ಕೋಟತಟ್ಟು ಬಾರಿಕೆರೆ ಗ್ರಾಮಸ್ಥರ ಸೇವೆಯಾಟ

kotathattu
Published on

ಕೋಟ: ಇಲ್ಲಿನ ಕೋಟತಟ್ಟು ಬಾರಿಕೆರೆ ಗ್ರಾಮಸ್ಥರಿಂದ ಕೋಟ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮೇಳದ ಹರಕೆ ಸೇವೆಯಾಟ ಬುಧವಾರ ಕೋಟತಟ್ಟು ವ್ಯಾಪ್ತಿಯಲ್ಲಿ ಜರುಗಿತು.

ನಾರಾಯಣಮೂರ್ತಿ ಉಡುಪ ನೇತೃತ್ವದಲ್ಲಿ ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ ಸಮ್ಮುಖದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಪತಿ ಹೋಮ ನಡೆಯಿತು.

ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್, ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಕಾಂಚನ್, ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಗ್ರಾಮ ಲೆಕ್ಕಾಧಿಕಾರಿ ಚಲುವರಾಜು, ಸಹಾಯಕ ನಾರಾಯಣ ಗಿಳಿಯಾರು, ಗ್ರಾಮಸ್ಥರಾದ ರಾಜು ಮರಕಾಲ, ರಂಜಿತ್ ಕುಮಾರ್, ರವಿ ಕುಂದರ್, ಪ್ರಮೋದ್ ಆಚಾರ್, ವಿಜಯ ಪೂಜಾರಿ, ಬಸವ ಪೂಜಾರಿ, ಶ್ರೀಧರ ಗಾಣಿಗ, ಮನೋಹರ್ ಪೂಜಾರಿ, ಅಶೋಕ್ ಕುಂದರ್, ನರಸಿಂಹ ತಿಂಗಳಾಯ, ಅಭಿಜಿತ್, ರಾಘವೇಂದ್ರ ಪೂಜಾರಿ, ಗಣಪಣ್ಣ, ತಿಮ್ಮಣ್ಣ, ಶೀನ, ಸಂತೋಷ್ ಪೂಜಾರಿ, ಸುರೇಶ್ ಗಾಣಿಗ, ಉಮೇಶ್ ಪೂಜಾರಿ, ಸರಸ್ವತಿ ಪೂಜಾರಿ, ಅಕ್ಕಯ್ಯ ಗಾಣಿಗ ಉಪಸ್ಥಿತರಿದ್ದರು. ರಾತ್ರಿ ರಂಗನಾಯಕಿ ಪ್ರಸಂಗ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net