ಆಜಾದ್​ ಗುಡ್​ ಬೈ: ಪಕ್ಷ ತೊರೆಯಲು ಕೊಟ್ಟ ಕಾರಣ ಹೀಗಿದೆ..

    ನವದೆಹಲಿ: ಹಿರಿಯ ನಾಯಕ ಗುಲಾಂ ನಬಿ ಆಜಾದ್​ ದಿಢೀರ್​ ರಾಜೀನಾಮೆಯು ಕಾಂಗ್ರೆಸ್​ ಪಾಳಯದಲ್ಲಿ ತಲ್ಲಣ ಮೂಡಿಸಿದೆ. ಬಹಳ ವರ್ಷಗಳಿಂದ ಕಾಂಗ್ರೆಸ್​ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಅನುಭವಿ ನಾಯಕ ಆಜಾದ್​, ಇದೀಗ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ತನಗೆ ನೀಡಿದ ಎಲ್ಲ ಜವಾಬ್ದಾರಿಗಳನ್ನು ಕೆಳಗಿಳಿಸಿರುವುದು ಪಕ್ಷದ ಪಾಲಿಗೆ ಒಂದು ದೊಡ್ಡ ಹೊಡೆತ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಇಂದು ದಿಢೀರ್​ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ, ತಮ್ಮ ನಿರ್ಧಾರಕ್ಕೆ ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ಅವರನ್ನು ದೂಷಿಸಿದ್ದಾರೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವುದು ಮತ್ತು ಅನನುಭವಿ ಹೊಗಳುಭಟ್ಟರ ಕೂಟ ಹೆಚ್ಚುತ್ತಿರುವುದೇ ರಾಜೀನಾಮೆಗೆ ಕಾರಣ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

    ಆಗಸ್ಟ್​ 16ರಂದು ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್​ ಪ್ರಚಾರ ಸಮಿತಿಯ ಮುಖ್ಯಸ್ಥ ಸ್ಥಾನವನ್ನು ತ್ಯಜಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಗುಲಾಂ ನಬಿ ಆಜಾದ್​, ಚುನಾವಣೆಗಳಲ್ಲಿ ಕಾಂಗ್ರಸ್​ ಹೀನಾಯ ಸ್ಥಿತಿಗೆ ರಾಹುಲ್​ ಅವರು ಅಪ್ರಬುದ್ಧತೆಯೇ ಕಾರಣ ಎಂದು ದೂರಿದ್ದಾರೆ.

    ರಾಹುಲ್ ಗಾಂಧಿಯವರು ಮಾಧ್ಯಮಗಳ ಮುಂದೆಯೇ ಸರ್ಕಾರಿ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದು, ಅವರ ಅಪ್ರಬುದ್ಧತೆಯ ಅತ್ಯಂತ ಜ್ವಲಂತ ಉದಾಹರಣೆಯಾಗಿದೆ. ಈ ಒಂದೇ ಒಂದು ಕ್ರಮವು 2014ರಲ್ಲಿ ಯುಪಿಎ ಸರ್ಕಾರದ ಸೋಲಿಗೆ ಗಣನೀಯ ಕೊಡುಗೆ ನೀಡಿದೆ ಎಂದು ಆಜಾದ್ ಪತ್ರದಲ್ಲಿ ಬರೆದಿದ್ದಾರೆ.

    ಇದನ್ನೂ ಓದಿ: ವೀಕ್ಷಕರನ್ನೇ ಗೊಂದಲಕ್ಕೀಡುಮಾಡಿದ ಜಯಶ್ರೀ ಆರಾಧ್ಯ: ಮಾರಿಮುತ್ತು ಮೊಮ್ಮಗಳ ವರ್ತನೆಗೆ ಅಸಮಾಧಾನ

    ಸೋನಿಯಾ ಗಾಂಧಿ ಅವರನ್ನು “ನಾಮಮಾತ್ರದ ವ್ಯಕ್ತಿ” ಎಂದು ಕರೆದ ಆಜಾದ್​, 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಬಳಿಕ ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ನಂತರ ಸೋನಿಯಾ ಅವರು ಹಂಗಾಮಿ ಅಧ್ಯಕ್ಷ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಒತ್ತಿ ಹೇಳಿದರು. ನೀವು ಕೇವಲ ನಾಮಮಾತ್ರದ ವ್ಯಕ್ತಿಯಾಗಿರುವಾಗ ಎಲ್ಲಾ ಪ್ರಮುಖ ನಿರ್ಧಾರಗಳನ್ನು ರಾಹುಲ್ ಗಾಂಧಿ ಅಥವಾ ಅವರ ಭದ್ರತಾ ಸಿಬ್ಬಂದಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಜಾದ್ ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಕಾಂಗ್ರೆಸ್​ಗೆ ಬಿಗ್​ ಶಾಕ್​: ಎಲ್ಲ ಹುದ್ದೆಗೂ ಗುಲಾಂ ನಬಿ ಆಜಾದ್​ ರಾಜೀನಾಮೆ

    ಉಚಿತ ಕೊಡುಗೆಗಳ ಭರವಸೆ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ಶಿಫಾರಸು ಮಾಡಿದ ಸುಪ್ರಿಂಕೋರ್ಟ್​

    ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts