

ಮೊಹಾಲಿ: ಗುರುವಾರ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಆರಂಭಿಕ ಶುಭಮಾನ್ ಗಿಲ್ ಅರ್ಧಶತಕವನ್ನು ಗಳಿಸುವ ಮೂಲಕ ಜಿಟಿ ತಂಡದ ಗೆಲುವಿಗೆ ಆಸರೆಯಾಗಿದ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು 8 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 153 ರನ್ಗಳಿಸಿತ್ತು. ಗುರಿ ಬೆನ್ನತ್ತಿದ್ದ ಗುಜರಾತ್ ತಂಡವಯು 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ಗಳಿಸಿ ಗೆಲುವಿನ ನಗೆ ಬೀರಿತ್ತು.
ಇನ್ನು ಪಂಜಾಬ್ ಬೌಲರ್ಗಳಿಗೆ ಕಗ್ಗಂಟಾಗಿದ್ದ ಶುಭಮಾನ್ ಗಿಲ್ ಅವರ ವಿಕೆಟ್ ಅನ್ನು ಸ್ಯಾಮ್ ಕರ್ರನ್ 18ನೆ ಓವರ್ನಲ್ಲಿ ಕಬಳಿಸಿದ್ದರು. ಈ ವೇಳೆ ತಂಡದ ಮಾಲಕಿ ಪ್ರೀತಿ ಜಿಂಟಾ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶುಭಮಾನ್ ಗಿಲ್ ಔಟಾದ ವೇಳೆ ಪ್ರೀತಿ ಜಿಂಟಾ ಅವರು ನಟರಾದ ಸೋನು ಸೂದ್ ಹಾಗೂ ಅರ್ಬಾಜ್ ಖಾನ್ ಅವರೊಂದಿಗೆ ಸಂಭ್ರಮಿಸುತ್ತಿರುವ ಪೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ವಿಶೇಷವಾದ ಅಡಿಬರಹವನ್ನು ನೀಡುತ್ತಿದ್ದಾರೆ.