ಕುಂದಬಾರಂದಾಡಿ ಶಾಲೆ ಪ್ರಾರಂಭೋತ್ಸವ

gan-1
Published on

ಕುಂದಾಪುರ: ಬೈಂದೂರು ವಲಯದ ಕುಂದಬಾರಂದಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮರು ನಾಮಕರಣ, ಎಲ್‌ಕೆಜಿ, ಯುಕೆಜಿ ತರಗತಿಗಳ ಉದ್ಘಾಟನೆ ಹಾಗೂ ಪ್ರಾರಂಭೋತ್ಸವ ನಡೆಯಿತು.

ಶಾಲೆಯ ಪ್ರಧಾನ ಪೋಷಕ ಬಿ.ಎನ್.ಶೆಟ್ಟಿ ಉಪಸ್ಥಿತಿಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಿ.ಗೋಪಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಹಕ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಮೊಗವೀರ ನೂತನ ನಾಮಫಲಕ ಅನಾವರಣಾ ಹಾಗೂ ಪ್ರದೀಪ್ ಎಂ.ಚಂದನ್ ಕೆಜಿ ತರಗತಿಯನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಚಿತ್ತಾರ ನಿಶ್ಮಿತಾ ಅವರನ್ನು ಸನ್ಮಾನಿಸಿ, ಬಗ್ವಾಡಿ ಮೆತ್ತಿನ ಮನೆ ವೆಂಕಮ್ಮ ರಾಮಣ್ಣ ಶೆಟ್ಟಿ ಟ್ರಸ್ಟ್ ವತಿಯಿಂದ ತಲಾ 5 ಸಾವಿರ ರೂ. ನೀಡಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾನಿಕಾ ಬಗ್ವಾಡಿ ಹಾಗೂ ಅನ್ವಿತ್ ಕುವಾರ್‌ಗೆ ಶೋಭಾ ಬಿ.ಎನ್.ಶೆಟ್ಟಿ ಹೊಳ್ಮಗೆ ತಲಾ 10 ಸಾವಿರ ರೂ. ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿಗೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಸುಭಾಷ್ ಶೆಟ್ಟಿ ಹೊಳ್ಮಗೆ, ಕಲ್ಪನಾ ಅಶೋಕ್ ಕುವಾರ ಶೆಟ್ಟಿ, ಶಂಕರ ಹೆಗ್ಡೆ ಹೊಳ್ಮಗೆ, ಭಾಸ್ಕರ್ ಪೂಜಾರಿ, ರತ್ನಾ ಜಿ.ಶ್ರೀಯಾನ್, ರವೀಂದ್ರ ಶೆಟ್ಟಿ, ರಾವೇಂದ್ರ ಮೊಗವೀರ, ಸುನೀಲ್ ಮುಂಬೈ, ನಾಗೇಶ್ ನಾಯ್ಕ, ಸತೀಶ್, ಯೋಗೀಶ್, ಸತೀಶ್ ಶೆಟ್ಟಿ, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಲಯನ್ಸ್ ಕ್ಲಬ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಚೆನ್ನಕೇಶವ ಯುವಕ ಮಂಡಲ, ಚಿಕ್ಕು ಫ್ರೆಂಡ್ಸ್ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net