Monalisa:ಕೇರಳದ ಉದ್ಯಮಿ ಬಾಬಿ ಚೆಮ್ಮನೂರು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮಕ್ಕಾಗಿ ಮಹಾಕುಂಭಮೇಳದಲ್ಲಿ ಖ್ಯಾತಿಗಳಿಸಿದ ಮೋನಾ ಭೋಂಸ್ಲೆ ಇತ್ತೀಚಿಗೆ ಕೇರಳಕ್ಕೆ ಆಗಮಿಸಿದ ಹಿನ್ನೆಲೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ಅಲ್ಲದೆ, ಅಭಿಮಾನಿಗಳ ಬಗ್ಗೆ ಒಂದಿಷ್ಟು ಮಾತನಾಡಿದ್ದು, ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ.
ಇದನ್ನೂ ಓದಿ:ಸರ್ವಾಂಗೀಣ ವಿಕಾಸಕ್ಕೆ ಪಠ್ಯೇತರ ಚಟುವಟಿಕೆ ಅವಶ್ಯ
ಹೌದು, ‘ಮೊನಾಲಿಸಾ’ ಎಂದೇ ಪ್ರಸಿದ್ಧರಾದ 16 ವರ್ಷದ ಬಾಲಕಿ ಮೋನಾ ಭೋಂಸ್ಲೆ, ಕೋಝಿಕ್ಕೋಡ್‌ನಲ್ಲಿ ಒಂದು ಶೋ ರೂಂ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು, ಕೇರಳಕ್ಕೆ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ ಯುವ ತಾರೆಯನ್ನು ಸ್ಥಳದಲ್ಲಿ ನೆರೆದಿದ್ದ ಜನಸಮೂಹ ಅದ್ದೂರಿಯಾಗಿ ಸ್ವಾಗತಿಸಿದರು.
ಇದನ್ನೂ ಓದಿ:ಈ ಬ್ಯಾಂಕ್ನಲ್ಲಿ ಖಾತೆ ಇಲ್ಲದಿದ್ದರೂ FD ಇಡಬಹುದು; ಏನಿದು ಹೊಸ ಯೋಜನೆ: ಇಲ್ಲಿದೆ ಉಪಯುಕ್ತ ಮಾಹಿತಿ..
ಮೊನಾಲಿಸಾ ಮುಗುಳ್ನಗುತ್ತಾ ತನ್ನ ಅಭಿಮಾನಿಗಳತ್ತ ಕೈ ಬೀಸುತ್ತಾ, ಫ್ಯಾನ್ಸ್ ಸಂಭ್ರಮವನ್ನು ನೋಡುತ್ತಾ ಆನಂದಿಸಿದರು. ಬಳಿಕ ಮೊನಾಲಿಸಾ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲದೆ, ಕೇರಳದ ಭಾಷೆಯಲ್ಲೇ ಮಾತನಾಡಿದ್ದೂ ಅಲ್ಲಿ ನೆರದಿದ್ದ ಜನಸಮೂಹವು ಹರ್ಷೋದ್ಗಾರದಿಂದ ಕುಣಿದು ಕುಪ್ಪಳಿಸಿತು. ಮಲಿಯಾಳಂನಲ್ಲಿ ಮಾತನಾಡಿದ ಮೊನಾಲಿಸಾ “ನಮಸ್ತೆ ಕೇರಳ, ಎಲ್ಲಾರುಮ್ ಸುಖಮಲ್ಲೆ?” (ನಮಸ್ತೆ ಕೇರಳ, ಎಲ್ಲರೂ ಚೆನ್ನಾಗಿದ್ದಾರೆಯೇ?) ಎಂದು ಹೇಳುವುದನ್ನು ವೈರಲ್ ವೀಡಿಯೊದಲ್ಲಿ ಕೇಳಬಹುದು.
ಇಂದೋರ್‌ನಲ್ಲಿ ಹಾರ(ರುದ್ರಾಕ್ಷಿ) ಮಾರಾಟಗಾರ್ತಿಯಾಗಿದ್ದ ಈಕೆ ಇದೀಗ ಇಂಟರ್ನೆಟ್ ಸ್ಟಾರ್ ಸೆಲೆಬ್ರಿಟಿಯಾಗಿದ್ದಾರೆ. (ಏಜೆನ್ಸೀಸ್)
ಈ ಬ್ಯಾಂಕ್ನಲ್ಲಿ ಖಾತೆ ಇಲ್ಲದಿದ್ದರೂ FD ಇಡಬಹುದು; ಏನಿದು ಹೊಸ ಯೋಜನೆ: ಇಲ್ಲಿದೆ ಉಪಯುಕ್ತ ಮಾಹಿತಿ..