More

    ವೀಕ್ಷಕರನ್ನೇ ಗೊಂದಲಕ್ಕೀಡುಮಾಡಿದ ಜಯಶ್ರೀ ಆರಾಧ್ಯ: ಮಾರಿಮುತ್ತು ಮೊಮ್ಮಗಳ ವರ್ತನೆಗೆ ಅಸಮಾಧಾನ

    ಬೆಂಗಳೂರು: ಬಿಗ್​ಬಾಸ್​ ಕನ್ನಡದ ಒಟಿಟಿ ಎರಡು ವಾರ ಪೂರ್ಣಗೊಳಿಸಿ ಮೂರನೇ ವಾರಾಂತ್ಯಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್​ ಯೋಗೇಶ್ವರ್​ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ಇದೀಗ ಮೂರನೇ ವಾರದಲ್ಲಿ ಯಾರು ದೊಡ್ಮನೆ ತೊರೆಯಲ್ಲಿದ್ದಾರೆ ಎಂಬ ಊಹೆಗಳು ನಡೆಯುತ್ತಿದೆ. ಇದರ ನಡುವೆಯೇ ಬಹುತೇಕರು ಈ ಬಾರಿ ಜಯಶ್ರೀ ಆರಾಧ್ಯ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಗೆಸ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಹೃದಯಾಘಾತದಿಂದ ಯುವಕ ಸಾವು: ಬಾಣಂತಿ-ಮಗುವನ್ನು ತಿರಸ್ಕರಿಸಿ ಮಗನ ಶವ ಒಯ್ದ ಮನೆಯವರು… ಉಡುಪಿಯಲ್ಲಿ ಅಮಾನವೀಯ ಘಟನೆ

    ಜಯಶ್ರೀ ಆರಾಧ್ಯರ ಬದಲಾದ ನಡವಳಿಕೆಯಿಂದ ವೀಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೆ ಜಗಳವಾಡುತ್ತಾರಂತೆ. ತಮ್ಮ ಜಗಳದಿಂದಲೇ ಮನೆಯ ಇತರೆ ಸ್ಪರ್ಧಿಗಳನ್ನು ತೀವ್ರವಾಗಿ ಕಾಡುತ್ತಿದ್ದಾರೆ. ನಿನ್ನೆಯ ಎಪಿಸೋಡ್​ನಲ್ಲಿ ಸೋಮಣ ಮಾಚಿಮಾಡ ಮತ್ತು ನಂದು ಜೊತೆಗಿನ ವಿವೇಚನಾರಹಿತ ವಾಗ್ವಾದದಿಂದ ವೀಕ್ಷಕರಿಗೆ ಕಿರಿಕಿರಿ ಉಂಟು ಮಾಡಿದರು. ತುಂಬಾ ವಿವಾದಗಳನ್ನು ಜಯಶ್ರೀ ಸೃಷ್ಟಿ ಮಾಡುತ್ತಿದ್ದು, ವಿವಾದಾತ್ಮಕ ಸ್ಪರ್ಧಿಯಾಗಿರುವುದರಿಂದ ಜಯಶ್ರೀ ಅವರನ್ನು ಬಿಗ್​ಬಾಸ್​ ಉಳಿಸಿಕೊಳ್ಳುತ್ತಿದೆ ಎಂದು ಒಂದು ವರ್ಗದ ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ. ಆದರೆ, ಟಾಸ್ಕ್​ನಲ್ಲಿ ಜಯಶ್ರೀ ಪ್ರದರ್ಶನ ಕಳಪೆಯಾಗಿದೆ. ಅಲ್ಲದೆ, ಅವರ ವರ್ತೆಯು ಸಹ ವೀಕ್ಷಕರಿಗೆ ಬೇಸರ ಉಂಟು ಮಾಡಿರುವುದರಿಂದ ಈ ಬಾರಿ ಬಿಗ್​ಬಾಸ್​ ಮನೆಯಿಂದ ಜಯಶ್ರೀ ಹೊರ ಹೋಗಲಿದ್ದಾರೆ ಎಂದು ಹೇಳುತ್ತಿದ್ದಾರೆ.

    ಅಂದಹಾಗೆ ಮೂರನೇ ವಾರದ ಎಲಿಮಿನೇಷನ್​ನಲ್ಲಿ ಜ್ಯೋತಿಷಿ ಆರ್ಯವರ್ಧನ್​, ರೂಪೇಶ್​ ಶೆಟ್ಟಿ, ಅಕ್ಷತಾ ಕುಕಿ, ಚೈತ್ರಾ, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ಮತ್ತು ಉದಯ್​ ಸೂರ್ಯ ನಾಮಿನೇಟ್​ ಆಗಿದ್ದಾರೆ.

    ಇದನ್ನೂ ಓದಿ: ಸ್ಯಾಂಡಲ್​ವುಡ್​ ನಟಿ ಮಾನ್ವಿತಾ ತಾಯಿಯ ಚಿಕಿತ್ಸೆಗೂ ನೆರವಾದ್ರು ಬಾಲಿವುಡ್​​ ನಟ ಸೋನು ಸೂದ್​

    ಇತ್ತೀಚೆಗೆ ನಡೆದ ಟಾಸ್ಕ್​ನಲ್ಲಿ ನಂದು ಮತ್ತು ಅಕ್ಷತಾ ಕುಕ್ಕಿ ಉತ್ತಮ ಪ್ರದರ್ಶನ ನೀಡಿದ್ದರು. ಅಕ್ಷತಾ ಕುಕ್ಕಿ ತನ್ನ ಆಟದಿಂದ ನೋಡುಗರ ಮನಸೂರೆಗೊಂಡಿದ್ದಾರೆ. ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಕನ್ನಡ OTT ತಯಾರಕರು ಯಾರನ್ನು ಮನೆಯಿಂದ ಹೊರಗಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಆ ಒಂದು ಕೆಟ್ಟ ಬೈಗುಳ: 5 ವರ್ಷದ ಬಳಿಕ ವಿಜಯ್​ ದೇವರಕೊಂಡ ವಿರುದ್ಧ ಸೇಡು ತೀರಿಸಿಕೊಂಡ ಅನಸೂಯ!

    ಲಾಡ್ಜ್​ಗೆ​ ಕರೆಸಿಕೊಂಡು ಯುವಕನ ಬಳಿ ಸುಲಿಗೆ: ಬಂಧಿತ ಲೇಡಿಯ ಮೊಬೈಲ್​ನಲ್ಲಿದ್ದ ಸ್ಫೋಟಕ ರಹಸ್ಯ ಬಯಲು!

    ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts