ಮುಸ್ಲಿಮರ ಮೀಸಲಾತಿ ರದ್ದು; ಜನತೆಗೆ ಈಗ ನಿಮ್ಮ ಉತ್ತರವೇನು: ಕಾಂಗ್ರೆಸ್​ ಟ್ವೀಟ್​

Congress BJP
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ವಿರುದ್ಧ ತನ್ನ ವಾಗ್ಧಾಳಿಯನ್ನು ಮುಂದುವರೆಸಿರುವ ಕರ್ನಾಟಕ ಕಾಂಗ್ರೆಸ್​ ಮುಸ್ಲಿಮರ ಮೀಸಲಾತಿ ರದ್ಧತಿ ವಿಚಾರವಾಗಿ ಸರಣಿ ಟ್ವೀಟ್​ ಮಾಡಿದೆ.

ಬಸವರಾಜ್​ ಬೊಮ್ಮಾಯಿ ಅವರೇ ಮೀಸಲಾತಿ ಘೋಷಣೆ ಬರೀ ನಿಮ್ಮ ರಾಜಕೀಯ ಗಿಮಿಕ್​ ಎಂದು ಕರ್ನಾಟಕ ಕಾಂಗ್ರೆಸ್​ ಸರಣಿ ಟ್ವಿಟ್​ ಮಾಡುವ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ಜನತೆಗೆ ಈಗ ನಿಮ್ಮ ಉತ್ತರವೇನು

ಬಸವರಾಜ್​ ಬೊಮ್ಮಾಯಿ ಅವರೇ ನಿಮ್ಮ ಮೀಸಲಾತಿ ಗಿಮಿಕ್​ ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜನತೆಗೆ ಈಗ ನಿಮ್ಮ ಉತ್ತರವೇನು, ಸಬೂಬುಗಳೇನು ಎಂದು ಪ್ರಶ್ನಿಸಿದೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಜಯಂತಿ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಸುಪ್ರೀಂ ಎತ್ತಿ ಹಿಡಿದಿದೆ ಹಾಗೂ ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಬೆತ್ತಲುಗೊಳಿಸಿದೆ ಎಂದು ಟೀಕಿಸಿದೆ.

ಅನುಷ್ಠಾನ ಅಸಾಧ್ಯ

ಅಧ್ಯಯನವಿಲ್ಲದೆ ಚುನಾವಣೆ ಗಿಮಿಕ್‌ಗಾಗಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಮೂಗಿಗೆ ತುಪ್ಪ ಸವರುವ ನಿರ್ದಾರ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಬಿಜೆಪಿ ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ.

ಅನುಷ್ಠಾನ ಅಸಾಧ್ಯ ಎಂಬುದು ಸುಪ್ರೀಂ ಹೇಳುವ ಮೂಲಕ ಬಿಜೆಪಿಯ ಕಿವಿ ಮೇಲೆ ಹೂವು ಇಡುವ ಪ್ರಯತ್ನವನ್ನು ಬಯಲುಗೊಳಿಸಿದೆ ಎಂದು ಸರಣಿ ಟ್ವೀಟ್​ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net