ಕಿರ್ಗಿಸ್ತಾನಿಗಳಿಂದ ಇಸ್ಲಾಂ ಧರ್ಮ ಪ್ರಚಾರ!

crime fir
Published on

ಬೀದರ್: ಪ್ರವಾಸಿ ವೀಸಾ ಪಡೆದು ಇಸ್ಲಾಂ ಧರ್ಮ ಪ್ರಚಾರ ಮಾಡುತ್ತಿದ್ದ ಆರೋಪದ ಮೇರೆಗೆ ಕಿರ್ಗಿಸ್ತಾನದ 8 ಪ್ರಜೆಗಳು ಸೇರಿ 10 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಟೂರಿಸ್ಟ್ ವೀಸಾ ಮೇಲೆ ಬಂದಿದ್ದ 8 ಮಂದಿ ಕಿರ್ಗಿಸ್ತಾನಿಗಳು ಬೀದರ್​ನಲ್ಲಿ ಇಸ್ಲಾಂ ಧರ್ಮ ಪ್ರಚಾರ ಮಾಡುತ್ತಿದ್ದರು. ಧರ್ಮ ಪ್ರಚಾರಕರ ಭಾಷೆಯನ್ನು ಒಡಿಶಾದ ಇಬ್ಬರು ತರ್ಜುಮೆ ಮಾಡುತ್ತಿದ್ದರು.

ಪ್ರವಾಸಿ ವೀಸಾ ನಿಯಮ ಉಲ್ಲಂಘನೆ ಮತ್ತು ಧರ್ಮ ಪ್ರಚಾರ ಮಾಡಿರುವ ಸಂಬಂಧ ಆರೋಪಿಗಳ ವಿರುದ್ಧ ಬೀದರ್ ನಗರ ಪೊಲೀಸ್ ಠಾಣೆ ಮತ್ತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ತಲಾ 4 ಪ್ರಕರಣಗಳು ಮಾ. 15ರಂದು ದಾಖಲಾಗಿವೆ.

ಕರೊನಾ ಹಿನ್ನೆಲೆಯಲ್ಲಿ ನಗರದ ಓಲ್ಡ್ ಸಿಟಿಯ ರಟಕಲಪುರಾ ಮರ್ಕಜ್​ನಲ್ಲಿ (ಮಸೀದಿ) ಇವರನ್ನು 2 ತಿಂಗಳಿಂದ ಕ್ವಾರಂಟೈನ್ ಮಾಡಲಾಗಿತ್ತು. ಇವರಿಗೆ ಎರಡು ಬಾರಿ ಕರೊನಾ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ.

10 ಮಂದಿಯನ್ನೂ ಇಂದು(ಜೂ.3) ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಇಲ್ಲಿನ ಜೆಎಂಎಫ್​ಸಿ ಕೋರ್ಟ್, ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net