ಕಿಮ್ಸ್​ ಆಸ್ಪತ್ರೆಯಲ್ಲಿ ಅವಾಂತರ; 350ಕ್ಕೂ ಹೆಚ್ಚು ರೋಗಿಗಳು ಅಪಾಯದಲ್ಲಿ !

Kims
Published on

ಬೆಂಗಳೂರು: ಇಲ್ಲಿನ ಕಿಮ್ಸ್​ ಆಸ್ಪತ್ರೆಯಲ್ಲಿ ಒಂದು ಅವಾಂತರವೇ ಸೃಷ್ಟಿಯಾಗಿದೆ. ಇಲ್ಲಿ ಆಕ್ಸಿಜನ್​ ಪೂರೈಕೆ ಆಗದೆ ಸುಮಾರು 350 ರೋಗಿಗಳು ಅಪಾಯದಲ್ಲಿದ್ದಾರೆ. ಜೀವನ್ಮರಣದ ಹೋರಾಟದಲ್ಲಿ ನರಳುತ್ತಿದ್ದಾರೆ.

ಇಷ್ಟು ದಿನ ಆಕ್ಸಿಜನ್​ ಪೂರೈಕೆ ಮಾಡುತ್ತಿದ್ದ ಏಜೆನ್ಸಿ ಅದನ್ನು ನಿಲ್ಲಿಸಿದ್ದೇ ಈ ಎಡವಟ್ಟಿಗೆ ಕಾರಣವಾದರೂ, ಅದು ಆಸ್ಪತ್ರೆಯ ಗಮನಕ್ಕೆ ಬರಲಿಲ್ಲವಾ ಎಂಬ ಪ್ರಶ್ನೆಯೂ ಮೂಡಿದೆ. ಅಲ್ಲೀಗ 350 ರೋಗಿಗಳಿಗೆ ತೀವ್ರ ಸಮಸ್ಯೆ ಎದುರಾಗಿದ್ದು, ಅವರನ್ನು ಬೇರೆ ಆಸ್ಪತ್ರೆಗಳಿಗೆ ಸಾಗಿಸಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ.

ಕಿಮ್ಸ್​ ಎದುರು ಸುಮಾರು 45 ಆಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿದ್ದು, ತೀವ್ರ ಅಪಾಯದಲ್ಲಿರುವ ರೋಗಿಗಳನ್ನು ವಿಕ್ಟೋರಿಯಾ, ಬೌರಿಂಗ್​ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡುವ ಸಿದ್ಧತೆಯಲ್ಲಿ ತೊಡಗಿವೆ. ಹಾಗೇ, ಕಿಮ್ಸ್​ನಲ್ಲಿಯೇ ತುರ್ತಾಗಿ ಆಕ್ಸಿಜನ್​ ವ್ಯವಸ್ಥೆ ಆಗದೆ ಹೋದರೆ, ಹಲವು ರೋಗಿಗಳ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net