

ನವದೆಹಲಿ: ಕಳೆದ 2023ರ ಡಿಸೆಂಬರ್ನಲ್ಲಿ 1.64 ಲಕ್ಷ ಕೋಟಿ ರೂ. ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ. 2022ರ ಡಿಸೆಂಬರ್ನಲ್ಲಿ 1.49 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಅದಕ್ಕೆ ಹೋಲಿಸಿದರೆ 2023ರ ಡಿಸೆಂಬರ್ನಲ್ಲಿ ಶೇ.10 ಹೆಚ್ಚಳವಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.
2023ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹದಲ್ಲಿ ಶೇ.12 ಬೆಳವಣಿಗೆ ಆಗಿದ್ದು, 14.97 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. 2022ರ ಇದೇ ಅವಧಿಯಲ್ಲಿ 13.40 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. 2023ರ ಡಿಸೆಂಬರ್ನಲ್ಲಿ 1,64,882 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದ್ದು, ಆ ಪೈಕಿ ಸಿಜಿಎಸ್ಟಿ 30,443 ಮತ್ತು ಎಸ್ಜಿಎಸ್ಟಿ 37,935 ಹಾಗೂ ಐಜಿಎಸ್ಟಿ 84,255 ಕೋಟಿ ರೂ. ಆಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.