ಕಾಸರಗೋಡು: ವಿಶ್ವ ಏಡ್ಸ್ ವಿರುದ್ಧ ದಿನಾಚರಣೆಯ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಎಆರ್‌ಟಿ ಸೆಂಟರ್ ಹಾಗೂ ಜನರಲ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಕೆಂಪು ರಿಬ್ಬನ್ ಮಾದರಿಯಲ್ಲಿ ದೀಪ ಬೆಳಗಿಸಲಾಯಿತು. ’ಕತ್ತಲೆಯಿಂದ ಬೆಳಕಿನೆಡೆಗೆ’ ಎಂಬ ಸಂದೇಶ ಸಾರುವ ಕ್ಯಾಂಡಲ್ ಬೆಳಗಿಸಿ ಮೆರವಣಿಗೆ ನಡೆಸಿದರು.
ಜನರಲ್ ಆಸ್ಪತ್ರೆ ಉಪ ಅಧೀಕ್ಷಕ ಡಾ.ಜಮಾಲ್ ಅಹಮದ್ ಮೆರವಣಿಗೆ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಡಾ.ಬಿ.ನಾರಾಯಣ ನಾಯ್ಕ ರೆಡ್ ರಿಬ್ಬನ್ ದೀಪ ಬೆಳಗಿಸಿದರು. ಐಎಂಎ ಕಾರ್ಯದರ್ಶಿ ಅಣ್ಣಪ್ಪ ಕಾಮತ್, ಎಆರ್‌ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ಫಾತಿಮಾ ಮುಬೀನಾ, ಕೆ.ಡಿ.ಎನ್.ಪಿ ಪ್ಲಸ್ ಯೋಜನಾ ನಿರ್ದೇಶಕ ಕುಞಿಕೃಷ್ಣನ್ ಮತ್ತು ಸಂಯೋಜಕಿ ಕೆ.ಪೂರ್ಣಿಮಾ ಉಪಸ್ಥಿತರಿದ್ದರು.
ಫಾರ್ಮಾಸಿಸ್ಟ್ ಸಿಎ ಯೂಸುಫ್, ಎಆರ್‌ಟಿ ಕೌನ್ಸಿಲರ್ ವಿ.ಅನಿಲ್ ಕುಮಾರ್, ಸ್ಟಾಫ್ ನರ್ಸ್ ಪ್ರಬಿತಾ, ಡಾಟಾ ಮ್ಯಾನೇಜರ್ ಪಿ.ಕೆ.ಸಿಂಧು, ಕಮ್ಯುನಿಟಿ ಕೇರ್ ಸಂಯೋಜಕಿ ಕೆ.ನಿಶಾ ಹಾಗೂ ಐಸಿಟಿಸಿ ಕೌನ್ಸಿಲರ್ ವೇದಾವತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಬೆಥನಿ ವಿದ್ಯಾಸಂಸ್ಥೆಯಿಂದ ಮೌಲ್ಯಾಧಾರಿತ ಶಿಕ್ಷಣ — ವಜ್ರ ಮಹೋತ್ಸವದಲ್ಲಿ ಡಾ.ಲಿಲ್ಲಿ ಪಿರೇರಾ ಹೇಳಿಕೆ