ಕೆರೆ ಏರಿಯ ಮಣ್ಣು ಕುಸಿತ

WhatsApp Image 2023-10-12 at 3.55.54 PM
ಪಿರಿಯಾಪಟ್ಟಣ ತಾಲೂಕು ಕಿತ್ತೂರಿನಿಂದ ಪೂಜಾರಯ್ಯನಕೊಪ್ಪಲಿಗೆ ಹಾದುಹೋಗುವ ಕಿತ್ತೂರಮ್ಮನ ಕೆರೆಯ ನೀರಿನ ತೇವಾಂಶ ಹೆಚ್ಚಾಗಿ ಕೆರೆಯ ಏರಿಯ ಇಕ್ಕೆದ ಮಣ್ಣು ಕುಸಿದಿರುವುದನ್ನು ಅಧಿಕಾರಿಗಳಿಗೆ ಪರಿಶೀಲಿಸಿದರು. ಕುಮಾರ್, ದಿನೇಶ್, ರಂಗಸ್ವಾಮಿ, ಮಂಜುನಾಥ್ ಇದ್ದರು.
Published on

ರಾವಂದೂರು: ಪಿರಿಯಾಪಟ್ಟಣ ತಾಲೂಕು ಕಿತ್ತೂರಿನಿಂದ ಪೂಜಾರಯ್ಯನಕೊಪ್ಪಲಿಗೆ ಹಾದುಹೋಗುವ ಕಿತ್ತೂರಮ್ಮನ ಕೆರೆಯ ರಸ್ತೆ ಅಭಿವೃದ್ಧಿ ಕಾಮಗಾರಿಯಾಗಿದ್ದು, ಕೆರೆಯ ಇಕ್ಕೆಲಕ್ಕೆ ಹಾಕಿರುವ ಮಣ್ಣು ಕೆರೆಯ ನೀರಿನ ತೇವಾಂಶದಿಂದ ಗುರುವಾರ ಕುಸಿದಿದೆ.

ಲೋಕೋಪಯೋಗಿ ಇಲಾಖೆಯ ಎಇ ಕುಮಾರ್, ಇಂಜಿನಿಯರ್ ದಿನೇಶ್, ನೀರಾವರಿ ಇಲಾಖೆಯ ಎಇ ರಂಗಸ್ವಾಮಿ, ಇಂಜಿನಿಯರ್ ಮಂಜುನಾಥ್ ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಅಹವಾಲು ಆಲಿಸಿ ಯಾವುದೇ ರೀತಿ ಸಮಸ್ಯೆಯಾಗದಂತೆ ಕೆಲಸ ನಿರ್ವಹಿಸಲಾಗುವುದು ಹಾಗೂ ಸಚಿವರ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವುದಾಗಿ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಅಕ್ಕಪಕ್ಕದಲ್ಲಿ ಮಣ್ಣು ಜಾರಿರುವ ಗದ್ದೆಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಗ್ರಾಮಸ್ಥರಾದ ಎಂ.ಆರ್.ಗಿರೀಶ್‌ಗೌಡ, ಪಿ.ಕೆ.ಹರೀಶ್, ಪಿ.ಎಸ್.ನಾಗರಾಜು, ಮಾದನಾಯಕ, ಶಾಂತನಾಯಕ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net