ಮಾರಾಳಿ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಬ್ರಹ್ಮಕಲಶೋತ್ಸವ

kon (3)
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ನಾಲ್ಕೂರು ಗ್ರಾಮದ ವಾರಾಳಿಯಲ್ಲಿ ನೂತನ ಶಿಲಾಮಯ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಶುಕ್ರವಾರ ಬ್ರಹ್ಮಕಲಶೋತ್ಸವ ಜರುಗಿತು.

ಬೆಳಗ್ಗೆ ದೇವತಾ ಕಾರ್ಯಕ್ರಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಶ್ರೀದೇವಿ ವಿರಾಟ್ ದರ್ಶನ, ಸುವಾಸಿನಿ ಪೂಜೆ, ಮಹಾಮಂತ್ರಾಕ್ಷತೆ ಮುಂತಾದ ಪೂಜೆಗಳು ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಕೈಲ್ಕೆರೆ ಕಿಶೋರ್ ಕುವಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಆನುವಂಶಿಕ ಮೊಕ್ತೇಸರ ವಿಠಲ ಶೆಟ್ಟಿ ವಾರಾಳಿಮನೆ ಉಪಸ್ಥಿತರಿದ್ದರು. ದಯಾನಂದ ಶೆಟ್ಟಿ ವಾರಾಳಿಮನೆ, ನಿತ್ಯಾನಂದ ಶೆಟ್ಟಿ ವಾರಾಳಿಮನೆ, ಸಚ್ಚಿದಾನಂದ ಶೆಟ್ಟಿ ವಾರಾಳಿಮನೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net