

ಕಾಸರಗೋಡು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಒಕ್ಕೂಟ(ಕೆಎಸ್‌ಎಸ್‌ಪಿಎ) ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಾರ್ಷಿಕ ಸಮಾವೇಶ ಕುಂಬಳೆಯಲ್ಲಿ ಇತ್ತೀಚೆಗೆ ಜರುಗಿತು. ಕೆ.ಎಸ್‌ಎಸ್‌ಪಿಎ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಸಿ.ಸುರೇಂದ್ರನ್ ನಾಯರ್ ಉದ್ಘಾಟಿಸಿದರು. ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವನಿತಾ ಕಮಿಟಿ ಸದಸ್ಯೆ ಸರೋಜಿನಿ, ಜಿಲ್ಲಾ ವನಿತಾ ಕಾರ್ಯದರ್ಶಿ ಜಯಲಕ್ಷ್ಮೀ, ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ಸೀತಾರಾಮ ಮಲ್ಲ ಹಾಗೂ ಬಾಬು ರಾಜ್ ಉಪಸ್ಥಿತರಿದ್ದರು.
ಮಂಜೇಶ್ವರ ವಿಧಾನಸಭಾ ಸಮಿತಿ ಕಾರ್ಯದರ್ಶಿ ಮಾಯಿಲ ನಾಯ್ಕ ಸ್ವಾಗತಿಸಿದರು. ಜಿಲ್ಲಾ ಕೌನ್ಸಿಲರ್ ಮೆರ್ಸಿ ಸಿ.ಜೆ. ವಂದಿಸಿದರು. ಪದಾಧಿಕಾರಿಗಳ ಆಯ್ಕೆ ನಡೆಯಿತು.ಯೂಸುಫ್ ಅಧ್ಯಕ್ಷ, ಮಾಯಿಲ ನಾಯ್ಕ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿ ರಾಧಾ ಕೃಷ್ಣನ್ ಅವರನ್ನು ಆಯ್ಕೆ ಮಾಡಲಾಯಿತು.