

ಉಡುಪಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿಮಾರ್ಣಗೊಳ್ಳಲಿರುವ ಅನೆಕ್ಸ್ ಕೋರ್ಟ್ ಕಟ್ಟಡಕ್ಕೆ ಶುಕ್ರವಾರ ಹೈಕೋರ್ಟ್ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಗುದ್ದಲಿ ಪೂಜೆ ನೆರವೇರಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಮೀವುಲ್ಲ, ಪೋಕ್ಸೋ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವಾತ್ಸವ, ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್, ಪ್ರಧಾನ ಸಿವಿಲ್ ನ್ಯಾಯಾಧೀಶ ವಿನಾಯಕ ವಾಂಖಡೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಜೀತು ಆರ್.ಎಸ್., ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಬುತಾಹೀರ್, ವಕೀಲರ ಸಂಘದ ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್., ಹಿರಿಯ ವಕೀಲ ಶಶಿಕಾಂತ್ ಶೆಟ್ಟಿ, ಮೇರಿ ಶ್ರೇಷ್ಠಾ ಮತ್ತಿತರರು ಉಪಸ್ಥಿತರಿದ್ದರು.
ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ಈ ಕಟ್ಟಡ ನಿಮಾರ್ಣವಾಗಬೇಕು. ವಕೀಲರಿಗೆ ಗ್ರಂಥಾಲಯದ ಸಹಿತ ಎಲ್ಲ ಸೌಲಭ್ಯಗಳಿರಬೇಕು. ವಕೀಲರ ಸಂಘ ಬಲಾಢ್ಯವಾಗಿದ್ದರೆ ನ್ಯಾಯಾಧೀಶರಿಗೂ ಬಲ ಬರಲಿದೆ. ವಕೀಲರ ಸಂಘ ಅನೇಕ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ. ಇ.ಎಸ್.ಇಂದಿರೇಶ್ , ಹೈಕೋರ್ಟ್ ನ್ಯಾಯಮೂರ್ತಿ ಅನೆಕ್ಸ್ ಕಟ್ಟಡ ನಿಮಾರ್ಣಕ್ಕೆ ಸರ್ಕಾರದಿಂದ 15.14 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. 2ನೇ ಹಂತದ ಕಾಮಗಾರಿಗೂ ನೀಲನಕಾಶೆ ಸಿದ್ಧಪಡಿಸಲಾಗಿದೆ. ರೆನೋಲ್ಡ್ ಪ್ರವಿಣ್ ಕುಮಾರ್, ಅಧ್ಯಕ್ಷ , ಉಡುಪಿ ವಕೀಲರ ಸಂಘ.