ಹಾರಂಗಿ ನಾಲೆಗೆ ಲಾರಿ ಸಮೇತ ಬಿದ್ದವನ ಬದುಕಲ್ಲಿ ಪವಾಡ!

hunasooru lorry
Published on

ಹುಣಸೂರು: ಇಲ್ಲಿನ ಯಶೋಧರಪುರ ಬಳಿ 100 ಅಡಿ ಆಳದ ಹಾರಂಗಿ ನಾಲೆಗೆ ಲಾರಿಯೊಂದು ಬಿದ್ದಿದ್ದು, ಆಶ್ಚರ್ಯಕರ ರೀತಿಯಲ್ಲಿ ಚಾಲಕ ಪಾರಾಗಿದ್ದಾನೆ.

ಮಂಗಳವಾರ ಪಿರಿಯಾಪಟ್ಟಣದಲ್ಲಿ ಕಾಫಿ ಬೂಸಾ ಮೂಟೆಗಳನ್ನು ಇಳಿಸಿ ನಂತರ ಹುಣಸೂರು ಮಾರ್ಗವಾಗಿ ಕೆ.ಆರ್​.ನಗರಕ್ಕೆ ಲಾರಿ ಸಾಗುತ್ತಿತ್ತು. ಯಶೋಧರಪುರ ಸಮೀಪ ಎದುರಿನಿಂದ ಬಂದ ವಾಹನದ ಬೆಳಕಿಗೆ ಲಾರಿ ಚಾಲಕ ಗಲಿಬಿಲಿಗೊಂಡಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹಾರಂಗಿ ನಾಲೆ ಕಡೆ ಸಾಗಿ 100 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ.

ಕೆ.ಆರ್​. ನಗರದ ನಿವಾಸಿ, ಚಾಲಕ ಮಹಮದ್​ ವಾಸಿಂಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್​ ಅಪಾಯದಿಂದ ಪಾರಾಗಿದ್ದಾನೆ. ಲಾರಿ ಸಂಪೂರ್ಣ ಜಖಂಗೊಂಡಿದೆ. ಈ ಲಾರಿ ಕೆ.ಆರ್​. ನಗರದ ಮಹಮದ್​ ಇಲ್ಯಾಸ್​ ಅವರದ್ದು.

ಬುಧವಾರ ಬೆಳಗ್ಗೆ ಜೆಸಿಬಿ ಮೂಲಕ ಲಾರಿ ಮೇಲೆತ್ತುವ ಕಾರ್ಯಾಚರಣೆ ನಡೆಯಿತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net