ಬೆಥನಿ ವಿದ್ಯಾಸಂಸ್ಥೆಯಿಂದ ಮೌಲ್ಯಾಧಾರಿತ ಶಿಕ್ಷಣ --- ವಜ್ರ ಮಹೋತ್ಸವದಲ್ಲಿ ಡಾ.ಲಿಲ್ಲಿ ಪಿರೇರಾ ಹೇಳಿಕೆ

mng--3 Dec Bethanii
Published on

ಮಂಗಳೂರು: ಶಾಲೆಗಳಲ್ಲಿ ಮೌಲ್ಯಾಧಾರಿತ ವಿಚಾರಧಾರೆಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಸದೃಢ ವ್ಯಕ್ತಿಗಳಾಗಿ ಮೂಡಿಬರಲು ಸಾಧ್ಯ. ಈ ನಿಟ್ಟಿನಲ್ಲಿ ಬೆಥನಿ ವಿದ್ಯಾಸಂಸ್ಥೆಯ ಕೊಡುಗೆ ಅನನ್ಯ ಎಂದು ಬೆಥನಿ ವಿದ್ಯಾಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ವಂ. ಭ. ಡಾ. ಲಿಲ್ಲಿ ಪಿರೇರಾ ಬಿ.ಎಸ್. ಹೇಳಿದರು.

ಬೆಥನಿ ವಿದ್ಯಾಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಅನುದಾನಿತ ಬಜಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ವಜ್ರ ಮಹೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದ್ವಿತೀಯ ಜಾನ್ ಪಾವ್ಲ್ ದೇವಾಲಯ ಬಜಪೆ ಇದರ ಧರ್ಮ ಗುರು ರೆ.ಫಾ.ಅನಿಲ್ ಲೋಬೊ ಆಶೀರ್ವಚನ ನೀಡಿದರು.

ರಾಯನ್ ಇಂಟರ್ ನ್ಯಾಷನಲ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಗ್ರೇಸ್ ಪಿಂಟೋ ಅವರ ಪರವಾಗಿ ಅವಿಟ ಡಿಸೋಜ ಶುಭ ಹಾರೈಸಿದರು.

ಉದ್ಯಮಿ ರಾಯ್ ಪ್ರಕಾಶ್ ಸಿಮ್ಸನ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ರಾಜಲಕ್ಷ್ಮೀ, ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೆಮ್ಸ್ ಕುಟಿನ್ಹೊ ಹಾಗೂ ಸ್ಥಳೀಯ ನಜರತ್ ಕಾನ್ವೆಂಟ್ ನ ಸುಪಿರಿಯರ್ ವಂ.ಭ. ಫ್ಲೋರಿನ್ ಜ್ಯೋತಿ ಬಿ.ಎಸ್.ಮುಖ್ಯ ಅತಿಥಿಯಾಗಿದ್ದರು.

ಈ ಸಂದರ್ಭ ದಕ್ಷಿಣ ಭಾರತ ವಲಯ ಮಟ್ಟದ ಶಾರ್ಟ್ ಗನ್ ಟ್ರಾಪ್ ಶೂಟಿಂಗ್ ಸ್ಪರ್ಧಾ ಕೂಟದ ಸತತ ಮೂರು ಬಾರಿ ಚಿನ್ನದ ಪದಕ ವಿಜೇತರಾದ ಸಾಮ್ಯುವೆಲ್ ಸಿಮ್ಸನ್ ಅವರಿಗೆ ವಿಶೇಷ ಗೌರವ ಪ್ರಧಾನ ಮಾಡಲಾಯಿತು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ 9 ಮಂದಿ ಶಿಕ್ಷಕರನ್ನು ಹಾಗೂ ದಾನಿಗಳನ್ನು ವಿಶೇಷವಾಗಿ ಗೌರವಿಸಲಾಯಿತು.

ವಜ್ರ ಮಹೋತ್ಸವದ ಅಂಗವಾಗಿ ನಡೆಸಿದ ಬೆಥನಿ ವಿದ್ಯಾ ಸಂಸ್ಥೆ ಮಂಗಳೂರು ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಅಂತರ್ ಶಾಲಾ ವಿವಿಧ ಸ್ಪರ್ಧಾಕೂಟಗಳ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎಂ.ಕೆ. ಅಶ್ರಫ್ ಉಪಸ್ಥಿತರಿದ್ದರು.

ಶಾಲಾ ಸಂಚಾಲಕಿ ಹಾಗೂ ಬೆಥನಿ ವಿದ್ಯಾ ಸಂಸ್ಥೆ ಮಂಗಳೂರು ಪ್ರಾಂತ್ಯದ ಪ್ರಾಂತ್ಯಧಿಕಾರಿಣಿಯವರ ಸಲಹೆಗಾರರಾದ ಭ.ಪ್ಲಾವಿಯ ವಿಲ್ಮಾ ಬಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಭಗಿನಿ ಜೆಸ್ಸಿ ಪ್ರೀಮ ಬಿ.ಎಸ್. ಸ್ವಾಗತಿಸಿದರು. ಶಿಕ್ಷಕ ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಲಿಲ್ಲಿ ಮಿನೇಜಸ್ ವಂದಿಸಿದರು. ಶಿಕ್ಷಕರಾದ ಪ್ರಶಾಂತ್, ಯಶೋಧ, ಧನ್ಯ, ನಯನ, ಗೀತಾಂಬ, ಶ್ರೀಜಾ,ರೇಣುಕಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net