More

    ಟೆಸ್ಟ್ ಶತಕ: ರಾಮಲಲ್ಲಾಗೆ ಅರ್ಪಿಸಿದ ಭರತ್​

    ಅಹಮದಾಬಾದ್‌: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವೆ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರ ಕೆಎಸ್ ಭರತ್ ಭರ್ಜರಿ ಶತಕ ಸಿಡಿಸಿದ ನಂತರ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ.

    ಇದನ್ನೂ ಓದಿ:ರಾಮಮಂದಿರ ಉದ್ಘಾಟನೆ: ಮುಸ್ಲಿಂ, ಕ್ರಿಶ್ಚಿಯನ್ನರು ವಿಶೇಷ ಪೂಜೆ, ಪ್ರಾರ್ಥನೆ ಮಾಡಲಿ

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆಎಸ್ ಭರತ್ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿ ಮಿಂಚಿದರು. ಬೌಂಡರಿ ಸಿಡಿಸುವ ಮೂಲಕ ಶತಕ ಪೂರೈಸಿದ ಭರತ್, ಬಿಲ್ಲನ್ನು ಹಿಡಿದು ಬಾಣ ಬಿಡುವ ಭಂಗಿಯನ್ನು ಪ್ರದರ್ಶಿಸಿ, ಭಗವಾನ್ ರಾಮನಿಗೆ ತಮ್ಮ ಶತಕವನ್ನು ಅರ್ಪಿಸಿದ್ದಾರೆ.

    ತಮ್ಮ ಶತಕದ ಸಂಭ್ರಮಾಚರಣೆಯ ವಿಡಿಯೋವನ್ನು ಕೆಎಸ್ ಭರತ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನೆನಪ್ಪಿನಲ್ಲಿಟ್ಟುಕೊಳ್ಳುವಂತಹದ್ದು, ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ.

    ಕೆಎಸ್ ಭರತ್ ಅವರ ಅಜೇಯ ಶತಕವು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ತಂಡದ ಹೋರಾಟ ಮಾಡಿದೆ. ಭರತ್ 165 ಎಸೆತಗಳಲ್ಲಿ ಅಜೇಯ 116 ರನ್ ಗಳಿಸಿದ್ದಾರೆ.

    ಕೆಎಸ್ ಭರತ್ ಇದುವರೆಗೆ ಟೀಂ ಇಂಡಿಯಾ ಪರ ಕೇವಲ 5 ಟೆಸ್ಟ್ ಪಂದ್ಯಗಳನ್ನಾಡಿದ್ದು 129 ರನ್ ಗಳಿಸಿದ್ದಾರೆ. ಕೆಎಸ್ ಭರತ್ ಅಲ್ಲದೆ ಇನ್ನಿಬ್ಬರು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ A ಪರ 64, 15 ಮತ್ತು 115 ರನ್‌ಗಳೊಂದಿಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ.

    ಕಲಾವಿದನ ಕೈಚಳಕದಲ್ಲಿ ಅರಳಿದ ಅಯೋಧ್ಯಾ ಶ್ರೀರಾಮಮಂದಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts