More

    ಚುನಾವಣಾ ಆಯೋಗದಿಂದ ಅಕ್ರಮದ ಬೇಟೆ; ಬೆಂಗಳೂರಿನಲ್ಲಿ ವಶಕ್ಕೆ ಪಡೆದ ಹಣವೆಷ್ಟು? ಇಲ್ಲಿದೆ ಮಾಹಿತಿ…

    ಬೆಂಗಳೂರು: ವಿಧಾನಸಭಾ ಚುನಾವಣೆಯ ನೀತಿ ಸಂಹಿತ ಜಾರಿಯಾಗುತ್ತಿದ್ದಂತೆ ರಾಜ್ಯದಾದ್ಯಂತ ಚುನಾವಣಾ ಆಯೋಗದ ಅಧಿಕಾರಿಗಳು ಅಲರ್ಟ್ ಆಗಿದ್ದರು. ಅನುಮಾನ ಬಂದ ಕಡೆಗಳಲ್ಲಿ ದಾಳಿ ಮಾಡುವ ಮೂಲಕ ಸಾಕಷ್ಟು ಅಕ್ರಮಗಳನ್ನು ಬಯಲಿಗೆ ಎಳೆದಿದ್ದರು. ಇದೀಗ ನೀತಿ ಸಂಹಿತೆ ಜಾರಿಯಾಗದ ಬಳಿಕ ಬೆಂಗಳೂರಿನಲ್ಲಿ ಚುನಾವಣಾ ಆಯೋಗ ಸಾಕಷ್ಟು ಅಕ್ರಮ ಹಣ, ಮದ್ಯ ಇತ್ಯಾದಿಗಳನ್ನು ವಶಪಡಿಸಿಕೊಂಡಿದೆ.

    ಇದನ್ನೂ ಓದಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ಪರಿಷ್ಕೃತ ದಿನಾಂಕ ಪ್ರಕಟ

    8645 ಎಫ್​ಐಆರ್ ದಾಖಲು

    ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಬೆಂಗಳೂರಿನಲ್ಲಿ ಈವರೆಗೆ 13.30 ಕೋಟಿ ರೂಪಾಯಿ ಅಕ್ರಮ ನಗದು ಹಣವನ್ನು ಚುಣಾವಣಾ ಆಯೋಗ ವಶಪಡಿಸಿಕೊಂಡಿದೆ. 24 ಕೋಟಿ ರೂಪಾಯಿ ಮೌಲ್ಯದ 3,51,257 ಲೀ. ಮದ್ಯ ವಶಪಡಿಸಿಕೊಂಡಿದೆ. 14.4 ಕೋಟಿ ರೂ. ಮೌಲ್ಯದ 785 ಕೆ.ಜಿ ಮಾದಕ ವಸ್ತು ಹಾಗೂ ಅಕ್ರಮವಾಗಿ ಹಣ, ಮದ್ಯ, ಡ್ರಗ್ಸ್ ಸಾಗಿಸುತ್ತಿದ್ದ 213 ವಾಹನವನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ 8,645 ಎಫ್​ಐಆರ್ ದಾಖಲಾಗಿದೆ.

    ಇದನ್ನೂ ಓದಿ: VIDEO | ಹುಬ್ಬಳ್ಳಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಸಿಎಂ ಬೊಮ್ಮಾಯಿ; ಬೆಂಬಲಿಗರಿಂದ ಸಾಥ್

    ಆಯೋಗದ ಅಕ್ರಮದ ಬೇಟೆ

    • ನಗದು- 13.30 ಕೋಟಿ ರೂ.
    • ಮದ್ಯ- 3,51,057 ಲೀಟರ್ (24 ಕೋಟಿ ರೂ.)
    • ಡ್ರಗ್ಸ್- 785 ಕೆ.ಜಿ(14.4 ಕೋಟಿ ರೂ.)
    • ವಾಹನ – 213
    • ಎಫ್​ಐಆರ್- 8,645
    • ಆಭರಣ- 691 ಕೆ.ಜಿ ಚಿನ್ನ-ಬೆಳ್ಳಿ(9 ಕೋಟಿ ರೂ.)
    • ಉಡುಗೊರೆ- 5.74 ಕೋಟಿ ರೂ. ಮೌಲ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts