ಹಲ್ಲಿನ ಸುರಕ್ಷತೆ ಮಾಹಿತಿ

New Project (51)
Published on

ಸುಳ್ಯ: ಬ್ಯಾಂಕ್ ಆಫ್ ಬರೋಡಾ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು

ಆಶ್ರಯದಲ್ಲಿ ಹಲ್ಲಿನ ಸುರಕ್ಷತೆ ಮಾಹಿತಿ ಕಾರ್ಯಾಗಾರ, ಮಕ್ಕಳಿಗೆ ಟೂತ್‌ಪೇಸ್ಟ್ ಮತ್ತು ಟೂತ್‌ಬ್ರಶ್ ವಿತರಣಾ ಕಾರ್ಯಕ್ರಮ

ಸೋಣಂಗೇರಿ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಗುರುವಾರ ನಡೆಯಿತು.

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಿಇಒ ವಿಶ್ವನಾಥ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಸಂದೀಪ್ ಬಿ.ಎಸ್. ಮಾಹಿತಿ ನೀಡಿದರು. ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮನೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಬ್ಯಾಂಕ್ ಆಫ್ ಬರೋಡ ಶಾಖಾ ವ್ಯವಸ್ಥಾಪಕ ವಿಜಯ್, ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ತಿರುಮಲೇಶ್ವರಿ ಅರ್ಭಡ್ಕ ಶುಭ ಹಾರೈಸಿದರು. ಸಂಯೋಜಕರಾದ ಪ್ರಭಾಕರ ರೈ, ಸತೀಶ್ ಕೊಮ್ಮೆಮನೆ ಉಪಸ್ಥಿತರಿದ್ದರು. ಶಾಲಾ ನಾಯಕ ರಕ್ಷಿತ್ ಪ್ರಾರ್ಥಿಸಿದರು. ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.

ಅಂಗನವಾಡಿ ಹಾಗೂ ಶಾಲೆಯ ಮಕ್ಕಳಿಗೆ ಸಮಿತಿಯ ವತಿಯಿಂದ ಟೂತ್‌ಪೇಸ್ಟ್ ಮತ್ತು ಟೂತ್‌ಬ್ರಶ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net