

ಕುಂದಾಪುರ: ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಮತ್ತು ಹಳೇ ವಿದ್ಯಾರ್ಥಿ ಸಂಘ ಆಶ್ರಯದಲ್ಲಿ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಮತ್ತು ಬೈಂದೂರು ಸಹಯೋಗದೊಂದಿಗೆ ಖಗೋಳ ವೀಕ್ಷಣೆ ಕಾರ್ಯಕ್ರಮ ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಾಮನಾಥ ಚಿತ್ತಾಲ್ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚಿತ್ತೂರು ಪ್ರೌಢಶಾಲೆ ಶಿಕ್ಷಕ ನಾರಾಯಣ ಮರಾಠಿ, ಮುಖ್ಯಶಿಕ್ಷಕ ಗಂಗಾಧರ ಬಂಟ್, ಎಸ್ಡಿಎಂಸಿ ಉಪಾಧ್ಯಕ್ಷೆ ಗಾಯತ್ರಿ ಕೊಡಂಚ, ಗುಜ್ಜಾಡಿ ಗ್ರಾಪಂ ಸದಸ್ಯರಾದ ಹರೀಶ್ ಮೇಸ್ತ ಮತ್ತು ತುಂಗ ಪೂಜಾರಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕಿ ಸಂಧ್ಯಾ ಗಾಂವ್ಕರ್, ರವೀಂದ್ರ ಕೋಡಿ, ರವಿ ಕಟಗೇರಿ, ಸಂದೇಶ ಕುಂದಾಪುರ, ಶಾಲೆ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿ ಸಂಘ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಖಗೋಳ ವಿಸ್ಮಯದ ಬಗ್ಗೆ ಸಂಪನ್ಮೂಲ ವ್ಯಕ್ತಿ, ಪ್ರೌಢಶಾಲಾ ಶಿಕ್ಷಕ ಗಾಂವ್ಕರ್ ಮಕ್ಕಳಿಗೆ ಪರಿಚಯ ಮಾಡಿ ಕೊಡುವ ಮೂಲಕ ಗ್ರಹಗಳು ಮತ್ತು ನಕ್ಷತ್ರಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಮಾಧವಿ ಸ್ವಾಗತಿಸಿದರು. ಬೈಂದೂರು ತಾಲೂಕು ಘಟಕ ಅಧ್ಯಕ್ಷ ಸತ್ಯನಾ ಕೊಡೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಶ್ರೀಧರ್ ನಿರೂಪಿಸಿದರು. ವಿಶ್ವನಾಥ್ ವಂದಿಸಿದರು.