More

    ಚುನಾವಣಾ ಕರ್ತವ್ಯ ತರಬೇತಿಗೆ ಬಾರದೆ ಉದ್ಧಟತನ; ಮಹಿಳಾ ಇನ್ಸ್​ಪೆಕ್ಟರ್ ಅಮಾನತು

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಮುನ್ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಈ ನಡುವೆ ಮಹಿಳಾ ಇನ್ಸ್​ಪೆಕ್ಟರ್ ಒಬ್ಬರು ಉದ್ಧಟತನ ತೋರಿ ಅಮಾನತುಗೊಂಡಿದ್ದಾರೆ. ಭವ್ಯಾ ಎಂಬುವರು ಮತಗಟ್ಟೆಯಲ್ಲಿ ಬೇಜವಾಬ್ದಾರಿ ಮೆರೆದು ಅಮಾನತುಗೊಂಡ ಇನ್ಸ್​ಪೆಕ್ಟರ್.

    ತರಬೇತಿಗೆ ಹಾಜರಾಗದೆ ಪೇಪರ್ ಓದುತ್ತಾ ಕುಳಿತ ಅಧಿಕಾರಿ

    ಚುಣಾವಣಾ ಕರ್ತವ್ಯಕ್ಕೆ ತೆರಳುವ ಮುನ್ನ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆ ತರಬೇತಿ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಮಹಿಳಾ ಇನ್ಸ್ಪೆಕ್ಟರ್ ಭವ್ಯ ಉದ್ಧಟತನ ತೋರಿದ್ದಾರೆ. ತರಬೇತಿಗೆ ಸರಿಯಾಗಿ ಹಾಜರಾಗದೆ ಪತ್ರಿಕೆ ಓದುತ್ತಾ ಕುಳಿತಿದ್ದಾರೆ.

    ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಕೇವಲ ಸ್ಟೋರಿ ಅಲ್ಲ – ಕಣ್ತೆರೆಸುವ ಅದೆಷ್ಟೋ ಹೆತ್ತವರ ಕಣ್ಣೀರ ಸ್ಟೋರಿ: ಪ್ರಲ್ಹಾದ ಜೋಶಿ

    ನಾನು ನಿಮ್ಮ ಡಿಪಾರ್ಟ್​ಮೆಂಟ್ ಅಲ್ಲ!

    ತರಬೇತಿಗೆ ಸರಿಯಾಗಿ ಹಾಜರಾಗದೇ ಇರುವುದನ್ನು ನೋಡಲ್ ಅಧಿಕಾರಿ ಹಾಗು ಸೆಕ್ಟರ್ ಅಧಿಕಾರಿ ಪ್ರಶ್ನಿಸಿದಾಗ ಉದ್ಧಟತನ ಮರೆದಿದ್ದಾರೆ. ‘ನಾನು ಮಾಡುತ್ತಿರುವುದು ಸರಿ, ತರಬೇತಿ ಕೊಡುವುದು ನಿಮ್ಮ ಕೆಲಸ. ತರಬೇತಿ ಪಡೆಯುವುದು ಬಿಡುವುದು ನಮ್ಮಿಷ್ಟ. ನೀವ್ ಹೇಳಿದಂತೆ ಕೇಳೋದಕ್ಕೆ ನಾನು ನಿಮ್ಮ ಡಿಪಾರ್ಟ್ಮೆಂಟ್ ಅಲ್ಲ. ಈ ತರಬೇತಿ ಉಪಯೋಗಕ್ಕಿಲ್ಲ’ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

    ಬೇಜವಾಬ್ದಾರಿಯಾಗಿ ಮಾತನಾಡಿ ಇನ್ಸ್​ಪೆಕ್ಟರ್ ಬಗ್ಗೆ ಅಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಜಿಲ್ಲಾ ಚುನಾವಣಾಧಿಕಾರಿ ಇನ್ಸ್​ಪೆಕ್ಟರ್ ಭವ್ಯಾ ಅವರನ್ನು ಅಮಾನತುಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts