ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ ಅಕ್ರಮ: 12 ಅಭ್ಯರ್ಥಿಗಳಿಗೆ ಶಿಕ್ಷೆ

kpsc
Published on

ಬೆಂಗಳೂರು: ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಬಹಿರಂಗವಾದ ಬೆನ್ನಲ್ಲೇ, ಕರ್ನಾಟಕ ಲೋಕಸೇವಾ ಆಯೋಗ ತುಸು ಎಚ್ಚಂತೆ ಕಾಣುತ್ತಿದೆ. ಆಯೋಗದ ಎಡವಟ್ಟುಗಳಿಗೆ, ಅಕ್ರಮಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ಅವ್ಯವಹಾರ, ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಡುತ್ತಿದೆ. ಅಕ್ರಮ ದಾರಿಯಲ್ಲಿ ಸಾರ್ಕರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಂದವರಿಗೆ ಶಿಕ್ಷೆ ಇಲ್ಲವೇ ಎಂದೆಲ್ಲ ನಿಷ್ಟಾವಂತ ಅಭ್ಯರ್ಥಿಗಳು ಮೂದಲಿಸುತ್ತಿದ್ದಾರೆ. ಈ ನಡುವೆಯೇ ಎಸ್​ಡಿಎ ಎಕ್ಸಾಂನಲ್ಲಿ ಅಕ್ರಮ ಎಸಗಿದ ಅಭ್ಯರ್ಥಿಗಳಿಗೆ ಕೆಪಿಎಸ್​ಸಿ ಬಿಸಿ ಮುಟ್ಟಿಸಿದೆ.

2019ರ ಜೂನ್ 19ರಂದು ನಡೆದಿದ್ದ ದ್ವಿತೀಯ ದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಅಭ್ಯರ್ಥಿಗಳನ್ನು ಡಿಬಾರ್​ ಮಾಡಿ ಕೆಪಿಎಸ್​ಸಿ ಆದೇಶ ಹೊರಡಿಸಿದೆ. ಇದನ್ನೂ ಓದಿರಿ 2023ರಲ್ಲಿ ವಿಧಾನಸಭೆ ಎಲೆಕ್ಷನ್: ಮಂಡ್ಯದಲ್ಲಿ ಟಿಕೆಟ್​ಗಾಗಿ ಹಾಲಿ ಶಾಸಕ- ಮಾಜಿ ಸಂಸದರ ಫೈಟ್​

ಅಂದು ನಡೆದಿದ್ದ ಎಸ್​ಡಿಎ ಪರೀಕ್ಷೆಗೆ ಕೆಲವರು ಪಾನಮತ್ತರಾಗಿ ಬಂದು ಸಿಕ್ಕಿಬಿದ್ದಿದ್ದರು. ಕೆಲವರು ನಕಲಿ ಪ್ರವೇಶ ಪತ್ರ ತಂದಿದ್ದರು. ಇನ್ನೂ ಕೆಲವರು ಬ್ಲೂಟೂತ್ ಮೂಲಕ ಕಾಪಿ ಮಾಡುತ್ತಾ ರೆಡ್​ಹ್ಯಾಂಡ್​ ಅಗಿ ತಗಲಾಕಿಕೊಂಡಿದ್ದರು. ಒಂದಿಬ್ಬರು ಒಎಂಆರ್ ಶೀಟ್​ಗಳನ್ನೇ ಎಗರಿಸಿದ್ದರು. ಈ ಎಲ್ಲ ಪ್ರಕರಣದ ತನಿಖೆ ನಡೆಸಿದ್ದು, ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ 12 ಮಂದಿಯನ್ನು 3 ವರ್ಷ ಕಾಲ ಡಿಬಾರ್ ಮಾಡಲಾಗಿದೆ.

ಅಂಬ್ರೇಶ್, ಶಂಕರ್ ಗೌಡ, ಸಿದ್ದರಾಮ, ಪ್ರಿಯಾಂಕ ಕದಂ, ನಿಖಿತಾ ಖಲಾಲ್ ಸೇರಿದಂತೆ 12 ಮಂದಿ ಡಿಬಾರ್ ಆದವರು. ಈ 12 ಮಂದಿಯೂ ಮುಂದಿನ ಮೂರು ವರ್ಷ ಕೆಪಿಎಸ್​ಸಿ ನಡೆಸುವ ಪರೀಕ್ಷೆಗಳಲ್ಲಿ ಭಾಗವಹಿಸುವಂತಿಲ್ಲ. ರಾಜ್ಯಪತ್ರದ ಮೂಲಕ ಕೆಪಿಎಸ್​ಸಿ​ ಆದೇಶದ ಅಧಿಸೂಚನೆ ಪ್ರಕಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net